ಕರ್ನಾಟಕ

karnataka

ETV Bharat / state

ಟ್ರಾನ್ಸ್​ಫಾರ್ಮರ್‌ ಗೈ ವೈರ್‌‌ ಎಳೆದು ಚಿಂದಿ ಆಯುವ ಬಾಲಕ ಸಾವು: ಬೆಸ್ಕಾಂ ಸ್ಪಷ್ಟನೆ - transformer guy wire

ಬಾಲಕನ ಸಾವು ಬೆಸ್ಕಾಂ ನಿರ್ಲಕ್ಷ್ಯದಿಂದ ಸಂಭವಿಸಿರುವುದಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Boy pulled transformer gear wire died by electrocution in Bengaluru
ಟ್ರಾನ್ಸ್​ಫಾರ್ಮರ್‌ ಗೇರ್‌ ವೈರ್‌‌ ಎಳೆದ ಚಿಂದಿ ಆಯುವ ಬಾಲಕ: ವಿದ್ಯುತ್ ಸ್ಪರ್ಶಕ್ಕೆ ಸಾವು

By ETV Bharat Karnataka Team

Published : Jan 18, 2024, 12:59 PM IST

ಬೆಂಗಳೂರು: ರಸ್ತೆ ಪಕ್ಕದ ಟ್ರಾನ್ಸ್​ಫಾರ್ಮರ್‌ ಬಳಿ ಹಾಕಿರುವ ಗೈ ವೈರ್‌ ಎಳೆಯಲು ಹೋದಾಗ ಆಕಸ್ಮಿಕವಾಗಿ ತಗುಲಿದ ವಿದ್ಯುತ್‌ ಸ್ಪರ್ಶಕ್ಕೆ ಚಿಂದಿ ಆಯುವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಸಮೀಪ ಗುರುವಾರ ನಡೆದಿದೆ. ಬಾಲಕನನ್ನು ಎಂಟು ವರ್ಷದ ನಾಗೇಂದ್ರ ಎಂದು ಗುರುತಿಸಲಾಗಿದೆ.

ಬಾಲಕ ಇಂದು ಬೆಳಗ್ಗೆ ಚಿಂದಿ ಆಯುವ ಸಂದರ್ಭದಲ್ಲಿ ಟ್ರಾನ್ಸ್​ಫಾರ್ಮರ್​ಗೆ ಹೊಂದಿಕೊಂಡಿರುವ ಚರಂಡಿ ಬಳಿ ಇರುವ ಗೈ ವೈರ್‌ ಅನ್ನು ಬಲವಾಗಿ ಎಳೆದಿದ್ದಾನೆ. ಈ ಸಂದರ್ಭದಲ್ಲಿ ಗೈ ವೈರ್‌ ಎಲ್​ಟಿ ಕಿಟ್​ಗೆ ತಾಗಿ ವಿದ್ಯುತ್ ಸ್ಪರ್ಶದಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಸ್ಕಾಂ ಅಧಿಕಾರಿಗಳು, "ಇದು ಬೆಸ್ಕಾಂ ನಿರ್ಲಕ್ಷ್ಯದಿಂದ ಸಂಭವಿಸಿರುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು, "ಎಲೆಕ್ಟ್ರಿಕಲ್‌ ಇನ್​​ಸ್ಪೆಕ್ಟರ್‌ ಅವರ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.

"ಚಿಕ್ಕಾಬಳ್ಳಾಪುರ- ಗೌರಿಬಿದನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜೊತೆಗೆ ಟ್ರಾನ್ಸ್​ಫಾರ್ಮರ್‌ ಬಳಿ ಇರುವ ಚರಂಡಿ ದುರಸ್ತಿ ಕಾರ್ಯ ಕೂಡ ನಡೆಯುತ್ತಿದೆ. ಬಾಲಕ, ಚರಂಡಿ ಆಚೆ ಇರುವ ಗೈ ವೈರ್‌ ಅನ್ನು ಎಳೆದ ಪರಿಣಾಮ ಈ ಘಟನೆ ಸಂಭವಿಸಿದೆ" ಎಂದು ಸ್ಥಳಕ್ಕೆ ಭೇಟಿ ನೀಡಿರುವ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ರಾಜಸ್ಥಾನ: ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಾವು

ABOUT THE AUTHOR

...view details