ಕರ್ನಾಟಕ

karnataka

ETV Bharat / state

ಟೆಸ್ಲಾ ಕಾರಿಗೆ ಬಿಎಂಟಿಸಿ ಬಸ್ಸಿನ ನೋಂದಣಿ ಸಂಖ್ಯೆ! ಇದು ವಿದೇಶಿ ಕನ್ನಡಿಗನ ಬಾಲ್ಯದ ನೆನಪಿನ ಕಥೆ

ವಿದೇಶದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಮೂಲಕ ತಮ್ಮ ಟೆಸ್ಲಾ ಕಾರಿಗೆ BMTC ಬಸ್ ನೋಂದಣಿ ಸಂಖ್ಯೆಯಿದ್ದ ನಂಬರ್​ಪ್ಲೇಟ್​ ಪಡೆದಿದ್ದಾರೆ.

BMTC bus registration number
ಟೆಸ್ಲಾ ಕಾರಿಗೆ ಬಿಎಂಟಿಸಿ ಬಸ್ಸಿನ ನೋಂದಣಿ ಸಂಖ್ಯೆ

By

Published : May 12, 2023, 2:29 PM IST

ಬೆಂಗಳೂರು: ಯುನೈಟೆಡ್ ಸ್ಟೇಟ್ಸ್‌ನಲ್ಲಿ(ಯುಎಸ್ಎ) ವಾಸವಿರುವ ಬೆಂಗಳೂರು ಮೂಲಕ ವ್ಯಕ್ತಿಯೊಬ್ಬರು ತಮ್ಮ ಹೊಚ್ಚಹೊಸ ಟೆಸ್ಲಾ ಕಾರಿಗೆ ಬಹಳ ವಿಭಿನ್ನವಾದ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ. ಸರಿ ಸುಮಾರು ಮೂರು ದಶಕಗಳ ಹಿಂದೆ ಶಾಲೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್​ನ ನೋಂದಣಿ ಸಂಖ್ಯೆಯಂತೆಯೇ ನಂಬರ್​ ಪ್ಲೇಟ್ ಇದ್ದು, ಬೆಂಗಳೂರಿನ ವಿದ್ಯಾರಣ್ಯಪುರ ಮತ್ತು ಯಶವಂತಪುರದ ನಡುವೆ ಬಸ್ ಓಡಿಸಿದ ನಿವೃತ್ತ ಬಿಎಂಟಿಸಿ ಚಾಲಕ ಚೆಂಗಪ್ಪ ಅವರಿಗೆ ಸಲ್ಲಿಸುವ ಗೌರವ ಎಂದು ಹೇಳಿಕೊಂಡಿದ್ದಾರೆ.

ಹೌದು, ಧನಪಾಲ್‌ ಮಂಚೇನಹಳ್ಳಿ ಎಂಬುವರು ಕೆಎ 01 ಎಫ್‌ 232 ನೋಂದಣಿ ಸಂಖ್ಯೆಯ ಬಸ್ಸಿನೊಂದಿಗೆ ಚೆಂಗಪ್ಪ ಅವರು ನಿಂತಿರುವ ಫೋಟೋ ಮತ್ತು ಈಗ ಹೊಸದಾಗಿ ಖರೀದಿಸಿರುವ ಅದೇ ಸಂಖ್ಯೆಯ ಟೆಸ್ಲಾ ಕಾರಿನ ಜತೆ ತಾವು ನಿಂತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ತಮ್ಮ ಬಾಲ್ಯದ ಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ.

ಇದನ್ನೂ ಓದಿ :ನಟ ರಮೇಶ್ ಅರವಿಂದ್ ಮನೆಗೆ ಬಂತು ಕೋಟಿ ಬೆಲೆ ಬಾಳುವ ಐಷಾರಾಮಿ ಕಾರ್

ಧನಪಾಲ್‌ ಹಂಚಿಕೊಂಡ ವಿಡಿಯೋದಲ್ಲಿ, "1992, 1993, 1994 ಮತ್ತು 1995 ರಲ್ಲಿ ಶಾಲೆಗೆ ನಾನು KA01F232 ನೋಂದಣಿ ಸಂಖ್ಯೆಯ BMTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ನಾನು ಮಾತ್ರವಲ್ಲದೇ ಅನೇಕ ವಿದ್ಯಾರ್ಥಿಗಳು ಆಗ ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈಗಲೂ ಸಹ ಬಹಳಷ್ಟು ಮಂದಿ ಬಿಎಂಟಿಸಿ ಬಸ್​ನಲ್ಲಿ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ನನಗೆ ಬಸ್​ ಚಾಲಕ ಚೆಂಗಪ್ಪ ಅದರೊಂದಿಗೆ ಬಹಳಷ್ಟು ನೆನಪುಗಳಿವೆ. ಈಗ ಚೆಂಗಪ್ಪ ನಿವೃತ್ತರಾಗಿದ್ದು, ಅವರಿಗೆ ಗೌರವ ಸೂಚಕವಾಗಿ ನನ್ನ ಟೆಸ್ಲಾ ಕಾರಿಗ ಆ ಬಸ್ಸಿನ ನಂಬರ್ ಸಿಕ್ಕಿದೆ. ದಶಕಗಳ ಕಾಲ ಶ್ರಮಿಸಿದ ಚೆಂಗಪ್ಪರಂತಹ ಜನರು ನಮಗೆ ಸ್ಫೂರ್ತಿ, ನಮ್ಮ ಮುಂದಿನ ಪೀಳಿಗೆಗೆ ಇಂತಹ ಕಥೆಗಳನ್ನು ಹೇಳಬೇಕು" ಎಂದಿದ್ದಾರೆ.

ಇದನ್ನೂ ಓದಿ :ಟೆಕ್ಸಾಸ್‌ನಲ್ಲಿ ಬಸ್​ಗೆ ಕಾಯುತ್ತಿದ್ದ ಜನರ ಮೇಲೆ ನುಗ್ಗಿದ ಕಾರು : 7 ಸಾವು , 10 ಮಂದಿಗೆ ಗಾಯ

ಧನಪಾಲ್ ಅವರಿಗೆ ಬಿಎಂಟಿಸಿ ಬಸ್‌ ಮೇಲಿನ ಪ್ರೀತಿಯನ್ನು ಕಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಸೇರಿದಂತೆ ಬೆಂಗಳೂರಿನ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟರ್​ ಬಳಕೆದಾರ ಆದರ್ಶ್ ಹೆಗ್ಡೆ ಎಂಬುವರು ಈ ಕುರಿತಾದ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, "ಚೆಂಗಪ್ಪ ಅವರು ತಮ್ಮ ಆತ್ಮೀಯ ಬಸ್ ಚಾಲಕರಾದ ಧನಪಾಲ್ ಅವರ ಸೇವೆ ಮತ್ತು ಸವಿ ನೆನಪಿನ ಕುರಿತು ವಿಡಿಯೋದಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಇವರಿಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದಾರೆ. ಇದೊಂದು ಸುಂದರವಾದ ಕಥೆಯಲ್ಲವೇ? ಎಂದಿದ್ದಾರೆ.

ಇದನ್ನೂ ಓದಿ :ಬಜೆಟ್​ ಶ್ರೇಣಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್ಸ್​ : ಬೆಲೆ 7.98 ಲಕ್ಷ

ABOUT THE AUTHOR

...view details