ಕರ್ನಾಟಕ

karnataka

ETV Bharat / state

ಆನಂದ್​ ಸಿಂಗ್​ ಮೇಲಿನ ಹಲ್ಲೆ ಕೇಸ್​: ಕಂಪ್ಲಿ ಶಾಸಕನಿಗೆ ಕೊನೆಗೂ ಸಿಕ್ತು ಬೇಲ್

ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಂಪ್ಲಿ ಗಣೇಶ್ ಬಿಡುಗಡೆಗೆ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ  ಹೈಕೋರ್ಟ್ ಮೆಟ್ಟಿಲೇರಿದ್ದ ಶಾಸಕನಿಗೆ ಕೊನೆಗೂ ಜಾಮೀನು​ ಸಿಕ್ಕಿದೆ.

By

Published : Apr 24, 2019, 11:29 AM IST

Updated : Apr 24, 2019, 4:14 PM IST

ಕಂಪ್ಲಿ ಶಾಸಕ ಜೆ.ಎನ್.ಗಣೇಶ್-ಆನಂದ್​ ಸಿಂಗ್​

ಬೆಂಗಳೂರು:ಶಾಸಕ ಆನಂದ್ ಸಿಂಗ್ ಮೇಲೆ‌ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್​ಗೆ ಕೊನೆಗೂ ಇಂದು ಜಾಮೀನು ಸಿಕ್ಕಿದೆ.

ಹೈಕೋರ್ಟ್ ಏಕಸದಸ್ಯ ಪೀಠ, ಶಾಸಕ ಗಣೇಶ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ಹೊರವಲಯದ ಈಗಲ್​ಟನ್ ರೆಸಾರ್ಟ್​ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿರುವ ಆರೋಪ ಗಣೇಶ್ ಮೇಲಿದೆ. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಗಣೇಶ್​ ಅವರನ್ನು ಫೆ.20 ರಂದು ಅಹಮದಾಬಾದ್​​ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದರು.

ಈ ಮಧ್ಯೆ, ಗಣೇಶ್ ತಮ್ಮ ಬಿಡುಗಡೆಗೆ ಜಾಮೀನು ಅರ್ಜಿ ಸಲ್ಲಿದ್ದರು. ಆದ್ರೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗಣೇಶ್​ ