ಕರ್ನಾಟಕ

karnataka

ETV Bharat / state

ಅಂತಾರಾಷ್ಟ್ರೀಯ‌ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಹಣ ಗಳಿಸುತ್ತಿದ್ದ ಜಾಲ ಅಂದರ್​ - CCB arrested accused who converting international calls into local calls

ಅನಧಿಕೃತವಾಗಿ ಟೆಲಿಫೋನ್ ಎಕ್ಸ್​ಚೇಂಜ್ ಮಾಡಿ ಅಂತಾರಾಷ್ಟ್ರೀಯ‌ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಕೇರಳ ಮೂಲದ ಒಂದು ಗುಂಪನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ccb-arrested-accused-who-are-earning-money-by-converting-international-calls-into-local-calls
ಅಂತರಾಷ್ಟ್ರೀಯ‌ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಹಣ ಗಳಿಸುತ್ತಿದ್ದ ಜಾಲ ಬೇಧಿಸಿದ ಸಿಸಿಬಿ ಪೊಲೀಸರು

By

Published : Jun 1, 2022, 4:41 PM IST

ಬೆಂಗಳೂರು: ರಾಷ್ಟ್ರೀಯ ಭದ್ರತೆಗೆ ತೊಡಕು ಹಾಗೂ ಅನಧಿಕೃತವಾಗಿ ಟೆಲಿಪೋನ್ ಎಕ್ಸ್​ಚೇಂಜ್ ಮಾಡಿ ಭಾರತೀಯ ದೂರ ಸಂಪಕ ಇಲಾಖೆಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಕೇರಳ ಮೂಲದ ಒಂದು ಗುಂಪನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ‌ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ 10 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ರಾಜಧಾನಿಯಲ್ಲಿ‌ ಐಕಾನ್‌ ಟೂರ್ಸ್​ ಆ್ಯಂಡ್ ಟ್ರಾವೆಲ್ಸ್ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದ ಆರು ಮಂದಿ‌ ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳನ್ನು ಕೇರಳದ ರವಿಚಂದ್ರ, ಸುಬೇರ್, ಮನು, ಇಸ್ಮಾಯಿಲ್ ಅಬ್ದುಲ್ಲಾ, ಸಾಹಿರ್ ಹಾಗೂ ಜೋಹರ್ ಶರೀಫ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಏಳು ಲ್ಯಾಪ್ ಟಾಪ್, 204 ಸಿಮ್ ಕಾರ್ಡ್ ,14 ಸಿಮ್ ಬಾಕ್ಸ್ , ಇಂಟರ್ ನೆಟ್ ವೈಫೈ ರೂಟರ್ಸ್ ಹಾಗೂ 9 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಅಂತರಾಷ್ಟ್ರೀಯ‌ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಹಣ ಗಳಿಸುತ್ತಿದ್ದ ಜಾಲ ಬೇಧಿಸಿದ ಸಿಸಿಬಿ ಪೊಲೀಸರು

ಆರೋಪಿಗಳು ನಗರದ ಮಹದೇವಪುರದಲ್ಲಿ ಸ್ಥಳೀಯ ವ್ಯಕ್ತಿ ಜೊತೆ ಸೇರಿಕೊಂಡು ಕಾಲ್ ಸೆಂಟರ್ ಗಳಿಗೆ ನೀಡಲಾಗಿದ್ದ ಏರ್ ಟೆಲ್ SIP Trunk Call Device ನ್ನು ಪಡೆದು Icon Tours and Travels ಎಂಬ ಹೆಸರಿನಲ್ಲಿ ಕಂಪನಿ ಎಂದು ದಾಖಲೆ ಸೃಷ್ಟಿಸಿದ್ದಾರೆ. ಬಳಿಕ ಏರ್‌ಟೆಲ್ ಕಂಪನಿಯ 180 ಪೋರ್ಟ್‌ಗಳಿರುವ ದೂರವಾಣಿ ಪಡೆದುಕೊಂಡು, ಅನಧಿಕೃತವಾಗಿ ಟೆಲಿಪೋನ್ ಕರೆಗಳನ್ನು ಪರಿವರ್ತಿಸುವ ಉಪಕರಣಗಳನ್ನು ಇಟ್ಟುಕೊಂಡು (Voice Over Internet Protocol) ಕರೆಗಳನ್ನು ಸ್ಥಳೀಯ GSM ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು. ನಗರದ ಹೆಸರಘಟ್ಟ ರಸ್ತೆಯ ಚಿಕ್ಕಸಂದ್ರ ಮುಖ್ಯ ರಸ್ತೆ ಬಳಿ ಬಾಡಿಗೆ ಮನೆ ಪಡೆದು ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಹಾಗೂ ಇತರೆ ರಾಜ್ಯದ ಬಿಎಸ್‌ಎನ್‌ಎಲ್ ಸಿಮ್‌ ಕಾರ್ಡ್‌ ಪಡೆದು ಸಿಮ್ ಬಾಕ್ಸ್ ಡಿವೈಸ್ ಗಳಿಗೆ ಅಳವಡಿಸಿಕೊಂಡು ಖಾಸಗಿ ಕಂಪನಿಯ ಇಂಟರ್‌ನೆಟ್ ಬಳಸಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಅಕ್ರಮ ದೂರವಾಣಿ ಸಂಪರ್ಕವನ್ನು ನಿರ್ಮಿಸಿಕೊಂಡಿದ್ದರು ಎಂದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು

