ಕರ್ನಾಟಕ

karnataka

ಡ್ರಗ್ಸ್​ ಜಾಲ ನಂಟು ಪ್ರಕರಣ: ಪ್ರಮುಖ ಆರೋಪಿ ಚಪ್ಪಿಗಾಗಿ ಸಿಸಿಬಿಯಿಂದ ತೀವ್ರ ಶೋಧ

ಮಾದಕ ಜಾಲ ನಂಟಿನ ಕಿಂಗ್​ ಪಿನ್ A1 ಶಿವಪ್ರಕಾಶ್ ಅಲಿಯಾಸ್ ಚಪ್ಪಿ ಇದುವರೆಗೂ ಪತ್ತೆಯಾಗಿಲ್ಲ. ಬಂಧಿತ ಎಲ್ಲಾ ಆರೋಪಿಗಳೊಂದಿಗೆ ಚಪ್ಪಿ ಡ್ರಗ್ಸ್​​ ವ್ಯವಹಾರ ಮಾಡ್ತಿದ್ದ ಎನ್ನಲಾಗಿದ್ದು, ಈತನಿಗಾಗಿ ಸಿಸಿಬಿ ತೀವ್ರ ಶೋಧ ನಡೆಸುತ್ತಿದೆ.

By

Published : Sep 21, 2020, 1:48 PM IST

Published : Sep 21, 2020, 1:48 PM IST

CCB sarch for main accused of Bengaluru drug case
ಡ್ರಗ್​ ದಂಧೆಯ ಪ್ರಮುಖ ಆರೋಪಿಗಾಗಿ ಸಿಸಿಬಿ ಶೋಧ

ಬೆಂಗಳೂರು:ಸ್ಯಾಂಡಲ್​ವುಡ್​ಗೆ​ ಡ್ರಗ್ಸ್​​ ಜಾಲದ ನಂಟು ಆರೋಪ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಪ್ರಕರಣದ ಪ್ರಮುಖ ಆರೋಪಿ ಪತ್ತೆಯಾಗದಿರುವುದು ತಲೆನೋವಾಗಿ ಪರಿಣಮಿಸಿದೆ.

ಪ್ರಕರಣದಲ್ಲಿ ಈಗಾಗಲೇ 17 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಆದರೆ, ಮಾದಕ ಜಾಲ ನಂಟಿನ ಕಿಂಗ್​ ಪಿನ್ A1 ಶಿವಪ್ರಕಾಶ್ ಅಲಿಯಾಸ್ ಚಪ್ಪಿ ಇದುವರೆಗೂ ಪತ್ತೆಯಾಗಿಲ್ಲ. ಬಂಧಿತ ಎಲ್ಲಾ ಆರೋಪಿಗಳೊಂದಿಗೆ ಚಪ್ಪಿ ಡ್ರಗ್ಸ್​​ ವ್ಯವಹಾರ ಮಾಡ್ತಿದ್ದ ಎನ್ನಲಾಗ್ತಿದೆ. ಹೀಗಾಗಿ ಆತನನ್ನು ಪ್ರಮುಖ ಆರೋಪಿಯಾಗಿ ಪರಿಗಣಿಸಲಾಗಿದೆ.

ಎಸ್ಕೇಪ್ ಆಗೋಕೆ ತೆರೆ ಮರೆಯಲ್ಲಿ ಚಪ್ಪಿ ಕಸರತ್ತು:

ಆರೋಪಿ ಚಪ್ಪಿ ಬಗ್ಗೆ ಹಲವಾರು ರೋಚಕ ಮಾಹಿತಿಗಳನ್ನು ಸಿಸಿಬಿ ಅಧಿಕಾರಿಗಳು ಕಲೆಹಾಕಿದ್ದಾರೆ. ತಲೆಮರೆಸಿಕೊಂಡಿರುವ ಈತ, ವಕೀಲರ ಮೂಲಕ ಸಿಸಿಬಿ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಚಪ್ಪಿ ಪೊಲೀಸರ ಕೈಗೆ ಸಿಗದೆ, ನೇರವಾಗಿ ನ್ಯಾಯಾಲಯಕ್ಕೆ ಶರಣಾಗಲು ನಿರ್ಧರಿಸಿದ್ದಾನೆ ಎಂದು ತಿಳಿದು ಬಂದಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹಾಜರಾಗಬೇಕು. ಹೀಗಾಗಿ, ತಾನೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಯಲಕ್ಕೆ ಹಾಜರಾಗಲು ಆರೋಪಿ ಚಪ್ಪಿಗೆ ಸಾಧ್ಯವಿಲ್ಲ. ಇದು ಈತನಿಗೆ ಸಂಕಷ್ಟವನ್ನು ತಂದಿಟ್ಟಿದ್ದು, ವಕೀಲರ ಮೂಲಕ ತಪ್ಪಿಸಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಲಾಗ್ತಿದೆ. ಈ ವಿಚಾರ ಕೂಡ ಸಿಸಿಬಿಗೆ ತಿಳಿದಿದೆ.

ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಪ್ಪಿ, ಬಂಧನವಾದರೆ ಪ್ರಕರಣಕ್ಕೆ ದೊಡ್ಡ ತಿರುವು ಸಿಗಲಿದೆ. ಆತ ನೀಡುವ ಮಾಹಿತಿ ಅಧರಿಸಿ, ಮಾದಕ ಜಾಲದೊಂದಿಗೆ ನಂಟು ಇರಿಸಿಕೊಂಡಿದ್ದವರ ಜನ್ಮ ಜಾಲಾಡಲು ಸುಲಭವಾಗುತ್ತದೆ. ಹೀಗಾಗಿ, ಚಪ್ಪಿಗಾಗಿ ತೀವ್ರ ಹುಡುಕಾಟ ನಡೆಸಲಾಗ್ತಿದೆ. ಆರೋಪಿ ಚಪ್ಪಿ, ನಟಿ ರಾಗಿಣಿಯ ಆಪ್ತನಾಗಿದ್ದು, ಈತನ ಬಂಧನವಾದರೆ ರಾಗಿಣಿಯ ಇನ್ನೊಂದು ಮುಖವೂ ಬಯಲಾಗುವ ಸಾಧ್ಯತೆಯಿದೆ.

ABOUT THE AUTHOR

...view details