ಕರ್ನಾಟಕ

karnataka

ETV Bharat / state

ಊರಿಗೆ ಹಾಗೂ ಸಂಬಂಧಿಕರ ಮಣ್ಣಿಗೆ ಹೋಗಲು ಪಾಸ್​ ನೀಡೋದಿಲ್ಲ: ಪೊಲೀಸ್​ ಆಯುಕ್ತರ ಖಡಕ್​ ನುಡಿ

ಪಾಸ್​ಗಳಿಲ್ಲದೇ ಸುಖಾ ಸುಮ್ಮನೆ ಓಡಾಡುತ್ತಿದ್ದಾರೋ ಅವರ ವಿರುದ್ಧ NDMA ಆಕ್ಟ್ ಅಡಿ ಬಂಧನ ಮಾಡಲಾಗತ್ತೆ ಎಂದು ನಗರ ಆಯುಕ್ತ‌ ಭಾಸ್ಕರ್ ರಾವ್ ಎಚ್ಚರಿಕೆ ನಿಡಿದ್ದಾರೆ.

By

Published : Apr 15, 2020, 12:19 PM IST

ನಗರ ಆಯುಕ್ತ‌ ಭಾಸ್ಕರ್ ರಾವ್
ನಗರ ಆಯುಕ್ತ‌ ಭಾಸ್ಕರ್ ರಾವ್

ಬೆಂಗಳೂರು: ನಗರದಲ್ಲಿ 144 ಸೆಕ್ಷನ್ ಜಾರಿ ಇದ್ದು, ಅಗತ್ಯ ಸೇವೆಗಳಿಗೆ ಪಡೆದುಕೊಂಡಿರುವ ಪಾಸ್​ಗಳು ಹಾಗೂ‌ ಇ ಪಾಸ್​ಗಳು ಏಪ್ರಿಲ್ 20 ನೇ ತಾರೀಖಿನವರೆಗೂ ಚಾಲ್ತಿಯಲ್ಲಿದೆ. ಹೀಗಾಗಿ ಪಾಸ್ ಇದ್ದವರು‌ ಮಾತ್ರ ಓಡಾಟ ನಡೆಸಬಹುದು ಎಂದು ನಗರ ಆಯುಕ್ತ‌ ಭಾಸ್ಕರ್ ರಾವ್ ಹೇಳಿದ್ದಾರೆ.

ಆನ್ಲೈನ್​ನಲ್ಲಿ 44 ಲಕ್ಷ ಪಾಸ್ ಗಳಿಗೆ ಅಪ್ಲೈ ಮಾಡಿದ್ದು, ಅನಗತ್ಯವಾಗಿ ಅರ್ಜಿ ಸಲ್ಲಿಸಿದವರ ಪಾಸ್ ಅರ್ಜಿ ರಿಜೆಕ್ಟ್ ಮಾಡಲಾಗಿದೆ. ಯಾrಊ ಪಾಸ್​ಗಳಿಲ್ಲದೆ ಸುಖಾ ಸುಮ್ಮನೆ ಓಡಾಡುತ್ತಿದ್ದಾರೋ ಅವರ ವಿರುದ್ಧ NDMA ಕಾಯ್ದೆ ಅಡಿ ಬಂಧನ ಮಾಡಲಾಗತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರ ಆಯುಕ್ತ‌ ಭಾಸ್ಕರ್ ರಾವ್

ಯಾರಿಗಾದರೂ ವೈದ್ಯಕೀಯ ಸೇವೆಗೆ ಪಾಸ್​​​​ಗಳು ಬೇಕಾದರೆ ಸೂಕ್ತ ದಾಖಲೆಗಳನ್ನ ನೀಡಿ. ಒಂದು ದಿನದ ಪಾಸ್ ನೀಡಲಾಗುವುದು. ಸಂಬಂಧಿಕರ ಸಾವಿಗೆ ಹೋ ಗುವುದು, ಊರಿಗೆ ಹೋಗುವುದು, ಇಂಥಹವರಿಗೆ ಯಾವುದೇ ಅವಕಾಶ ಇರೋದಿಲ್ಲ. ಕೇವಲ ದಿನಸಿ ಹಾಗೂ ತರಕಾರಿ ಸಾಗಣೆ ಮಾಡೋ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details