ಕರ್ನಾಟಕ

karnataka

ETV Bharat / state

ಕೆಜಿಎಫ್​ ಮ್ಯೂಸಿಕ್ ಬಳಕೆ.. ಕಾಂಗ್ರೆಸ್​, ಭಾರತ್ ಜೋಡೋ ಟ್ವಿಟರ್​ ಖಾತೆ ಅಮಾನತಿಗೆ ಕೋರ್ಟ್​ ಸೂಚನೆ - Bharat Jodo Yatra Twitter account

ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್​ ಹಾಡುಗಳನ್ನು ಬಳಸಿಕೊಂಡಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ವಾಣಿಜ್ಯ ಕೋರ್ಟ್​,​ ಕಾಂಗ್ರೆಸ್​ ಮತ್ತು ಭಾರತ್​ ಜೋಡೋ ಟ್ವಿಟರ್​ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲು ಸೂಚಿಸಿದೆ.

Bharat Jodo Yatra
ಭಾರತ್ ಜೋಡೋ ಟ್ವಿಟರ್​ ಖಾತೆ ಅಮಾನತಿಗೆ ಕೋರ್ಟ್​ ಸೂಚನೆ

By

Published : Nov 7, 2022, 8:28 PM IST

Updated : Nov 7, 2022, 10:45 PM IST

ಬೆಂಗಳೂರು:ಭಾರತ್ ಜೋಡೋ ಯಾತ್ರೆ ಪ್ರಚಾರಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂಗೀತ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(INC) ಮತ್ತು ಭಾರತ್ ಜೋಡೋಯಾತ್ರೆಯ ಅಧಿಕೃತ ಟ್ವಿಟರ್ ಖಾತೆಯನ್ನು ನ.21ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ ವಾಣಿಜ್ಯ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.

ಕೆಜಿಎಫ್ ಚಾಪ್ಟರ್ -2 ಚಿತ್ರದ ಸಂಗೀತದ ಹಕ್ಕು ಸ್ವಾಮ್ಯ ಪಡೆದುಕೊಂಡಿರುವ ಎಂಆರ್‌ಟಿ ಮ್ಯೂಸಿಕ್ ಕಂಪನಿ ದಾಖಲಿಸಿರುವ ದಾವೆ ವಿಚಾರಣೆ ನಡೆಸಿರುವ ನಗರದ 86ನೇ ವಾಣಿಜ್ಯ ನ್ಯಾಯಾಲಯ ಈ ಆದೇಶ ಮಾಡಿದ್ದು ವಿಚಾರಣೆ ಮುಂದೂಡಿದೆ. ಪ್ರಸ್ತುತ ಲಭ್ಯವಿರುವ ದಾಖಲೆಗಳ ಪ್ರಕಾರ ಭಾರತ್ ಜೋಡೋ ಯಾತ್ರೆ ವೇಳೆ ಅರ್ಜಿದಾರರು ಹಕ್ಕು ಸ್ವಾಮ್ಯ ಹೊಂದಿರುವ ಕೆಜಿಎಫ್ ಚಾಪ್ಟರ್ -2 ಚಿತ್ರದ ಸಂಗೀತವವನ್ನು ಅಧಿಕೃತವಾಗಿ ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಅದನ್ನು ತಡೆಯದೇ ಹೋದರೆ ಅರ್ಜಿದಾರಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ ಮತ್ತು ಪೈರಸಿಯನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.ವಿದ್ಯುನ್ಮಾನ್ ಪರಿಶೋಧನೆ ಮಾಡಬೇಕಿದೆ: ಅಲ್ಲದೇ, ಕೆಜಿಎಫ್ ಚಾಪ್ಟರ್ - 2 ಚಿತ್ರದ ಸಂಗೀತವನ್ನು ಅನಧಿಕೃತವಾಗಿ

