ಬೆಂಗಳೂರು: ಇಂದು ಆಯುಧ ಪೂಜೆಯ ದಿನವಾಗಿದ್ದು, ಚಾಮರಾಜಪೇಟೆಯ ಸಿಎಆರ್ ಮುಖ್ಯ ಕಚೇರಿಯಲ್ಲಿ ದಿನದ 24 ಗಂಟೆಗಳ ಕಾಲ ಬ್ಯುಸಿ ಇರುವ ಠಾಣಾ ವಾಹನ, ವಿವಿಧ ಆಯುಧಗಳನ್ನು ಶುಚಿ ಮಾಡಿ, ಸಿಂಗರಿಸಿ ಪೂಜಿಸಲಾಯಿತು.
ಪೊಲೀಸ್ ಸಿಬ್ಬಂದಿಗೆ ಹಬ್ಬದ ಸಂಭ್ರಮ.. ನಗರ ಆಯುಕ್ತ ಪಂಥ್ ಠಾಣೆಗಳಿಗೆ ಭೇಟಿ - Bangalore Latest News Update
ಚಾಮರಾಜಪೇಟೆಯ ಸಿಎಆರ್ ಮುಖ್ಯ ಕಚೇರಿಯಲ್ಲಿ ಹಬ್ಬದ ಸಂಭ್ರಮ ನಿರ್ಮಾಣವಾಗಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜಾ ಕಾರ್ಯ ನೆರವೇರಿಸಿದರು..
ಪೊಲೀಸ್ ಠಾಣೆಯಲ್ಲಿ ಹಬ್ಬದ ಸಂಭ್ರಮ: ನಗರ ಆಯುಕ್ತರಿಂದ ಠಾಣೆಗಳಿಗೆ ಭೇಟಿ
ಚಾಮರಾಜಪೇಟೆಯ ಸಿಎಆರ್ ಮುಖ್ಯ ಕಚೇರಿಯಲ್ಲಿ ಹಬ್ಬದ ಸಂಭ್ರಮ ನಿರ್ಮಾಣವಾಗಿದೆ. ಮಹಿಳಾ ಸಿಬ್ಬಂದಿ ಠಾಣೆಯ ಮುಂಭಾಗ ರಂಗೋಲಿ ಬಿಡಿಸಿ, ಹೂವು ಹಾರಗಳಿಂದ ದೇವಿಯ ಮೂರ್ತಿಯನ್ನು ಅಲಂಕರಿಸಿ ಆಚರಣೆ ಮಾಡುತ್ತಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜಾ ಕಾರ್ಯ ನೆರವೇರಿಸಿದರು. ಪೂಜೆಯ ವೇಳೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಆನಂತರ ಆಯುಕ್ತರು ನಗರದ ವಿವಿಧ ಠಾಣೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಜತೆಗೆ ಸಂಭ್ರಮದಲ್ಲಿ ಭಾಗಿಯಾದರು.