ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಘಟನೆ ಬಲಗೊಳಿಸಲು ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಶ್ವಕರ್ಮ ಶ್ರಮ ಸನ್ಮಾನ ಯೋಜನೆ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ, ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಿ ಎಂದು ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ಕೊಟ್ಟರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ವಿಜಯೇಂದ್ರ ಪ್ರಮುಖರ ಸಭೆ ನಡೆಸಿದರು. ದೇಸೀಯ ಕುಲಕಸುಬು ಆಧಾರಿತ ಕುಶಲಕರ್ಮಿಗಳು ಈ ನೆಲದ ಶ್ರೀಮಂತ ಸಂಸ್ಕೃತಿಯ ರಾಯಭಾರಿಗಳು. ಅವರ ಕೌಶಲ್ಯತೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿರುವ 'ವಿಶ್ವಕರ್ಮ ಶ್ರಮ ಸನ್ಮಾನ' ಯೋಜನೆಯನ್ನು ಎಲ್ಲಾ ಅರ್ಹರಿಗೂ ತಲುಪುವ ಕುರಿತು ಪ್ರಮುಖರು ಮತ್ತು ಪದಾಧಿಕಾರಿಗಳಿಗೆ ಅವರು ವಿವರಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ವಿಜಯೇಂದ್ರ ಪ್ರಮುಖರ ಸಭೆ ನಡೆಸಿದರು. ಬಡಗಿ, ಬೋಟ್ ನಿರ್ಮಾಣ, ಕಮ್ಮಾರ, ಶಸ್ತ್ರಾಸ್ತ್ರ ಹಾಗೂ ಬೀಗ ತಯಾರಕರು, ಅಕ್ಕಸಾಲಿಗ, ಕುಂಬಾರ, ಚಮ್ಮಾರ, ಕ್ಷೌರಿಕರು, ಗೊಂಬೆ ತಯಾರಕರು ಸೇರಿದಂತೆ 18 ಸಾಂಪ್ರದಾಯಿಕ ಕುಶಲಕರ್ಮಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ವರ್ಗ ಬಿಜೆಪಿ ಬೆಂಬಲಕ್ಕೆ ನಿಲ್ಲುವಂತಾಗಲು ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಸರಿಯಾಗಿ ತಲುಪುವಂತೆ ಮಾಡಬೇಕು. ಸ್ವತಃ ಕಾಳಜಿ ವಹಿಸಿ ಯೋಜನೆ ತಲುಪಿಸಬೇಕು ಎಂದು ಹೇಳಿದರು.
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ರಾಜ್ಯ ಉಸ್ತುವಾರಿ ಕುಲ್ಜೀತ್ ಸಹಾಲ್, ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ನೆ.ಲ.ನರೇಂದ್ರಬಾಬು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ:ಪಾವತಿ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ಪಿಎಂ ವಿಶ್ವಕರ್ಮ ಯೋಜನೆ ಸೇರ್ಪಡೆ: ಆರ್ಬಿಐ