ಕರ್ನಾಟಕ

karnataka

ETV Bharat / state

ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ದರೋಡೆಕೋರರ ಹೆಡೆಮುರಿ ಕಟ್ಟಿದ ಪೊಲೀಸ್ರು

ಸಿಲಿಕಾನ್ ಸಿಟಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅಪಹರಣ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿಂತೆ ಅಂತಾರಾಜ್ಯ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಲಿಕಾನ್ ಸಿಟಿ ಪೊಲೀಸರು ಭರ್ಜರಿ ಭೇಟೆಯಾಡಿದ್ದು ಅಂತರರಾಜ್ಯ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

By

Published : May 2, 2019, 4:53 PM IST

ಬೆಂಗಳೂರು: ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡು ಅಪಹರಣ ಮಾಡಿ ದರೋಡೆ ನಡೆಸಿದ್ದ ಅಂತಾರಾಜ್ಯ ಆರೋಪಿಗಳನ್ನ ಬಂಧಿಸುವಲ್ಲಿ ಸಿಲಿಕಾನ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋರಮಂಗಲದ ವ್ಯಕ್ತಿವೋರ್ವನ ಮನೆಗೆ ನುಗ್ಗಿ ದರೋಡೆ ಮತ್ತು ಕಿಡ್ನಾಪ್​ಮಾಡಿ ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಆಗ್ನೇಯ ವಿಭಾಗದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಎಪ್ರಿಲ್​ 22 ರ ರಾತ್ರಿ ಕೋರಮಂಗಲದ ಮಧು ಎಂಬುವರ ಮನೆಗೆ ನುಗ್ಗಿ ಆತನನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಅಲ್ಲದೆ, ಮನೆಯಲ್ಲಿದ್ದ ಮೊಬೈಲ್ ಪೋನ್, ಲ್ಯಾಪ್ ಟಾಪ್ ಮತ್ತು ನಗದು ಹಣ ಸುಲಿಗೆ ಮಾಡಿ ನಂತರ ಮಧುವನ್ನ ಕಿಡ್ನಾಪ್ ಮಾಡಿದ್ದರು. ಈ ವೇಳೆ ಕೆ.ಆರ್. ಪುರಂ ಅವಲಹಳ್ಳಿ ಮಾರ್ಗ ಮಧ್ಯೆ ಎಟಿಎಂ ಕಾರ್ಡ್ ನಿಂದ ಹಣ ಡ್ರಾ ಮಾಡುವಂತೆ ಬೆದರಿಸಿದ್ದರು. ಇದಕ್ಕೆ ನಿರಾಕರಿಸಿದ್ದ ಮಧು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮುಳ್ಳು ತಂತಿಯ ಮೇಲೆ ಎಸೆದು ಹೋಗಿದ್ದರು. ನಂತರ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರು.

ಈ ಘಟನೆ ಕುರಿತು ಮಧು ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಈ ಹಿನ್ನೆಲೆ ಆಸ್ಪತ್ರೆಯವರೇ ಕೋರಮಂಗಲ ಠಾಣೆಗೆ ವಿಚಾರ ತಿಳಿಸಿದ್ರು. ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡ ಆಗ್ನೇಯ ವಿಭಾಗ ಡಿಸಿಪಿ ಇಶಾಪಂತ್, ಮಡಿವಾಳ ಎಸಿಪಿ ಸೋಮೆಗೌಡ , ಕೋರಮಂಗಲ ಇನ್ಸಪೆಕ್ಟರ್ ಪ್ರಶಾಂತ್ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ನಿಕುಲ್ ಬಿ.ಎಸ್ ಅಲಿಯಾಸ್ ಬೆನ್ನಿ, ಸ್ಟೀಪನ್ ರಾಜ್ ಅಲಿಯಾಸ್ ಸ್ಟೀವನ್, ವೇಣು ಮಾದವ್‌ ಬಂಧಿತರು.

ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದರ ಜೊತೆಗೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆಯಂತೆ. ಈ ಪ್ರಕರಣವನ್ನು ಭೇದಿಸಿಗಾದ ಪ್ರೇಮ್ ಮಹದೇವ್ ಮತ್ತು ಅನುಘೋಷ್, ರಾಹುಲ್ ಎಂಬುವರನ್ನ ಬಂಧಿಸಿದ್ದಾರೆ. ಅರೋಪಿಗಳಿಂದ ಬರೋಬ್ಬರಿ 5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಅರೋಪಿಗಳನ್ನ ವಿಚಾರಣೆ ನಡೆಸಿದಾಗ ಸಾಫ್ಟ್​​ವೇರ್ ಇಂಜಿನಿಯರ್ಸ್​ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ಪೊಲೀಸರು ನಗದು, ಕಾರ್ ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details