ಕರ್ನಾಟಕ

karnataka

ETV Bharat / state

ಕುಟುಂಬ ರಾಜಕಾರಣ, ಕ್ರಿಮಿನಲ್​ಗಳ ಸಮ್ಮಿಲನವೇ ಬಿಜೆಪಿ: ಗೌರವ್ ವಲ್ಲಭ್ - ಚಿತ್ತಾಪುರದಲ್ಲಿ ರೌಡಿಶೀಟರ್​ಗೆ ಟಿಕೆಟ್

ಬಿಜೆಪಿಯು ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಟೀಕಿಸಿದ್ದಾರೆ.

bjp-is-a-combination-of-family-politics-and-criminals-gaurav-vallabh
ಕುಟುಂಬ ರಾಜಕಾರಣ ಮತ್ತು ಕ್ರಿಮಿನಲ್​ಗಳ ಸಮ್ಮಿಲನವೇ ಬಿಜೆಪಿ: ಗೌರವ್ ವಲ್ಲಭ್

By

Published : Apr 13, 2023, 7:10 PM IST

ಬೆಂಗಳೂರು:ಕುಟುಂಬ ರಾಜಕಾರಣ ಮತ್ತು ಕ್ರಿಮಿನಲ್​ಗಳ ಸಮ್ಮಿಲನವೇ ಬಿಜೆಪಿ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಹೇಳಿದರು.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ 224 ಕ್ಷೇತ್ರಗಳಲ್ಲಿ ಇದುವರೆಗೂ ಘೋಷಣೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ 35 ಅಭ್ಯರ್ಥಿಗಳು ಕುಟುಂಬ ರಾಜಕಾರಣದ ಫಲವಾಗಿದ್ದಾರೆ. ಪ್ರತಿ ಆರರಲ್ಲಿ ಓರ್ವ ಅಭ್ಯರ್ಥಿ ಕುಟುಂಬ ರಾಜಕಾರಣದ ಅಭ್ಯರ್ಥಿಯಾಗಿದ್ದಾರೆ. ಪರಿವಾರವಾದದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ಈಗ ಈ ವಿಚಾರವಾಗಿ ಏನು ಹೇಳುತ್ತದೆ? ಬಿಜೆಪಿ ನಾಯಕರ ಕುಟುಂಬ ಸದಸ್ಯರಿಗೆ ಬಿಜೆಪಿ ಟಿಕೆಟ್ ನೀಡಿವೆ. ಅಲ್ಲದೆ ಎಲ್ಲಾ ರೀತಿಯ ಸಂಬಂಧಗಳಿಗೂ ಬಿಜೆಪಿಯಲ್ಲಿ ಟಿಕೆಟ್ ನೀಡಲಾಗಿದೆ. ಬಿಜೆಪಿಯ ಈ ಪಟ್ಟಿಯನ್ನು 'ಪರಿವಾರವಾದ + ಕ್ರಿಮಿನಲ್ = ಬಿಜೆಪಿ' ಎಂಬಂತಾಗಿದೆ ಎಂದು ಬಿಜೆಪಿ ಪಕ್ಷದ ವಿರುದ್ಧ ಎಐಸಿಸಿ ವಕ್ತಾರ ಗೌರವ್​ ವಲ್ಲಭ್​​ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಲ್ಲಿ ಕ್ರಿಮಿನಲ್​ಗಳಿಗೆ ಟಿಕೆಟ್ ನೀಡಲು 1200 ಪ್ರಕರಣಗಳನ್ನು ವಜಾ ಮಾಡಿಕೊಳ್ಳಲಾಗಿದೆ. ಈ ಕ್ರಿಮಿನಲ್​ಗಳನ್ನು ಬಂಧಿಸಿದ್ದ ಐಪಿಎಸ್ ಅಧಿಕಾರಿಗಳೇ ಈಗ ಆ ಕ್ರಿಮಿನಲ್ ಮನೆಗೆ ಹೋಗಿ ಬೆಂಬಲ ಕೋರುತ್ತಿದ್ದಾರೆ. ಇದು ಬಿಜೆಪಿಯ ಬಂಡವಾಳ. ಕರ್ನಾಟಕದಲ್ಲಿ ಬಿಜೆಪಿ ಎಂದರೇನು ಎಂದು ಕೇಳಿದರೆ, 40 ಪರ್ಸೆಂಟ್​​ ಕಮಿಷನ್, ಪರಿವಾರವಾದ ಹಾಗೂ ಕ್ರಿಮಿನಲ್​ಗಳ ಬೆಂಬಲದ ರೂಪ.

ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಜನ ತೀರ್ಮಾನಿಸಿದ್ದು, ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ. ನಾವು ವೈಜ್ಞಾನಿಕ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷ 140 ಕ್ಷೇತ್ರ ಗೆಲ್ಲುವ ಸೂಚನೆ ಸಿಕ್ಕಿದೆ. ಮೇ 13 ರಂದು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ರಾಜ್ಯದ ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ.

ಕಳ್ಳರು ಕಳ್ಳರು ಸಂತೆಗೆ ಹೋದರು ಎಂಬ ಕನ್ನಡದ ಗಾದೆ ಮಾತಿನಂತೆ ಒಬ್ಬ ಕಳ್ಳರು ಮತ್ತೊಬ್ಬ ಕಳ್ಳರ ಬಳಿ ಹೋಗಿದ್ದಾರೆ. ಇನ್ನು ಬಿಟಿಎಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಇರುವ ಕ್ರಿಮಿನಲ್ ಕೇಸ್ ಹಾಗೂ ಅವುಗಳ ಆರೋಪ ಪಟ್ಟಿಯನ್ನು ನಾನು ಮಾಧ್ಯಮಗಳ ಮುಂದೆ ನೀಡಿದ್ದೆ. ಆದರೂ ಅವರಿಗೇ ಟಿಕೆಟ್ ನೀಡಲಾಗಿದೆ. ಈ ಹಿಂದೆ ಬಿಜೆಪಿಯ ಶೇ.35ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು. ಈಗ ಚಿತ್ತಾಪುರದಲ್ಲಿ ರೌಡಿಶೀಟರ್​ಗೆ ಟಿಕೆಟ್ ನೀಡಿದ್ದಾರೆ. ಮಧುಗಿರಿಯಲ್ಲಿ ಐಎಂಎ ಕೇಸ್​ನಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗೆ ಟಿಕೆಟ್ ನೀಡಲಾಗಿದೆ. ಇನ್ನು ಅದೇ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ರೋಷನ್ ಬೇಗ್ ಅವರನ್ನು ಬಿಜೆಪಿಗೆ ಕರೆದುಕೊಂಡು ಹೋಗಲಾಗಿದೆ. ಬಿಜೆಪಿ ಕ್ರಿಮಿನಲ್​ಗಳಿಗೆ ಟಿಕೆಟ್ ನೀಡುವ ತಂತ್ರ ಅನುಸರಿಸುತ್ತಿದೆ ಎಂದು ಇತ್ತೀಚಿಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್​​ ಮುಖಂಡ ರೋಹನ್ ಗುಪ್ತಾ ತಿಳಿಸಿದ್ದರು.

ಇದನ್ನೂ ಓದಿ:ರಾಜ್ಯದ ಸಹಕಾರಿ ಬ್ಯಾಂಕ್​, ಸೊಸೈಟಿಯಲ್ಲಿ ಸಾವಿರಾರು ಕೋಟಿ ಅಕ್ರಮ: ಗೌರವ್ ವಲ್ಲಭ್

ABOUT THE AUTHOR

...view details