ಬೆಂಗಳೂರು: ಕಳೆದ ಐದು ತಿಂಗಳುಗಳಿಂದ ಮಲ್ಲತ್ತಹಳ್ಳಿಯ ರಂಗಕೇಂದ್ರ ಕಲಾಗ್ರಾಮದ ದುರಸ್ತಿಗೊಳಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಂಗಕರ್ಮಿಗಳು ಸೋಮವಾರ ನಗರದಲ್ಲಿ ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಕಲಾಗ್ರಾಮ’ ದುರಸ್ತಿಗೆ ಆಗ್ರಹಿಸಿ ರಂಗಕರ್ಮಿಗಳಿಂದ ವಿಭಿನ್ನ ಪ್ರತಿಭಟನೆ
ಕಳೆದ ಐದು ತಿಂಗಳಿನಿಂದ ರಂಗಕೇಂದ್ರ ಕಲಾಗ್ರಾಮವನ್ನು ಮುಚ್ಚಿದ್ದರಿಂದ ರಂಗಕರ್ಮಿಗಳು ಗರಂ ಆಗಿದ್ದಾರೆ. ರಂಗ ಪ್ರೇಕ್ಷಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸುವಂತೆ ಒತ್ತಾಯಿಸಿ ನಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯ್ತು.
ಕಲಾಗ್ರಾಮದ ದುರಸ್ತಿಗೊಳಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ರಂಗಕರ್ಮಿಗಳು
ಕಲಾಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಕಳೆದ ಐದು ತಿಂಗಳಿನಿಂದ ಅದನ್ನು ಮುಚ್ಚಲಾಗಿದೆ. ಆದರೆ, ಈವರೆಗೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಬೇರೆ ಕಡೆ ಸಾವಿರಾರು ರೂಪಾಯಿ ಬಾಡಿಗೆ ತೆತ್ತು ನಾಟಕ ಮಾಡಲಾಗುವುದಿಲ್ಲ. ಹಾಗಾಗಿ ಆದಷ್ಟು ಬೇಗ ಕಲಾಗ್ರಾಮದಲ್ಲಿ ನಾಟಕಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಂಗಕರ್ಮಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.