ಕರ್ನಾಟಕ

karnataka

ಮರು ಮೈತ್ರಿ ಕಸರತ್ತಿಗೆ ಪ್ರತಿತಂತ್ರ : ಮತ್ತೊಂದು ಆಪರೇಶನ್ ಕಮಲಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್...!

ಮಾಜಿ ದೋಸ್ತಿ ಪಕ್ಷಗಳ ರಾಜಕೀಯ ದಾಳಕ್ಕೆ ತಿರುಗುಬಾಣವಾಗಿ ಆಪರೇಶನ್ ಕಮಲ ನಡೆಸಲು ಸದ್ದಿಲ್ಲದೇ ಬಿಜೆಪಿ ವೇದಿಕೆ ಸಿದ್ಧಪಡಿಸುತ್ತಿದೆ ಎಂದು ತಿಳಿದುಬಂದಿದೆ.

By

Published : Dec 8, 2019, 4:28 AM IST

Published : Dec 8, 2019, 4:28 AM IST

operation Kamala
operation Kamala

ಬೆಂಗಳೂರು: ಉಪ ಚುನಾವಣೆ ಫಲಿತಾಶದ ನಂತರ ರಾಜ್ಯದಲ್ಲಿನ ಬಿಜೆಪಿ ಸರಕಾರ ಅಸ್ಥಿರಗೊಳಿಸಿ ಮರು ಮೈತ್ತಿ ಸರ್ಕಾರ ರಚನೆಗೆ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ತೆರೆಮರೆಯಲ್ಲಿ ನಡೆಸುತ್ತಿರುವ ಕಸರತ್ತಿಗೆ ಬಿಜೆಪಿ ಪ್ರತಿ ಕಾರ್ಯತಂತ್ರವನ್ನು ರೂಪಿಸಿದೆ.

ಮಾಜಿ ದೋಸ್ತಿ ಪಕ್ಷಗಳ ರಾಜಕೀಯ ದಾಳಕ್ಕೆ ತಿರುಗುಬಾಣವಾಗಿ ಆಪರೇಶನ್ ಕಮಲ ನಡೆಸಲು ಸದ್ದಿಲ್ಲದೇ ಬಿಜೆಪಿ ವೇದಿಕೆ ಸಿದ್ಧಪಡಿಸುತ್ತಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ರಾಜ್ಯದಲ್ಲಿನ ಬಿಜೆಪಿಯೇತರ ಸಮ್ಮಿಶ್ರ ಸರಕಾರ ರಚನೆಯಿಂದ ಪ್ರೇರಣೆಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮತ್ತೊಮ್ಮೆ ದೋಸ್ತಿ ಸರ್ಕಾರ ರಚಿಸುವ ಸಾದ್ಯತೆಗಳ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು, ಹಿರಿಯ ಕಾಂಗ್ರೆಸ್ಸಿಗರಾದ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಮತ್ತಿತರ ನಾಯಕರು ಆಂತರಿಕವಾಗಿ ಸಮಾಲೋಚನೆ ನಡೆಸುತ್ತಿದ್ದಾರೆನ್ನಲಾಗಿದೆ.

ದೋಸ್ತಿಗಳು ಮತ್ತೆ ಒಂದಾಗಿ ಸರಕಾರ ರಚನೆಗೆ ನಡೆಸುತ್ತಿರುವ ಕಸರತ್ತು ಬಗ್ಗೆ ಅರಿವು ಇರುವ ಬಿಜೆಪಿಯು ಮಹಾರಾಷ್ಟ್ರ ರಾಜಕಾರಣದಿಂದ ಪಾಠ ಕಲಿತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರಕಾರ ರಚನೆಯ ಪ್ರಯತ್ನ ವಿಫಲಗೊಳಸಲು ಮತ್ತೊಂದು ಸುತ್ತಿನ ಆಪರೇಶನ್ ಕಮಲಕ್ಕೆ ಸಿದ್ಧತೆ ನಡೆಸಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರಲು ಸಿದ್ಧವಿರುವ ಶಾಸಕರಲ್ಲಿ ಎರಡು ಅಥವಾ ಮೂರು ಶಾಸಕರ ರಾಜೀನಾಮೆ ಕೊಡಿಸಲು ವಿರೋಧ ಪಕ್ಷಗಳ ಅತೃಪ್ತ ಶಾಸಕರ ಜತೆ ಮಾತುಕತೆ ನಡೆಸಿದೆ ಎಂದು ಹೇಳಲಾಗಿದೆ.