ಬಳಸಿಕೊಂಡ ವಿಚಾರದಲ್ಲಿ ವಿದ್ಯುನ್ಮಾನ್ ಪರಿಶೋಧನೆ ಮಾಡಬೇಕಿದೆ. ಹೀಗಾಗಿ ಐಎನ್‌ಸಿಇಂಡಿಯಾದ ಟ್ವಿಟ್ಟರ್, ಭಾರತ್‌ ಜೋಡೋ ಯಾತ್ರೆಯ ಟ್ವಿಟರ್, ಫೇಸ್‌ಬುಕ್, ಯೂಟೂಬ್, ಇನ್‌ಸ್ಟ್ರಾಗ್ರಾಂ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿರುವ ‘ಹಕ್ಕು ಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು’ ಸಂಬಂಧಿಸಿದ ಸಾಮಾಗ್ರಿಗಳನ್ನು ವಿದ್ಯುನ್ಮಾನ ಪರಿಶೋಧನೆ ನಡೆಸಲು ವಾಣಿಜ್ಯ ನ್ಯಾಯಲಯದ ಕಂಪೂಟರ್ ವಿಭಾಗದ ಜಿಲ್ಲಾ ಸಿಸ್ಟೆಮ್ ಆಡಳಿತಾಧಿಕಾರಿ ಆಗಿರುವ ಎಸ್.ಎನ್. ವೆಂಕಟೇಶ ಮೂರ್ತಿ ಅವರನ್ನು ಸ್ಥಳೀಯ ಕಮೀಷನರ್ ಆಗಿ ನೇಮಕ ಮಾಡಿ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯಕ್ಕೆ ಪ್ರತ್ಯೇಕ ಕಾಂಪಾಕ್ಟ್ ಡಿಸ್ಕ್ ಸಂಗ್ರಹಣೆ ಮಾಡಿ ಸಲ್ಲಿಸಿ:ಈ ಸ್ಥಳೀಯ ಕಮೀಷನರ್ ಅವರು ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿರುವ ಪೋಸ್ಟ್ ಪರಿಶೀಲನೆ ನಡೆಸಬೇಕು. ಅದನ್ನು ನ್ಯಾಯಾಲಯಕ್ಕೆ ಪ್ರತ್ಯೇಕ ಕಾಂಪಾಕ್ಟ್ ಡಿಸ್ಕ್ (ಸಿಡಿ) ರೂಪದಲ್ಲಿ ಸಂಗ್ರಹಣೆ ಮಾಡಬೇಕು ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಕಮೀಷನರ್ ಅವರೊಂದಿಗೆ ಹಾಜರಿರಲು ಅರ್ಜಿದಾರರ್ ಪರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೋರ್ಟ್ ಕಮೀಷನರ್ ನಡೆಸುವ ಪ್ರಕ್ರಿಯೆಯ ಫೋಟೋ ಹಾಗೂ ವಿಡಿಯೋ ದಾಖಲಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.ಇದೆ ವೇಳೆ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಇನ್ನಿತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನ.21ಕ್ಕೆ ಮುಂದೂಡಿದೆ.
ದೂರಿನಲ್ಲಿ ಏನಿತ್ತು:ಎಂಆರ್‌ಟಿಸಿ ಮ್ಯೂಸಿಕ್ ಕಂಪನಿಯು ಕೆಜಿಎಫ್ ಸಿನಿಮಾದ ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋ ಹಾಗೂ ಮ್ಯೂಸಿಕ್ ಹಕ್ಕು ಹೊಂದಿದೆ. ಆದರೆ, ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ನಮ್ಮ ಅನುಮತಿ ಪಡೆಯದೇ ಕೆಜಿಎಫ್ ಸಿನಿಮಾ ಮ್ಯೂಸಿಕ್ ಬಳಸಿಕೊಳ್ಳಲಾಗಿದೆ.

ಕಾಂಗ್ರೆಸ್‌ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೊ ಹಾಗೂ ಪೋಸ್ಟ್ ಹಾಕಲಾಗಿದೆ. ಈ ಮುಖಾಂತರ ಕಾಂಗ್ರೆಸ್ ತಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಯನ್ನು ಮುಂದುವರೆಸಲು, ಮಾರ್ಕೆಟಿಂಗ್ ಹಾಗೂ ಪ್ರಚಾರಕ್ಕಾಗಿ ನಮ್ಮ ಹಕ್ಕು ಸ್ವಾಮ್ಯ ಹಾಗೂ ಬೌದ್ಧಿಕ ಆಸ್ತಿ ಹಕ್ಕನ್ನು ಉಲ್ಲಂಘಿಸಿದ್ದು, ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಲತಾ ಕುಮಾರಿ ಅವರು ಈ ಆದೇಶ ನೀಡಿದ್ದಾರೆ

ಕಾಂಗ್ರೆಸ್​ ಪ್ರತಿಕ್ರಿಯೆ:ಕೋರ್ಟ್​ ನೀಡಿದ ಸೂಚನೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​, ನ್ಯಾಯಾಲಯದ ಆದೇಶವನ್ನು ಸಾಮಾಜಿಕ ಮಾಧ್ಯಮಗಳಿಂದ ತಿಳಿದುಬಂದಿದೆ. ಕೇಸ್​ ಪರವಾಗಿ ಪಕ್ಷ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಕೋರ್ಟ್​ ಪಕ್ಷಕ್ಕೆ ಯಾವುದೇ ಆದೇಶ ಪ್ರತಿ ಕೂಡ ನೀಡಿಲ್ಲ. ಎಲ್ಲ ಕಾನೂನು ಪಾಲನೆ ಮಾಡಲಾಗುತ್ತಿದೆ. ಈ ಬಗ್ಗೆ ಕಾನೂನು ಸಲಹೆಯನ್ನು ಪಡೆಯಲಾಗುವುದು ಎಂದು ಟ್ವೀಟ್ ಮಾಡಿದೆ.

ಓದಿ:ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ರಾಜ್ಯ ನಾಯಕರಿಗೆ ಸೂಚಿಸಿದ್ದೇನೆ: ಖರ್ಗೆ

Last Updated : Nov 7, 2022, 10:45 PM IST

ABOUT THE AUTHOR

...view details