ಕರ್ನಾಟಕ

karnataka

By

Published : Sep 23, 2019, 8:14 PM IST

ETV Bharat / state

ಅನರ್ಹ ಶಾಸಕರು ರಾಜೀನಾಮೆ‌ ಕೊಟ್ಟಿದ್ದಕ್ಕೆ ಬಿಜೆಪಿ ಸರ್ಕಾರ ಬಂತು.. ಸಚಿವ ಸಿ ಟಿ ರವಿ

ಅನರ್ಹ ಶಾಸಕರು ರಾಜೀನಾಮೆ‌ ಕೊಟ್ಟ ಕಾರಣಕ್ಕೆ‌‌ ಬಿಜೆಪಿ ಸರ್ಕಾರ ಬರಲು ಸಾಧ್ಯವಾಯಿತು ಎಂದು ಸಚಿವ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.

ಅನರ್ಹ ಶಾಸಕರು ರಾಜೀನಾಮೆ‌ ಕೊಟ್ಟಿದ್ದಕ್ಕೆ ಬಿಜೆಪಿ ಸರ್ಕಾರ ಬಂತು

ಬೆಂಗಳೂರು:ಅನರ್ಹರು ರಾಜೀನಾಮೆ ಕೊಟ್ಟ ಕಾರಣಕ್ಕೆ ಬಿಜೆಪಿ ಸರ್ಕಾರ ಬರಲು ಸಾಧ್ಯವಾಯಿತು. ಅವರ ಬಗ್ಗೆ ನಮಗೆ ಕೃತಜ್ಞತೆ ಇದ್ದು, ಅದನ್ನ ಮರೆತಿಲ್ಲ. ಆದರೆ, ಅನರ್ಹತೆ ಬಗ್ಗೆ ತೀರ್ಮಾನ ಮಾಡಬೇಕಿರೋದು ಸುಪ್ರೀಂಕೋರ್ಟ್. ಕೋರ್ಟ್ ತೀರ್ಪಿಗೆ ನಾವು ಕಾದುಕುಳಿತಿದ್ದೇವೆ ಎಂದು ಸಚಿವ ಸಿ ಟಿ ರವಿ ತಿಳಿಸಿದ್ರು.

ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಬಿಜೆಪಿ ನಿರ್ಧಾರ ಮಾಡುತ್ತೆ. ಸಾಮಾನ್ಯ ಕಾರ್ಯಕರ್ತರಿಗೂ ಬಿಜೆಪಿ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ಕೆಲವು ಕಡೆ ಪಕ್ಷದ ವರ್ಚಸ್ಸು ಇಲ್ಲದಿದ್ದ ಕಡೆ ಗೆಲುವಿಗೆ ಅನಿವಾರ್ಯವಾಗಿ ರಣತಂತ್ರ ಮಾಡಬೇಕಾಗುತ್ತೆ. ಕೆಲವು ಬಾರಿ ಮುಳ್ಳನ್ನ ಮುಳ್ಳಿಂದಲೇ ತೆಗೆಯುತ್ತೇವೆ ಅಂತಾ ತಿಳಿಸಿದರು. ಜಾತಿ ರಾಜಕಾರಣ ಮಾಡಿ ಜಾತ್ಯಾತೀತರು ಅಂತಾ ಹೇಳಿಕೊಳ್ಳೋರಿಗೆ ಪಾಠ ಆಗುವ ರೀತಿಯಲ್ಲಿ ಬೆರಳೆಣಿಕೆಯಷ್ಟು ಜಾತಿ ಬೆಂಬಲ ಇರೋರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೇವೆ ಅಂತಾ ಸಿ ಟಿ ರವಿ ಹೇಳಿದರು.

ಅನರ್ಹ ಶಾಸಕರು ರಾಜೀನಾಮೆ‌ ಕೊಟ್ಟಿದ್ದಕ್ಕೆ ಬಿಜೆಪಿ ಸರ್ಕಾರ ಬಂತು.. ಸಚಿವ ಸಿ ಟಿ ರವಿ

ಬಚ್ಚೇಗೌಡರ ಪುತ್ರ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತಾನಾಡಿದ ಅವರು, ಬಚ್ಚೇಗೌಡರು ನಮ್ಮ ಪಕ್ಷದ ನಾಯಕರು. ಅವರು ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ನಾನು ಪ್ರತಿಕ್ರಿಯೆ ನೀಡೋದು ಸಮಂಜಸವಲ್ಲ. ಪಕ್ಷ ಎಲ್ಲವನ್ನೂ ನೀಡಿದೆ, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಸಿ ಟಿ ರವಿ ಪ್ರತಿಕ್ರಿಯಿಸಿದ್ರು.

ABOUT THE AUTHOR

...view details