ಕರ್ನಾಟಕ

karnataka

ETV Bharat / state

ಪ್ರಾಣವಾಯು ಯೋಜನೆಗೆ ಬಿಬಿಎಂಪಿ: ಆಕ್ಸಿಮೀಟರ್ ಬಳಸಿ ಕೊರೊನಾದಿಂದ ದೂರವಿರಲು ಕರೆ - ಆಕ್ಸಿಮೀಟರ್ ಬಳಸಿ ಕೊರೊನಾದಿಂದ ದೂರ

ಕೊರೊನಾ ವೈರಸ್​ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗವು ಇದೀಗ ಪ್ರಾಣವಾಯು ಎಂಬ ನೂತನ ಯೋಜನೆಗೆ ಇಂದು ಚಾಲನೆ ನೀಡಿದೆ.

Pranavayu scheme
ಪ್ರಾಣವಾಯು ಯೋಜನೆಗೆ ಚಾಲನೆ

By

Published : May 8, 2020, 7:10 PM IST

ಬೆಂಗಳೂರು:ಕೊರೊನಾ ವೈರಸ್​​ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಬಿಬಿಎಂಪಿ ಪ್ರಾಣವಾಯು ಯೋಜನೆಗೆ ಚಾಲನೆ ನೀಡಿದೆ.

ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ರವಿಕುಮಾರ್ ಸುರಪುರ, ನಗರದ ಜನರೇ ಆಕ್ಸಿಮೀಟರ್ ಸಹಾಯದಿಂದ ಮನೆಯಲ್ಲಿಯೇ ದೇಹದ ರಕ್ತ ಮತ್ತು ಹೃದಯ ಬಡಿತದಲ್ಲಿ ಆಮ್ಲಜನಕದ ಪ್ರಮಾಣ ಅಳೆಯುವ ಸಾಧನವನ್ನು ಬಳಸಲು ಸೂಚಿಸಿದರು‌. ಇದರಿಂದ ಸಾಮಾನ್ಯವಾಗಿರುವ ಜ್ವರ, ಕೆಮ್ಮು ಮತ್ತು ಇತರೆ ಸಾಂಕ್ರಾಮಿಕ ರೋಗಗಳು (SARI- severe acute respiratory illness)ರೋಗಗಳ ಹೆಚ್ಚಾಗುವಿಕೆಯನ್ನು ತಡೆಯಬಹುದು ಎಂದು ತಿಳಿಸಿದರು.

ಈ ಆಕ್ಸಿಮೀಟರನ್ನು ಎಲ್ಲರೂ ಬಳಸುವ ಅಗತ್ಯವಿಲ್ಲ, ಬದಲಾಗಿ ವಯಸ್ಸಾದವರು, ಬಿಪಿ, ಡಯಾಬಿಟಿಸ್ ಹಾಗೂ ಗರ್ಭಿಣಿಯರು ಮನೆಯಲ್ಲಿಯೇ ಈ ಆಕ್ಸಿಮೀಟರ್ ಬಳಕೆ ಮಾಡಬಹುದು. ಇದರಿಂದ ಸಾಮಾನ್ಯವಾಗಿ 95 ರಿಂದ 100 ಇರಬೇಕಾದ ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತಾ ಹೋದರೆ, ಅದು ತೀವ್ರ ಸ್ವರೂಪದ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಕೊರೊನಾ ಸೋಂಕು ಶ್ವಾಸಕೋಶವನ್ನು ಹೊಕ್ಕು ಹೆಚ್ಚಿನ ಗಂಭೀರ ಸಮಸ್ಯೆಗೆ ಒಳಗಾಗುವ ಮೊದಲೇ ಜನರು ಎಚ್ಚೆತ್ತುಕೊಳ್ಳಬಹುದು‌. ಸೋಂಕು ಸ್ವಲ್ಪ ಪ್ರಮಾಣದಲ್ಲಿ ಹರಡಿರುವಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಇದರಿಂದ ಆಸ್ಪತ್ರೆಯ ವೆಂಟಿಲೇಟರ್​​ಗಳ ಅಗತ್ಯವೂ ಹೆಚ್ಚಾಗಿ ಬೇಕಾಗುವುದಿಲ್ಲ ಎಂದು ರವಿಕುಮಾರ್ ಸುರಪುರ ತಿಳಿಸಿದರು.

ಈಗಾಗಲೇ ಆಕ್ಸಿಮೀಟರ್ ಗಳನ್ನು ಪಾಲಿಕೆಯ ಫೀವರ್ ಕ್ಲಿನಿಕ್ ನಲ್ಲಿ ಬಳಸಲಾಗುತ್ತಿದೆ. ಬೆರಳ ತುದಿಗೆ ಈ ಆಕ್ಸಿಮೀಟರ್ ಅನ್ನು ಹಾಕುವುದರಿಂದ ದೇಹದ ಆಕ್ಸಿಜನ್ ಪ್ರಮಾಣ ತಿಳಿಯಲಿದೆ. ಗಣನೀಯ ಪ್ರಮಾಣದಲ್ಲಿ ಆಕ್ಸಿಜನ್​​ ಕಡಿಮೆಯಾಗುತ್ತಿದ್ದರೆ, ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದರಿಂದ ಹೆಚ್ಚಿನ ಸಮಸ್ಯೆ ಆಗುವುದನ್ನು, ಕೊರೊನಾ ಹರಡುವುದನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details