ಕರ್ನಾಟಕ

karnataka

ETV Bharat / state

ಕಮಿಷನ್‌ ಆರೋಪ ಮಸಿ ಅಳಿಸಲು ತಂತ್ರ? ಬಿಜೆಪಿ ಕಾರ್ಯಕಾರಿಣಿಯ ಚರ್ಚೆಗಳೇನು?

ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು, ಟಾರ್ಗೆಟ್ 150ಕ್ಕೆ ತಯಾರಿ ನಡೆಸಲು ಮುಂದಾಗಿದೆ.

By

Published : Apr 15, 2022, 9:44 PM IST

ಕಮಿಷನ್‌ ಆರೋಪದ ಮಸಿ ಅಳಿಸಲು ತಂತ್ರ ರೂಪಿಸಲಿದೆಯಾ ಬಿಜೆಪಿ
ಕಮಿಷನ್‌ ಆರೋಪದ ಮಸಿ ಅಳಿಸಲು ತಂತ್ರ ರೂಪಿಸಲಿದೆಯಾ ಬಿಜೆಪಿ

ಬೆಂಗಳೂರು: ಕಮಿಷನ್ ಆರೋಪದಿಂದ ಹೊರಬರಲು ಪರದಾಡುತ್ತಿರುವ ಬಿಜೆಪಿಗೆ ನಾಳೆಯಿಂದ ಆರಂಭವಾಗಲಿರುವ ಎರಡು ದಿನದ ಕಾರ್ಯಕಾರಿಣಿ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪಕ್ಷ ಸಂಘಟನೆಯ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರ ಅಧ್ಯಕ್ಷತೆಯಲ್ಲಿ ವಿಜಯನಗರದ ಹೊಸಪೇಟೆಯಲ್ಲಿ ಸಭೆ ನಡೆಯಲಿದೆ. ಇಲ್ಲಿ ಪ್ರಮುಖವಾಗಿ ಪಕ್ಷ ಸಂಘಟನೆಯ ಬಗ್ಗೆ ಕ್ಲಾಸ್ ತೆಗೆದುಕೊಳ್ಳಲಿರುವ ರಾಷ್ಟ್ರೀಯ ಅಧ್ಯಕ್ಷರು, ಪಕ್ಷದ ಬಲವರ್ಧನೆ ಬಗ್ಗೆ ಸಲಹೆ ಸೂಚನೆ‌ ನೀಡಲಿದ್ದಾರೆ.

ಮುಂಬರುವ ಚುನಾವಣೆಗೆ ತಯಾರಿ ನಡೆಸಿರುವ ಕೇಸರಿ ಬ್ರಿಗೇಡ್ ಪಕ್ಷದ ಸಂಘಟನೆಗೆ ಮಹತ್ವ ನೀಡಿದೆ. ಪಕ್ಷ ಸಂಘಟನೆಯ ಮೂಲಕ ಸ್ವಂತ ಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿಯಲು ಸಿದ್ಧತೆ ಮಾಡಿಕೊಂಡಿರೋ ಬಿಜೆಪಿ ಟಾರ್ಗೆಟ್ 150ಗೆ ತಯಾರಿ ನಡೆಸಲು ಮುಂದಾಗಿದೆ. ಇದೆಲ್ಲದರ ಜೊತೆಗೆ ಕಾಂಗ್ರೆಸ್ ಮಾಡ್ತಿರೋ ಆರೋಪಗಳಿಗೆ ಯಾವ ರೀತಿ ಉತ್ತರ ಕೊಡಬೇಕು ಎಂಬುದರ ಬಗ್ಗೆ ನಡ್ಡಾ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಜೊತೆ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ನೆಗೆಟಿವ್ ವಿಷಯಗಳ ಬಗ್ಗೆ ಜನರಿಗೆ ಹೇಗೆ ಮುಟ್ಟಿಸಬೇಕು ಹಾಗೂ ಅದನ್ನ ಹೇಗೆ ಜನರ ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್​ನ ಕಮಿಷನ್ ಆರೋಪಕ್ಕೆ ಕೌಂಟರ್ ತಂತ್ರ ರೂಪಿಸಲು ಚರ್ಚೆ ನಡೆಯಲಿದೆ. ಅದಕ್ಕಾಗಿ ಕಾಂಗ್ರೆಸ್​​ನ ವೈಫಲ್ಯ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕಾಂಗ್ರೆಸ್ ನಾಯಕರ ವಿರುದ್ಧದ ಆರೋಪಗಳು, ಕಾಂಗ್ರೆಸ್ ಓಲೈಕೆ ರಾಜಕಾರಣ, ಹಿಂದು ವಿರೋಧಿ ನಿಲುವನ್ನು ಬಿಂಬಿಸಿ ಮುನ್ನಲೆಗೆ ತರುವ ನಿಟ್ಟಿನಲ್ಲಿ ಕಾರ್ಯಾಕಾರಿಣಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕಮಿಷನ್ ಸದ್ದು:ಈ ಸಭೆಯಲ್ಲಿ ಪ್ರಮುಖವಾಗಿ ಕಮಿಷನ್ ವಿಚಾರ, ಈಶ್ವರಪ್ಪ ರಾಜೀನಾಮೆ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ರಾಜೀನಾಮೆ ಸಂಬಂಧ ಏನೇನೆಲ್ಲ ನಡೆದಿದೆ ಎಂಬುದರ ಕುರಿತು ಸಂಪೂರ್ಣ ವರದಿಯನ್ನ ಜೆಪಿ ನಡ್ಡಾರವರಿಗೆ ನೀಡಲಿದ್ದಾರೆ. ಇದಾದ ಬಳಿಕ ಇದನ್ನ ಕಾಂಗ್ರೆಸ್​ನಿಂದ ದೂರ ಮಾಡಲು ಯಾವ ರೀತಿ ತಂತ್ರಗಾರಿಕೆ ಮಾಡಬೇಕು ಎಂಬುದರ ಕುರಿತು ಕೋರ್ ಕಮಿಟಿ ಸದಸ್ಯರ ಸಮ್ಮುಖದಲ್ಲಿ ನಡ್ಡಾ ಮಾತುಕತೆ ನಡೆಸಲಿದ್ದಾರೆ.

ABOUT THE AUTHOR

...view details