ಬೆಂಗಳೂರು:ಲಾಕ್ಡೌನ್ ಸಮಸ್ಯೆಗೆ ಸಿಲುಕಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ದಿನಸಿ ಕಿಟ್ಗಳನ್ನು ನೀಡಿ ನೆರವಾಗಿರುವ ಇಲ್ಲಿನ ಕೆ.ಆರ್.ಪುರ ಪೊಲೀಸರ ಕಾರ್ಯ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಡಿಸಲುಗಳಲ್ಲಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಹೆಚ್ಚಾಗಿ ನೆಲೆಸಿದ್ದಾರೆ. ಇಂಥವರನ್ನು ಹುಡುಕಿ ಅವರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಿ ಯಾವುದೇ ಸಮಸ್ಯೆ ಆಗದಂತೆ ಕೆ.ಆರ್.ಪುರ ಪೊಲೀಸರು ನೋಡಿಕೊಂಡಿದ್ದಾರೆ. ಬಡವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಪಟ್ಟಿ ಮಾಡಿ ಸಂಘ ಸಂಸ್ಥೆಗಳು, ದಾನಿಗಳಿಂದ ಸಹಾಯ ಪಡೆದು ಕೆ.ಆರ್.ಪುರ ಕಾಲೇಜು ಮೈದಾನದಲ್ಲಿ ಕಿಟ್ಗಳನ್ನು ತಯಾರಿಸಿ ತಮ್ಮ ವಾಹನದಲ್ಲೇ ದಿನಕ್ಕೆ 200 ಜನರಂತೆ ಬಡವರನ್ನು ಕರೆಸಿ ದಿನಸಿ ಪದಾರ್ಥಗಳ ಕಿಟ್ ನೀಡಿದ್ದಾರೆ.