ಏನಿದು ಟೆಲಿಪೋನ್ ಎಕ್ಸ್ ಚೇಂಜ್: ಅಂತಾರಾಷ್ಟ್ರೀಯ‌ ಕರೆಗಳಿಗೆ ಒಂದು ನಿಮಿಷಕ್ಕೆ 10 ರೂಪಾಯಿ ಇದ್ದರೆ, ಅಕ್ರಮ ಮಾರ್ಗದ ಮೊರೆ ಹೋದರೆ ಕೇವಲ ಒಂದು ರೂ. ನಲ್ಲಿ ಕರೆ ಮಾಡಬಹುದು. ಹೀಗೆ‌ ಆರೋಪಿಗಳು ಒಂದು ತಿಂಗಳಲ್ಲಿ 17 ಲಕ್ಷ ಹಣ ಗಳಿಸಿದ್ದರು. ಇವರ ಗಳಿಕೆಗಿಂತ ಹತ್ತು ಪಟ್ಟು ಹೆಚ್ಚು ಹಣವನ್ನು ಸರ್ಕಾರಕ್ಕೆ ವಂಚಿಸಿದ್ದರು‌. ಅಲ್ಲದೆ ಇಂಟರ್ ನ್ಯಾಷನಲ್ ಕರೆ ಮೂಲಕ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗ್ತಿದೆ. ದುಬೈ ಮೂಲದ ಪುತ್ತೂರಿನ ವ್ಯಕ್ತಿಯೋರ್ವನಿಗೆ ಬೆದರಿಗೆ ಹಾಕಿದ್ದ ಪ್ರಕರಣವು ಈ ಹಿಂದೆ ದಾಖಲಾಗಿತ್ತು.

ಹೇಗೆ ಅಪರಾಧ ನಡೆಯುತ್ತದೆ : ಇದು ಒಂದು ರೀತಿ ಫೋನ್ ಕರೆಗಳ ಡಾರ್ಕ್ ವೆಬ್‌ ಇದ್ದ ಹಾಗೆ. ಕರೆ ಮಾಡಿದವರ ಮೊಬೈಲ್ ಸಂಖ್ಯೆ ಕರೆ ಸ್ವೀಕರಿಸಿದ ವ್ಯಕ್ತಿಗೆ ಗೊತ್ತಾಗುವುದಿಲ್ಲ. ಬದಲಾಗಿ ಬೇರೆ ನಂಬರ್ ನಿಂದ ಕರೆ ಬಂದ ರೀತಿಯಲ್ಲಿ ಕಾಣಿಸುತ್ತದೆ. ಹೀಗಾಗಿ ಕೇಸ್ ದಾಖಲಾದರೂ ಯಾರು ಕರೆ ಮಾಡಿದ್ದರು ಎಂಬ ಬಗ್ಗೆ ಗೊತ್ತೇ ಆಗುವುದಿಲ್ಲ. ಯಾಕೆಂದರೆ ಬಂದ ಕರೆಯ ಸಿಡಿಆರ್ ಪಡೆದರೆ ಆ ಸಂಖ್ಯೆಯ ಉಳಿದ ಮಾಹಿತಿಗಳು ಲಭ್ಯವಾಗುವುದಿಲ್ಲ. ಹೀಗಾಗಿ ಅಪರಾಧ ಕೃತ್ಯಕ್ಕೆ ಇದು ಬಳಕೆಯಾಗುತ್ತದೆ.

ಓದಿ :ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

For All Latest Updates

TAGGED:

ABOUT THE AUTHOR

...view details