ಕರ್ನಾಟಕ

karnataka

ಕಮರ್ಷಿಯಿಲ್ ಸ್ಟ್ರೀಟ್ ಕೆಎಫ್​ಸಿಗೆ ಹತ್ತು ಸಾವಿರ ದಂಡ ಹಾಕಿದ ಬಿಬಿಎಂಪಿ

ಬಿಬಿಎಂಪಿ ಅಧಿಕಾರಿಗಳು ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂದು ನಗರದಲ್ಲಿರುವ ಕೆಎಫ್​ಸಿ ಇಂಡಿಯಾ ಮಳಿಗೆಯಲ್ಲಿ ತ್ಯಾಜ್ಯ ವಿಂಗಡಿಸದೆ ಹಾಗೆಯೇ ಸುರಿದಿದ್ದರಿಂದ ಮಳಿಗೆಗೆ ಹತ್ತು ಸಾವಿರ ದಂಡ ವಿಧಿಸಿದ್ದಾರೆ.

By

Published : Jan 25, 2020, 11:54 PM IST

Published : Jan 25, 2020, 11:54 PM IST

ಕಮರ್ಷಿಯಿಲ್ ಸ್ಟ್ರೀಟ್ ಕೆಎಫ್​ಸಿಗೆ ಹತ್ತು ಸಾವಿರ ದಂಡ ಹಾಕಿದ ಬಿಬಿಎಂಪಿ
BBMP fined ten thousand for Commercial Street KFC

ಬೆಂಗಳೂರು :ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುವ ಮೂಲಕ ಸರಿದಾರಿಗೆ ತರಲು ಯತ್ನಿಸುತ್ತಿದೆ.

ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಟ್ವೀಟ್​

ಇಂದು ಶಿವಾಜಿನಗರದ ಕಮರ್ಷಿಯಿಲ್ ರಸ್ತೆಯಲ್ಲಿರುವ ಕೆಎಫ್​ಸಿ ಇಂಡಿಯಾ ಮಳಿಗೆಯವರು ತ್ಯಾಜ್ಯ ವಿಂಗಡಿಸದೆ ಒಟ್ಟಿಗೆ ಕಸದ ಬುಟ್ಟಿಗೆ ಸುರಿದಿದ್ದಾರೆ. ಇದನ್ನು ಕಂಡು ಬಿಬಿಎಂಪಿ ಅಧಿಕಾರಿಗಳು ಹತ್ತು ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ಹಸಿ, ಒಣ ತ್ಯಾಜ್ಯ ವಿಂಗಡಿಸದೆ ಮುಂದೆಯೂ ಮಿಶ್ರಿತ ತ್ಯಾಜ್ಯ ನೀಡಿದ್ದಲ್ಲಿ ದಂಡದ ಪ್ರಮಾಣ ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ABOUT THE AUTHOR

...view details