ಬೆಂಗಳೂರು :ನಗರದಲ್ಲಿ ಬಲು ಅಪರೂಪಕ್ಕೊಂದು ಅದ್ದೂರಿ ಮದುವೆ ನಡೆದಿದೆ. ಮದುವೆ ಮಂಟಪಕ್ಕೆ ಮದುಮಗ ಹೆಲಿಕಾಪ್ಟರ್ನಲ್ಲಿ ಬರುವ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ತುಮಕೂರಿನ ಹುಡುಗ ನಿರೂಪ್ ಹಾಗೂ ಬೆಂಗಳೂರಿನ ಹುಡುಗಿ ಐಶ್ವರ್ಯಾ ಎಂಬುವರು ಈ ವಿಶೇಷ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ತಲಘಟ್ಟಪುರದ ಬಿಆರ್ಎಸ್ ಗ್ರಾಂಡ್ಯುರ್ನಲ್ಲಿ ಈ ಮದುವೆ ನಡೆದಿದೆ.
ಹೆಲಿಕಾಪ್ಟರ್ ಏರಿ ಮದುವೆ ಮಂಟಪಕ್ಕೆ ಬಂದ ಮಧುಮಗ... ತುಮಕೂರಿನಿಂದ ಹೆಲಿಕಾಪ್ಟರ್ನಲ್ಲಿ ಬಂದ ನಿರೂಪ್ ವೃತ್ತಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿದ್ದು, ರೈಸ್ ಮಿಲ್ ಸಹ ಹೊಂದಿದ್ದಾರೆ. ಬಲರಾಮ್ ಶೆಟ್ಟಿ ಹಾಗೂ ರಮಾದೇವಿ ದಂಪತಿ ಪುತ್ರನಾದ ಇವರು ಬೆಂಗಳೂರಿನ ಐಶ್ವರ್ಯಾರನ್ನು ವರಿಸಿದ್ದಾರೆ. ಕಾಪ್ಟರ್ ಮೂಲಕ ನಿರೂಪ್ ಕಲ್ಯಾಣ ಮಂಟಪಕ್ಕೆ ಬಂದಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ:ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಕುಗ್ರಾಮ: ಆತ ತನ್ನರಸಿಯ ಆಸೆ ಹೀಗೆ ಈಡೇರಿಸಿದ!