ಯಾರಿಗೆ ಗಾಳ....?

ಜೆಡಿಎಸ್ ನಲ್ಲಿ ಅತೃಪ್ತಗೊಂಡಿರುವ ಮೈಸೂರು ಭಾಗದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಮಾಜಿ ಸಚಿವ ಜಿ.ಟಿ ದೇವೇಗೌಡ, ವಿಜಯಪುರ ಜಿಲ್ಲೆಯ ನಾಗಠಾಣ ಶಾಸಕ ದೇವೇಂದ್ರ ಚೌಹಾಣ್, ಕಾಂಗ್ರೆಸ್ ಶಾಸಕರಾದ ಆನಂದ ನ್ಯಾಮಗೌಡ, ಗಣೇಶ್ ಹುಕ್ಕೇರಿ ಸೇರಿದಂತೆ ಹಲವು ಶಾಸಕರನ್ನು ಗೌಪ್ಯವಾಗಿ ಸಂಪರ್ಕಿಸಿ ಮಾತುಕತೆ ಅಂತಿಮಗೊಳಿಸಿದೆ ಎನ್ನಲಾಗಿದೆ.

ಆಪರೇಶನ್ ಕಮಲ ಯಾವಾಗ ಮಾಡಬೇಕೆನ್ನುವ ಬಗ್ಗೆ ಪಕ್ಷದಲ್ಲಿ ಗೊಂದಲ ಇದೆ. ಉಪ ಚುನಾವಣೆ ಫಲಿತಾಂಶದ ಮೊದಲು ಅಥವಾ ನಂತರ ಆಪರೇಶನ್ ಮಾಡಬೇಕನ್ನುವ ಕುರಿತು ಸಮಾಲೋಚನೆ ನಡೆದಿದೆ ಎನ್ನಲಾಗಿದೆ.

ಫಲಿತಾಂಶಕ್ಕೂ ಮುನ್ನವೇ ಆಪರೇಶನ್ ಕಮಲ ನಡೆಸುವಂತೆ ಕೆಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿ 10 ರಿಂದ 12 ಸೀಟು ಗೆಲ್ಲುವ ಸಾದ್ಯತೆಗಳಿರುವುದರಿಂದ ಫಲಿತಾಂಶ ಗಮನಿಸಿ ಅಗತ್ಯತೆ ಇದ್ದರೆ ಮಾತ್ರ ಆಪರೇಶನ್ ನಡೆಸುವಂತೆ ಕೆಲವು ಮುಖಂಡರು ಸಲಹೆ ನೀಡಿದ್ದಾರೆನ್ನಲಾಗಿದೆ.


ಬಿಜೆಪಿ ಸರಕಾರ ಉರುಳಿಸಿ ಮೈತ್ರಿ ಸರ್ಕಾರ ರಚಿಸುವ ದೋಸ್ತಿ ಪಕ್ಷಗಳ ರಾಜಕೀಯ ದಾಳಕ್ಕೆ ಆಪರೇಶನ್ ಕಮಲದ ದಾಳವನ್ನು ಪ್ರಯೋಗಿಸಿ ತನ್ನ ಸರ್ಕಾರ ರಕ್ಷಿಸಿಕೊಳ್ಳಲು ಬಿಜೆಪಿ ಅಸ್ತ್ರ ವನ್ನು ಹರಿತಗೊಳಿಸಿದೆ.

ABOUT THE AUTHOR

...view details