ಕರ್ನಾಟಕ

karnataka

ETV Bharat / state

ರಾಜಕಾಲುವೆಗೆ ಬಿದ್ದು ಮಗು ನಾಪತ್ತೆ.. ಮುಂದುವರೆದ ಶೋಧನಾ ಕಾರ್ಯ..

ಕಸ ಹಾಕುವ ವೇಳೆ ಆಯತಪ್ಪಿ ಕಾಲುವೆಗೆ ಬಿದ್ದು ನಾಪತ್ತೆಯಾಗಿರುವ ಮಗುವಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಮಗುವಿಗಾಗಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಮುಂದುವರೆದ ಶೋಧ ಕಾರ್ಯ

By

Published : Sep 2, 2019, 5:29 PM IST

ಬೆಂಗಳೂರು: ಮೋರಿಯ ಬಳಿ ಕಸ ಹಾಕಲು ಹೋದ ಮಗು ಆಯತಪ್ಪಿ ಕಾಲುವೆಗೆ ಬಿದ್ದುಕೊಚ್ಚಿ ಹೋದ ಘಟನೆ ಗೋರಿಪಾಳ್ಯ ಪಾದರಾಯನಪುರದ ಗುಡ್ಡದಹಳ್ಳಿ ಬಳಿ ನಡೆದಿದೆ.

ನಗರದ ಗುಡ್ಡದಹಳ್ಳಿ ನಿವಾಸಿಗಳಾದ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿ ಪುತ್ರ ಮಹ್ಮದ್ ಝೈನ್ (5) ನಾಪತ್ತೆಯಾದ ಬಾಲಕ.

ಮುಂದುವರೆದ ಶೋಧ ಕಾರ್ಯ..

ಮಹ್ಮದ್ ಝೈನ್ ಕಳೆದ ಶುಕ್ರವಾರ ರಾತ್ರಿ 11ಗಂಟೆ ಸುಮಾರಿಗೆ ಗೆಳತಿ ಜೊತೆ ಕಸ ಹಾಕಲು ಹೋಗಿದ್ದ ವೇಳೆ ಆಯತಪ್ಪಿ ಮೋರಿಯೊಳಗೆ ಬಿದ್ದಿದ್ದ. ರಾತ್ರಿಯಾದ ಕಾರಣ ಮರುದಿನ ಬೆಳಗ್ಗೆ ಜೆಜೆನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸದ್ಯ ಗುಡ್ಡದಹಳ್ಳಿಯ ದೊಡ್ಡ ಮೋರಿಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆದಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಮಹ್ಮದ್ ಝೈನ್ ತಂದೆ, ಇಮ್ರಾನ್ ಶರೀಫ್ ಸಾವನ್ನಪ್ಪಿದ್ದರು. ಹೀಗಾಗಿ ತಾಯಿಯೊಂದಿಗೆ ಝೈನ್ ವಾಸವಾಗಿದ್ದ, ಸದ್ಯ ಮಗುವನ್ನ ಕಳೆದುಕೊಂಡ ತಾಯಿ ಕಂಗಾಲಾಗಿದ್ದಾರೆ

ABOUT THE AUTHOR

...view details