ಕರ್ನಾಟಕ

karnataka

ETV Bharat / state

ಒಕ್ಕಲಿಗರ ಮೀಸಲು ಹೆಚ್ಚಳ ಕುರಿತ ಅಪೇಕ್ಷೆಗಳಿಗೆ ನ್ಯಾಯಬದ್ಧವಾಗಿ ಕ್ರಮ: ಸಚಿವ ಅಶ್ವತ್ಥ್ ನಾರಾಯಣ್ - vokkaligas reservation increase

ಹಲವು ಸಮುದಾಯಗಳಿಂದ ಮೀಸಲಾತಿಗೆ ಬೇಡಿಕೆಗಳು ಬಂದಿವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.

Ashwath Narayan reaction about increase of vokkaligas reservation
Ashwath Narayan reaction about increase of vokkaligas reservation

By

Published : Oct 11, 2022, 6:23 PM IST

ಬೆಂಗಳೂರು: ಮೀಸಲಾತಿ ಹೆಚ್ಚಳ ಬಗ್ಗೆ ಎಲ್ಲರ ಬೇಡಿಕೆ, ಅಪೇಕ್ಷೆಗಳಿಗೆ ನ್ಯಾಯಬದ್ಧವಾಗಿ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತೇವೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯಕ್ಕೆ ಶೇ 10 ವರೆಗೆ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಕ್ಕಲಿಗ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಹಲವು ಸಮುದಾಯಗಳಿಂದ ಮೀಸಲಾತಿಗೆ ಬೇಡಿಕೆಗಳು ಬಂದಿವೆ. ಮೀಸಲಾತಿ ಕೊಡುವಲ್ಲಿ ಸರ್ಕಾರ ಮುಕ್ತವಾಗಿದೆ ಎಂದರು.

ಈ ಸಂಬಂಧ ಪರಿಶೀಲನೆ ನಡೆಸಿ ಸರ್ಕಾರ ಕ್ರಮ ವಹಿಸಲಿದೆ. ನಾವೆಲ್ಲ ಸಂವಿಧಾನದಡಿ ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಸ್ಪಂದಿಸಿ ನ್ಯಾಯಯುತವಾಗಿಯೇ ಸರ್ಕಾರ ಕೆಲಸ ಮಾಡಲಿದೆ. ನಾನು ಒಂದು ಸಮುದಾಯದ ನಾಯಕ ಅನ್ನುವುದಕ್ಕಿಂತಲೂ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದೇನೆ ಎಂದರು.

ಇದನ್ನೂ ಓದಿ:ಐಎಎಸ್ ಅಧಿಕಾರಿಗಳ ಪ್ರಭಾವದಿಂದ ಕನ್ನಡದ ಅನುಷ್ಠಾನ ಸಾಧ್ಯವಾಗುತ್ತಿಲ್ಲ..ಟಿ ಎಸ್ ನಾಗಾಭರಣ

ABOUT THE AUTHOR

...view details