ಬೆಂಗಳೂರು: ಸಚಿವ ಸ್ಥಾನ ಸಿಗ್ಲಿಲ್ಲ ಅನ್ನೋ ಅಸಮಾಧಾನ ಇದೆ. ನನ್ನ ಹಿರಿತನಕ್ಕೆ ಬೆಲೆ ಕೊಟ್ಟಿಲ್ಲ ಅನ್ನೋ ಬೇಸರ ಇದೆ ಎಂದು ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಹೇಳಿದ್ದಾರೆ.
ಸಚಿವ ಸ್ಥಾನ ಸಿಗ್ಲಿಲ್ಲ ಅನ್ನೋ ಅಸಮಾಧಾನ ಇದೆ: ಶಾಸಕ ಮುನಿಯಪ್ಪ - ಮುನಿಯಪ್ಪ
ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ, ನಮ್ಮ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಸಿಗ್ತಿಲ್ಲ. ಅಲ್ಲಿ ನಾವು ನೋವು ತಿನ್ನುತ್ತಿದ್ದೇವೆ. ಅವರ ವೈಯಕ್ತಿಕ ಆಸಕ್ತಿ ಮೇಲೆ ಅಧಿಕಾರ ಹಂಚಲಾಗ್ತಿದೆ. ನಾವೆಲ್ಲಾ ಕಾಂಗ್ರೆಸಿಗೆ ಕೆಲಸ ಮಾಡ್ತೀವಿ. ಕಾಂಗ್ರೆಸ್ ಇರೋವರೆಗೂ ಹೋರಾಟ ಮಾಡ್ತೀವಿ ಎಂದು ಶಾಸಕ ವಿ.ಮುನಿಯಪ್ಪ ಹೇಳಿದ್ದಾರೆ.
ಶಾಸಕ ಮುನಿಯಪ್ಪ
ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಸಿಗ್ತಿಲ್ಲ. ಅಲ್ಲಿ ನಾವು ನೋವು ತಿನ್ನುತ್ತಿದ್ದೇವೆ. ಅವರ ವೈಯಕ್ತಿಕ ಆಸಕ್ತಿ ಮೇಲೆ ಅಧಿಕಾರ ಹಂಚಲಾಗ್ತಿದೆ. ನಾವೆಲ್ಲಾ ಕಾಂಗ್ರೆಸ್ಗೆ ಕೆಲಸ ಮಾಡ್ತೀವಿ. ಕಾಂಗ್ರೆಸ್ ಇರೋವರೆಗೂ ಹೋರಾಟ ಮಾಡ್ತೀವಿ. ಆದ್ರೆ ನಾವು ಬೀದಿಗೆ ಬರೋಕೆ ಆಗಲ್ಲ ಎಂದರು.
ಡಿಕೆಶಿ ಅವ್ರ ಜೊತೆ ಚರ್ಚೆ ನಡೆಸಿದೆ. ಪಕ್ಷವನ್ನು ಉಳಿಸಿಕೊಳ್ಳಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಸದ್ಯಕ್ಕೆ ತೊಳಲಾಟ ಇದೆ. ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇದೆ ಎಂದರು.