ಕರ್ನಾಟಕ

karnataka

ETV Bharat / state

ಸಂಜೆ ವೇಳೆಗೆ ಡಿಕೆಶಿ ಭವಿಷ್ಯ ನಿರ್ಧಾರ: ಮನೆ ಸುತ್ತ ಪೊಲೀಸ್​ ಬಿಗಿ ಭದ್ರತೆ - security tighten near d k shivakumar house

ಸದಾಶಿವನಗರದ ಡಿಕೆಶಿ ಮನೆಯ ಮೊದಲ ಮತ್ತು 3ನೇ ಮಹಡಿಯಲ್ಲಿ 8 ಮಂದಿ ಅಧಿಕಾರಿಗಳ ತಂಡದಿಂದ‌ ಶೋಧಕಾರ್ಯ ನಡೆಯುತ್ತಿದೆ. ಇನ್ನೇನು ಕೆಲ ಹೊತ್ತಿನಲ್ಲಿ ಪಂಚನಾಮೆ ಕಾರ್ಯವನ್ನು ಸಿಬಿಐ ಅಧಿಕಾರಿಗಳು ನಡೆಸಲಿದ್ದಾರೆ. ಅಲ್ಲದೆ ಸಂಜೆ ವೇಳೆಗೆ ಡಿಕೆಶಿ ಭವಿಷ್ಯ ನಿರ್ಧಾರವಾಗಲಿದೆ.

dk-shivakumar
ಡಿಕೆ ಶಿವಕುಮಾರ್

By

Published : Oct 5, 2020, 2:27 PM IST

ಬೆಂಗಳೂರು: ಡಿಕೆಶಿ ಸಹೋದರ ಮನೆಗಳ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೆ 4 ಗಂಟೆ ವೇಳೆಗೆ ಡಿ ಕೆ ಶಿವಕುಮಾರ್​​​ ಭವಿಷ್ಯ ನಿರ್ಧಾರವಾಗಲಿದೆ. ‌ಸತತ 5 ಗಂಟೆಗಳಿಂದ ಡಿಕೆಗೆ ಸಂಬಂಧಿಸಿದ 14 ಕಡೆ ಸಿಬಿಐ ಪರಿಶೀಲನೆ ನಡೆಯುತ್ತಿದೆ.

ಸದಾಶಿವನಗರದ ಡಿಕೆಶಿ ಮನೆಯ ಮೊದಲ ಮತ್ತು 3ನೇ ಮಹಡಿಯಲ್ಲಿ 8 ಮಂದಿ ಅಧಿಕಾರಿಗಳ ತಂಡದಿಂದ‌ ಶೋಧಕಾರ್ಯ ನಡೆಯುತ್ತಿದ್ದು, ಇನ್ನೇನು ಕೆಲ ಹೊತ್ತಿನಲ್ಲಿ ಪಂಚನಾಮೆ ಕಾರ್ಯವನ್ನು ಸಿಬಿಐ ಅಧಿಕಾರಿಗಳು ನಡೆಸಲಿದ್ದಾರೆ.

ಈಗಾಗಲೇ ಪ್ರಿಂಟರ್ ಮತ್ತು ಹಣ ಎಣಿಕೆ ಮಿಷನ್ ತಂದಿದ್ದು, ಕೆಲವೇ ಕ್ಷಣದಲ್ಲಿ ಪಂಚನಾಮೆ ಆರಂಭವಾಗಲಿದೆ. ಮತ್ತೊಂದೆಡೆ ಪ್ರತಿಭಟನೆ ಕಾವು ಹೆಚ್ಚಳ ಹಿನ್ನೆಲೆ ಮೂವರು ಡಿಸಿಪಿ ನೇತೃತ್ವದಲ್ಲಿ ಡಿಕೆಶಿ ಮನೆ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿದೆ.

ಸದ್ಯ ಬೆಂಗಳೂರು ಹಾಗೂ ದೆಹಲಿ ಸಿಬಿಐ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಡಿಕೆ ಬ್ರದರ್ಸ್ ಮನೆಯಲ್ಲಿ ಶೋಧ ಮುಂದುವರಿಸಿದ್ದಾರೆ.

ABOUT THE AUTHOR

...view details