ಕರ್ನಾಟಕ

karnataka

ETV Bharat / state

ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಕೈಬಿಡಬೇಕು ಎಂಬುದು ವರಿಷ್ಠರ ತೀರ್ಮಾನ: ಬಿ.ಸಿ. ಪಾಟೀಲ್ - ಸಂಪುಟ ಸಂಬಂಧ ಪ್ರತಿಕ್ರಿಯೆಗಳು

ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಕೈ ಬಿಡಬೇಕೆಂಬುದು ಪಕ್ಷದ ವರಿಷ್ಠರ ನಿರ್ಧಾರ. ಎಲ್ಲವೂ ವರಿಷ್ಠರ ಗಮನದಲ್ಲಿದ್ದು, ಅವರ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

b c patil
ಬಿ ಸಿ ಪಾಟೀಲ್

By

Published : Jul 27, 2021, 12:44 PM IST

ಬೆಂಗಳೂರು: ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳುತ್ತಾರೆ, ಯಾರನ್ನು ಕೈ ಬಿಡುತ್ತಾರೆ ಎಂದು ಪಕ್ಷದ ವರಿಷ್ಠರು ಇನ್ನೂ ಎಲ್ಲಿಯೂ ಹೇಳಿಲ್ಲ. ಊಹಾಪೋಹ, ವದಂತಿಗಳ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಟ್ಟು ಬಂದಾಗಲೇ ನಾವೆಲ್ಲ ಆತಂಕ ಪಡಲಿಲ್ಲ. ಪಕ್ಷ ಬಿಟ್ಟು ಬಂದಾಗ ನಮ್ಮನ್ನು ಬಿಜೆಪಿ ಚೆನ್ನಾಗಿ ನಡೆಸಿಕೊಂಡು ಸಚಿವ ಸ್ಥಾನ ನೀಡಿತ್ತು. ಎಲ್ಲವೂ ವರಿಷ್ಠರ ಗಮನದಲ್ಲಿದೆ ಎಂದರು.

ಹೊಸದಾಗಿ ಹೇಳುವಂತಹದ್ದೇನಿಲ್ಲ. ಬಿಜೆಪಿ ರಾಜಕೀಯವಾಗಿ ಬಹಳ ದೊಡ್ಡ ಪಕ್ಷ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಬಿ ಸಿ ಪಾಟೀಲ್​ ಸ್ಪಷ್ಟಪಡಿಸಿದರು.

ಇದನ್ನೂ ಓದಿ:‘ಮುಂದಿನ ಸಿಎಂ ಸಿದ್ದರಾಮಯ್ಯ’.. ಬೆಳಗಾವಿಯಲ್ಲೂ ವಿಪಕ್ಷ ನಾಯಕನ ಪರ ಘೋಷಣೆ

ABOUT THE AUTHOR

...view details