ಕರ್ನಾಟಕ

karnataka

ಬುರೆವಿ ಚಂಡಮಾರುತದ ಎಫೆಕ್ಟ್​: ಬೆಂಗಳೂರಲ್ಲಿ ತುಂತುರು ಮಳೆ

By

Published : Dec 3, 2020, 11:58 AM IST

Updated : Dec 3, 2020, 12:27 PM IST

ಬುರೆವಿ ಚಂಡಮಾರುತದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಕೆಲವೆಡೆ ತುಂತುರು ಮಳೆಯಾಗುತ್ತಿದೆ.

ಸಿಲಿಕಾನ್​ ಸಿಟಿಯಲ್ಲಿ ತುಂತುರು ಮಳೆ
ಸಿಲಿಕಾನ್​ ಸಿಟಿಯಲ್ಲಿ ತುಂತುರು ಮಳೆ

ಬೆಂಗಳೂರು: ಬುರೆವಿ ಚಂಡಮಾರುತದ ಪರಿಣಾಮದಿಂದ ಸಿಲಿಕಾನ್​ ಸಿಟಿಯಲ್ಲಿ ದಟ್ಟ ಮೋಡ ಕವಿದ ವಾತಾವರಣವಿದೆ. ಶೀತಗಾಳಿ ಬೀಸುತ್ತಿದೆ. ಅಷ್ಟೇ ಅಲ್ಲದೆ, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.

ನೈರುತ್ಯ ಬಂಗಾಳ ಉಪಸಾಗರದಲ್ಲಿ ಸೈಕ್ಲೋನ್ ಅಬ್ಬರಿಸುತ್ತಿದೆ. ಇದರ ಎಫೆಕ್ಟ್‌ ಉದ್ಯಾನ ನಗರಿಗೂ ತಟ್ಟಿದೆ. ಕಳೆದ ರಾತ್ರಿ ವೇಳೆ ಈ ಸೈಕ್ಲೋನ್ ಶ್ರೀಲಂಕಾ ಕರಾವಳಿ ದಾಟಿ, ಪಶ್ಚಿಮ ದಿಕ್ಕಿನಲ್ಲಿ ಚಲಿಸಿ ಇಂದು ಕನ್ಯಾಕುಮಾರಿ ಪ್ರದೇಶಕ್ಕೆ ತಲುಪಿದೆ. ಹೀಗಾಗಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ.

ಬೆಂಗಳೂರಿನ ಅಲ್ಲಲ್ಲಿ ಮಳೆ

ಓದಿ:ಚಿತ್ರಕಲೆಯಲ್ಲಿ ಮಿಂಚಿದ ಶಿರಸಿ ಯುವಕ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದ ಸಾಧಕ

ಇಂದು ಮತ್ತು ನಾಳೆ ಸಾಧಾರಣ ಮಳೆಯಾಗಲಿದೆ. ಡಿ.5 ಹಾಗೂ 6ರಂದು ಅಲ್ಲಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯಲ್ಲಿ ಡಿ.3,4,6ರಂದು ಅಲ್ಲಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.

Last Updated : Dec 3, 2020, 12:27 PM IST

ABOUT THE AUTHOR

...view details