ಕರ್ನಾಟಕ

karnataka

By

Published : Jun 23, 2021, 8:26 PM IST

Updated : Jun 23, 2021, 8:57 PM IST

ETV Bharat / state

ದಿನಕ್ಕೆ ಕೋಟಿಗಟ್ಟಲೇ ಆದಾಯ ತಂದುಕೊಡುತ್ತಿದ್ದ KSRTC, BMTC ಅನ್​ಲಾಕ್​ ಬಳಿಕ ಗಳಿಸಿದ್ದೆಷ್ಟು?

40-45 ಲಕ್ಷ ಪ್ರಯಾಣಿಕರು ಓಡಾಡುವ ಮೂಲಕ ಒಂದು ದಿನಕ್ಕೆ ಬರೋಬ್ಬರಿ 5 ಕೋಟಿ ಆದಾಯ ಗಳಿಸುತ್ತಿದ್ದ ಬಿಎಂಟಿಸಿ ನಿಗಮ ಲಾಕ್​ಡೌನ್​ ಬಳಿಕ ಎಷ್ಟು ಆದಾಯ ಸಂಗ್ರಹ ಮಾಡಿದೆ ಗೊತ್ತಾ? ನಿಗಮದ ಇವತ್ತಿನ ಆದಾಯ ಇಷ್ಟಿದೆ.

BMTC two-day revenue collection
BMTC two-day revenue collection

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ಹರಡುವ ಹಿನ್ನೆಲೆಯಲ್ಲಿ ಜನಸಂದಣಿ ಸೇರುವ ಸ್ಥಳಗಳಿಗೆ ಸರ್ಕಾರ ಬ್ರೇಕ್ ಹಾಕಿತ್ತು. ಹಾಗಾಗಿ ಬರೋಬ್ಬರಿ ಒಂದೂವರೆ ತಿಂಗಳುಗಳ ಕಾಲ ಎಲ್ಲೂ ಅಲ್ಲಾಡದೆ ಬಸ್​ಗಳು ಡಿಪೋದಲ್ಲಿಯೇ ಬಂಧಿಯಾಗಿದ್ದವು.

ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಕೆಯಾದ ಹಿನ್ನೆಲೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನ್​ಲಾಕ್ ಘೋಷಣೆ ಮಾಡಿದೆ. ಕಳೆದ ಮೂರು ದಿನಗಳಿಂದ ಬಿಎಂಟಿಸಿ ಬಸ್​ಗಳು ಸಂಚಾರ ನಡೆಸಿದ್ದು, ದಿನಕ್ಕೆ 5 ಕೋಟಿ ಆದಾಯ ಗಳಿಸುತ್ತಿದ್ದ ನಿಗಮಕ್ಕೆ ಎರಡು ದಿನದಲ್ಲಿ ಕೇವಲ 1.35 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಜೂನ್ 21 ರಂದು 4.74 ಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು, 45 ಲಕ್ಷ ಆದಾಯ ಸಂಗ್ರಹವಾದರೆ ಜೂನ್ 22 ರಂದು 8.2 ಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು 90 ಲಕ್ಷ ಆದಾಯ ಗಳಿಸಿದೆ. ಒಟ್ಟಾರೆ ಎರಡು ದಿನದಲ್ಲಿ ಕೇವಲ 13,500,000 ಆದಾಯ ಬಂದಿದೆ.

ಇದನ್ನೂ ಓದಿ: Unlock Day-2: ಪ್ರಯಾಣಿಕರಿಲ್ಲದೆ ಬಿಎಂಟಿಸಿ ಬಸ್​ಗಳು ಖಾಲಿ ಖಾಲಿ

ಈ ಮೊದಲು ದಿನನಿತ್ಯ 40 - 45 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್​ನಲ್ಲಿ ಓಡಾಡುತ್ತಿದ್ದರು. ಆದರೆ, ಕೊರೊನಾ ಕಾರಣಕ್ಕೆ ಸಾರ್ವಜನಿಕ ಸೇವೆಯಿಂದ ಹಲವರು ದೂರವೇ ಉಳಿದಿದ್ದಾರೆ.‌ ಇನ್ನು ಸಾರ್ವಜನಿಕರ ದೃಷ್ಟಿಯಿಂದ ಹೆಚ್ಚುವರಿ ಬಸ್​ಗಳನ್ನ ಬಿಡುತ್ತಿದ್ದು ಹಂತ ಹಂತವಾಗಿ ಪ್ರಯಾಣಿಕರು ಬರುವ ನಿರೀಕ್ಷೆ ಇದೆ.

ಕೋಟಿ ಕೋಟಿ ಆದಾಯ ಖೋತಾ..
ನಿತ್ಯ 7 ಕೋಟಿ ಆದಾಯ ಗಳಿಕೆ ಮಾಡುತ್ತಿದ್ದ ಕೆಎಸ್​ಆರ್​ ಟಿಸಿ ಬಸ್​ಗಳು ಈಗ ಅನ್ ಲಾಕ್ ಬಳಿಕ ರಸ್ತೆಗಿಳಿದಿವೆ.ಆದರೆ, ಕೋಟಿ ಕೋಟಿ ಆದಾಯ ಖೋತವಾಗಿದೆ. ಕಳೆದ ಎರಡು ದಿನಗಳಿಂದ ಕೆಎಸ್​ಆರ್​ ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಕೊರೊನಾ ಹಿನ್ನೆಲೆ ಬಸ್ಸಿನಲ್ಲಿ ಶೇ 50% ಪ್ರಯಾಣಿಕರಿಗೆ ಅವಕಾಶ ನೀಡಿದ್ದು, ಹೀಗಾಗಿ ಜೂನ್21 ರಂದು 1.10 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು 54.06 ಲಕ್ಷ ಆದಾಯ, ಹಾಗೂ 22 ರಂದು 2.25 ಲಕ್ಷ ಪ್ರಯಾಣಿಕರು 1.27 ಕೋಟಿ ಆದಾಯ ಸಂಗ್ರಹವಾಗಿದೆ.

Last Updated : Jun 23, 2021, 8:57 PM IST

ABOUT THE AUTHOR

...view details