ಕರ್ನಾಟಕ

karnataka

ETV Bharat / state

ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೋಟಿ 74 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ವಶ - anekal

37 ಪ್ರಕರಣಗಳನ್ನು ಭೇದಿಸಿರುವ ಆನೇಕಲ್ ಉಪ ವಿಭಾಗದ ಪೊಲೀಸರು, 1 ಕೋಟಿ 74 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

anekal
ಆನೇಕಲ್ ಪೊಲೀಸರ ಕಾರ್ಯಾಚರಣೆ..

By

Published : Jul 14, 2021, 11:26 PM IST

ಆನೇಕಲ್/ಬೆಂಗಳೂರು:ಆನೇಕಲ್ ಉಪ ವಿಭಾಗದ ಪೊಲೀಸರು ಕಳ್ಳತನ, ದರೋಡೆ ಸುಲಿಗೆ ಪ್ರಕರಣಗಳಿಂದ 1 ಕೋಟಿ 74 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ್ದ ಬೈಕ್, ಮೊಬೈಲ್, ಹಾಗೂ ಚಿನ್ನಾಭರಣವನ್ನು ಪೊಲೀಸರು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಆನೇಕಲ್ ಉಪ ವಿಭಾಗದ 7 ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 37 ಪ್ರಕರಣಗಳನ್ನ ಭೇದಿಸಿರುವ ಪೊಲೀಸರು 100ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, 200ಕ್ಕೂ ಹೆಚ್ಚು ಮೊಬೈಲ್​​ ಫೋನ್​​ಗಳನ್ನು ಜಪ್ತಿ ಮಾಡಿದ್ದಾರೆ. ಜತೆಗೆ ಚಿನ್ನದ ಸರಗಳನ್ನು ದೋಚಿದ್ದ 56 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.

ಆನೇಕಲ್ ಪೊಲೀಸರ ಕಾರ್ಯಾಚರಣೆ..

ಹೆಬ್ಬಗೋಡಿ ಖಾಸಗಿ ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಆನೇಕಲ್ ಉಪ ವಿಭಾಗದ ಹೆಬ್ಬಗೋಡಿ, ಜಿಗಣಿ, ಸರ್ಜಾಪುರ, ಅತ್ತಿಬೆಲೆ, ಸೂರ್ಯನಗರ, ಆನೇಕಲ್ ಹಾಗೂ ಬನ್ನೇರುಘಟ್ಟ ಪೊಲೀಸ್ ಠಾಣೆಗಳಲ್ಲಿನ ಈವರೆಗಿನ ಒಟ್ಟು ಪ್ರಕರಣಗಳನ್ನು ಪತ್ತೆ ಮಾಡಿದ ಪೊಲೀಸ್ ಸಿಬ್ಬದಿಯನ್ನು ಐಜಿಪಿ ಮುಕ್ತ ಕಂಠದಿಂದ ಪ್ರಶಂಸಿಸಿದರು.

ಹಣ, ಬೈಕ್, ಆಭರಣ ಕಳೆದುಕೊಂಡವರಿಗೆ ಮರಳಿ ನೀಡುವ ಮೂಲಕ ಸಮಾಜದಲ್ಲಿ ಪೊಲೀಸರ ಮೇಲೆ ಇನ್ನಷ್ಟು ನಂಬಿಕೆ ಬಂದಿದೆ. ತಾಲೂಕಿನಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಬಗ್ಗೆ ದೂರುಗಳು ಬಂದಿದೆ. ಈ ಬಗ್ಗೆ ಪೊಲೀಸರೊಂದಿಗೆ ನಾಗರೀಕರು ಮಾಹಿತಿ ನೀಡುವ ಮೂಲಕ ಯುವಕರನ್ನು ಕಾಪಾಡಲು ಕೈ ಜೋಡಿಸಬೇಕು ಎಂದರು.

ಕಾರ್ಯಾಚರಣೆ ನಡೆಸಿದ ಪ್ರಕರಣಗಳ ವಿವರ:

  • ಹೆಬ್ಬಗೋಡಿ ಪೊಲೀಸರು 3 ಸುಲಿಗೆ, 3 ಮನೆಕಳ್ಳತನ ಹಾಗೂ 25 ದ್ವಿಚಕ್ರ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು ರೂ 51.50.000 ಲಕ್ಷದ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿರುತ್ತಾರೆ.
  • ಜಿಗಣಿ ಪೊಲೀಸರು 2 ಡಕಾಯಿತಿ ಪ್ರಕರಣಗಳು, 2 ಸುಲಿಗೆ ಪ್ರಕರಣ, 2 ಮನೆಕಳ್ಳತನ ಹಾಗೂ 15 ದ್ವಿಚಕ್ರ ವಾಹನ ಕಳ್ಳತನ ಹಾಗೂ 100 ಮೊಬೈಲ್ ಪೋನ್‌ಗಳನ್ನು ಪತ್ತೆ ಮಾಡಿ ಒಟ್ಟು 47 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
  • ಸೂರ್ಯನಗರ ಪೊಲೀಸರು ಮನೆ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿ 50 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
  • ಅತ್ತಿಬೆಲೆ ಪೊಲೀಸರು 1 ಸುಲಿಗೆ ಪ್ರಕರಣ, 9 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 10 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
  • ಬನ್ನೇರುಘಟ್ಟ ಪೊಲೀಸರು 1 ಮನೆ ಕಳ್ಳತನ ಮತ್ತು 2 ವಾಹನ ಕಳ್ಳತನ ಪ್ರಕರಣವನ್ನು ಪತ್ತೆ 5.96ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
  • ಸರ್ಜಾಪುರ ಪೊಲೀಸರು 2 ಸುಲಿಗೆ ಪ್ರಕರಣ ಮತ್ತು 18 ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿ 11 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
  • ಆನೇಕಲ್ ಪೊಲೀಸರು 2 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ರೂ 1 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಆನೇಕಲ್ ಉಪ ವಿಭಾಗದ ಉಪಾಧೀಕ್ಷಕರಾದ ಡಾ, ಹೆಚ್, ಎಂ, ಮಹದೇವಪ್ಪ, ಹಾಗೂ ಇನ್ಸ್​​ಪೆಕ್ಟರ್‌ಗಳಾದ ಗೌತಮ್, ಕೆ. ವಿಶ್ವಾನಾಥ್, ಬಿ. ಕೆ. ಶೇಖರ್, ರವೀಂದ್ರ, ಮಹಾನಂದ್, ಮತ್ತು ಸಬ್ ಇನ್ಸ್​​ಪೆಕ್ಟರ್‌ಗಳು ಹಾಜರಿದ್ದರು.

ABOUT THE AUTHOR

...view details