ಬೆಂಗಳೂರು: ಈಡಿಗ ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರುಗಳ ನಿಯೋಗ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ಮಾಡಿ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ನೇಮಿಸಿರುವ ಸಮಿತಿ ಮರುಪರಿಶೀಲಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಸಿಗಂದೂರು ದೇವಾಲಯ ಸಮಿತಿ ರಚನೆ ಮರು ಪರಿಶೀಲಿಸಿ: ಸಿಎಂಗೆ ಈಡಿಗ ಸಮುದಾಯದ ಮನವಿ - ಈಡಿಗ ಸಮುದಾಯದ ಸ್ವಾಮೀಜಿಗಳ ನಿಯೋಗ
ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ನೇಮಿಸಿರುವ ಸಮಿತಿಯನ್ನು ಮರು ಪರಿಶೀಲಿಸುವಂತೆ ಈಡಿಗ ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರುಗಳ ನಿಯೋಗ ಇಂದು ಸಿಎಂ ಬಿಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾದ ಸ್ವಾಮೀಜಿಗಳ ನಿಯೋಗ, ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಜಿಲ್ಲಾಧಿಕಾರಿಗಳು ಮೇಲ್ವಿಚಾರಣಾ ಸಮಿತಿ ರಚಿಸಿದೆ. ಸದರಿ ದೇವಾಲಯ ಹಲವಾರು ವರ್ಷಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಭಕ್ತರನ್ನು ಹೊಂದಿದೆ. ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗ ಸಮುದಾಯದಲ್ಲಿ ಸೇರಿದ ರಾಮಪ್ಪ ಹಲವಾರು ವರ್ಷಗಳಿಂದ ಸಿಗಂದೂರು ಚೌಡೇಶ್ವರಿ ದೇವಾಸ್ಥಾನದ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿರುತ್ತಾರೆ ಎಂದು ವಿವರಿಸಿದರು.
ದೇವಸ್ಥಾನಕ್ಕೆ ಸಂಬಂಧಿಸಿದಂತೆ, ಯಾವುದೇ ಸಣ್ಣ - ಪುಟ್ಟ ಲೋಪದೋಷಗಳಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ಹಾಗೂ ದೇವಸ್ಥಾನದ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಡೆಸಲು ನಿದರ್ಶನ ನೀಡಿ ಟ್ರಸ್ಟ್ ವತಿಯಿಂದಲೇ ಸಾಮಾಜಿಕ, ಧಾರ್ಮಿಕ ಮತ್ತು ದೇವಸ್ಥಾನದ ಇತರ ಕಾರ್ಯಗಳನ್ನು ಈ ಹಿಂದಿನಂತೆಯೇ ನಡೆಸಲು ಸಂಬಂಧಿಸಿದವರಿಗೆ ಆದೇಶ ನೀಡುವಂತೆ ಮನವಿ ಮಾಡಿದರು.