ಬೆಂಗಳೂರು :ಕರ್ತವ್ಯದಲ್ಲಿದ್ದ ಬಿಬಿಎಂಪಿಯ ಸಹಾಯಕ ಆಯುಕ್ತರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ವಿಚಾರ ಪಾಲಿಕೆ ಆವರಣದಲ್ಲಿ ತಲ್ಲಣವುಂಟು ಮಾಡಿತ್ತು. ಆದರೆ, ಆ ರಿಪೋರ್ಟ್ 'Inconclusive' ಎಂದು ಬಂದ ಕಾರಣ ಮತ್ತೊಮ್ಮೆ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಅದರ ವರದಿ ಇದೀಗ ನೆಗೆಟಿವ್ ಎಂದು ಬಂದಿದೆ.
ಬಿಬಿಎಂಪಿ ಅಧಿಕಾರಿಗೆ 2ನೇ ಬಾರಿ ಪರೀಕ್ಷೆ ನಡೆಸಿದಾಗ ಕೊರೊನಾ ನೆಗೆಟಿವ್..
ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದ್ದ ಬಿಬಿಎಂಪಿ ಅಧಿಕಾರಿಗೆ 2ನೇ ಬಾರಿ ಕೋವಿಡ್ ಪರೀಕ್ಷೆ ನಡೆಸಿದಾಗ ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದೆ.
ಮೊದಲ ರಿಪೋರ್ಟ್ನಲ್ಲಿ ಸರಿಯಾಗಿ ದೃಢಪಡದ ಕಾರಣ ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಅಧಿಕಾರಿ ಹೋಟೆಲ್ ಕ್ವಾರಂಟೈನ್‌ನಲ್ಲೇ ಮುಂದುವರಿದಿದ್ದರು. 2ನೇ ರಿಪೋರ್ಟ್ ನೆಗೆಟಿವ್ ಬಂದಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಕೊರೊನಾ ಪಾಸಿಟಿವ್ ಬಂದಿದೆ ಎಂದು ಬಿಬಿಎಂಪಿ ಆಯುಕ್ತರೇ ಸ್ಪಷ್ಟಪಡಿಸಿದ ಕಾರಣ ಎಲ್ಲೆಡೆ ಸುದ್ದಿಯಾಗಿತ್ತು.
ಜೊತೆಗೆ ಪಾಲಿಕೆ ಕಟ್ಟಡದ 2 ಮಹಡಿಗಳನ್ನು ಸೀಲ್ಡೌನ್ ಮಾಡಿ ಮುನ್ನೆಚ್ಚರಿಕಾ ಕ್ರಮ ಸಹ ಕೈಗೊಳ್ಳಲಾಗಿತ್ತು. ಇದೀಗ 2ನೇ ಬಾರಿ ಟೆಸ್ಟ್ಗೆ ಕಳುಹಿಸಿದಾಗ ಐಸಿಎಮ್ಆರ್ ಹಾಗೂ ಎನ್ಐವಿ ವರದಿಯಲ್ಲಿ ಬಿಬಿಎಂಪಿ ಅಧಿಕಾರಿಗೆ ಕೋವಿಡ್-19 ಪಾಸಿಟಿವ್ ಇಲ್ಲ ಎಂದು ದೃಢಪಡಿಸಿದೆ. ಇದರಿಂದಾಗಿ ಬಿಬಿಎಂಪಿ ಸಿಬ್ಬಂದಿ ನಿಟ್ಟುಸಿರುಬಿಟ್ಟಂತಾಗಿದೆ.
TAGGED:
bbmp latest news updates