ಕರ್ನಾಟಕ

karnataka

ಸುರಕ್ಷಾ ಆ್ಯಪ್​ನಲ್ಲಿ ಕರೆ ಮಾಡಿದ್ರೆ 2 ನಿಮಿಷದಲ್ಲಿ ಬರ್ತಾರೆ ಪೊಲೀಸರು... ಹೀಗಿದೆ ರಿಯಾಲಿಟಿ ಚೆಕ್​

By

Published : Dec 9, 2019, 6:24 PM IST

ಬೆಂಗಳೂರು  ನಗರದಲ್ಲಿ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಹಿರಿಯ ಪೊಲೀಸ್ ಅಧಿಕಾರಿಗಳು ರಿಯಾಲಿಟಿ ಚೆಕ್‌ ಮಾಡ್ತಿದ್ದಾರೆ. ‌ನಿನ್ನೆ ರಾತ್ರಿ ಉತ್ತರ ವಿಭಾಗ ಡಿಸಿಪಿ ಸುರಕ್ಷಾ ಆ್ಯಪ್ ಬಳಕೆ ಮತ್ತು ಪೊಲೀಸರ ಸ್ಪಂದನೆಯ ಬಗ್ಗೆ ರಿಯಾಲಿಟಿ ಚೆಕ್​ನ್ನು ಖುದ್ದು ತಾವೇ ‌ನಡೆಸಿದ್ದಾರೆ.

bangalore-best-in-the-safety-of-young-women
ಯುವತಿಯರ‌ ಸುರಕ್ಷತೆಯಲ್ಲಿ ಬೆಂಗಳೂರು ಬೆಸ್ಟ್..ಯಾಕೆ ಗೊತ್ತಾ?

ಬೆಂಗಳೂರು:ನಗರದಲ್ಲಿ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಹಿರಿಯ ಪೊಲೀಸ್ ಅಧಿಕಾರಿಗಳು ರಿಯಾಲಿಟಿ ಚೆಕ್‌ ಮಾಡ್ತಿದ್ದಾರೆ. ‌ನಿನ್ನೆ ರಾತ್ರಿ ಉತ್ತರ ವಿಭಾಗ ಡಿಸಿಪಿ ಸುರಕ್ಷಾ ಆ್ಯಪ್ ಬಳಕೆ ಮತ್ತು ಪೊಲೀಸರ ಸ್ಪಂದನೆಯ ಬಗ್ಗೆ ಖುದ್ದು ತಾವೇ ರಿಯಾಲಿಟಿ ಚೆಕ್​ ‌ನಡೆಸಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಯುವತಿಯರು ಮಹಿಳಾ ಸುರಕ್ಷತೆಯಲ್ಲಿ ಬೆಂಗಳೂರು ಬೆಸ್ಟ್ ಎಂದಿದ್ದಾರೆ.

ನಿನ್ನೆ ರಾತ್ರಿ ಉತ್ತರ ವಿಭಾಗದ ಡಿಸಿಪಿ‌ ಶಶಿಕುಮಾರ್ ರಾಜಾಜಿನಗರದ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಸ್ನೇಹಿತರೊಂದಿಗೆ ಊಟಕ್ಕೆ ಬಂದಿದ್ದ ಯುವತಿಯರಿಂದ ಸುರಕ್ಷಾ ಆ್ಯಪ್ ಬಳಕೆ ಮಾಡಿಸಿದ್ದು, ಆ್ಯಪ್ ಬಳಕೆ ಬಗ್ಗೆ‌ ತಾವೇ ನಿಂತು ಅದರ ಕಾರ್ಯದ ಬಗ್ಗೆ ವಿವರಿಸಿ ಅವರಿಂದ ಕರೆ ಮಾಡಿಸಿದ್ದಾರೆ.

ಯುವತಿಯರ‌ ಸುರಕ್ಷತೆಯಲ್ಲಿ ಬೆಂಗಳೂರು ಬೆಸ್ಟ್..ಯಾಕೆ ಗೊತ್ತಾ?

ಈ ವೇಳೆ‌ 6-7 ಸೆಕೆಂಡಿನಲ್ಲಿ ಕರೆ ಸ್ವೀಕಾರ ಮಾಡಿ ಮಾಹಿತಿ ಪಡೆದ ಪೊಲೀಸ್ ಕಂಟ್ರೋಲ್ ರೂಂ ಸಿಬ್ಬಂದಿ‌ 2 ನಿಮಿಷದಲ್ಲಿ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಕಳುಹಿಸಿದ್ದಾರೆ. ಇನ್ನು ಬೆಂಗಳೂರು ಪೊಲೀಸರ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಯುವತಿಯರು ಮಹಿಳಾ ಸುರಕ್ಷತೆಯಲ್ಲಿ ಬೆಂಗಳೂರು ಬೆಸ್ಟ್ ಎಂದಿದ್ದಾರೆ.

ABOUT THE AUTHOR

...view details