ಕರ್ನಾಟಕ

karnataka

ಬೆಂಗಳೂರಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ವಿದೇಶಿಯರು ಸೇರಿ 175 ಮಂದಿ ಅಂದರ್​

ಬೆಂಗಳೂರಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದವರಿಗೆ ಸಿಸಿಬಿ ಪೊಲೀಸರು ಶಾಕ್​ ನೀಡಿದ್ದಾರೆ. ಮಿಂಚಿನ ಕಾರ್ಯಾಚರಣೆ ಮೂಲಕ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ 175 ಜನರನ್ನು ಬಂಧಿಸಿದ್ದಾರೆ.

By

Published : Aug 25, 2019, 10:18 AM IST

Published : Aug 25, 2019, 10:18 AM IST

ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ: 50 ಮಂದಿ ವಿದೇಶೀಯರು ಸೇರಿದಂತೆ 175 ಬಂಧನ

ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಅಕ್ರಮವಾಗಿ ನಡೆಸುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ವಿದೇಶಿಯರು ಸೇರಿ 175 ಮಂದಿ ಅಂದರ್​

ನಗರದ ಮಹಾಲಕ್ಷ್ಮೀ ಲೇಔಟ್​​ನಲ್ಲಿ ಹೋಟೆಲ್, ಅಶೋಕನಗರದ ಬಾರ್ ಆ್ಯಂಡ್​ ರೆಸ್ಟೋರೆಂಟ್​ನಲ್ಲಿ ಬೆಳಗಿನ ಜಾವ 4 ಗಂಟೆಯವರೆಗೂ ರೇವ್ ಪಾರ್ಟಿ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ದಾಳಿ ವೇಳೆ ಧ್ವನಿ ವರ್ಧಕ ಬಳಸಿ ಜೋರಾಗಿ ಹಾಡುಗಳನ್ನ ಹಾಕಿ ಗ್ರಾಹಕರಿಗೆ ಡಾನ್ಸ್​ ಮಾಡಲು ಅವಕಾಶ ನೀಡಿರುವುದು ತಿಳಿದುಬಂದಿದೆ. ಹೀಗಾಗಿ 50 ಮಂದಿ ವಿದೇಶಿಯರೂ ಸೇರಿ ಒಟ್ಟು 175 ಜನರನ್ನ ಬಂಧಿಸಿ ಮಹಾಲಕ್ಷ್ಮಿ ಲೇಔಟ್ ಹಾಗೂ ಅಶೋಕ್​ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರೇವ್​ ಪಾರ್ಟಿ ವೇಳೆ ಮಾದಕ ದ್ರವ್ಯ ಬಳಸಿರುವ ಗುಮಾನಿ ಇದ್ದು, ತನಿಖೆ ‌ಮುಂದುವರೆದಿದೆ.

ABOUT THE AUTHOR

...view details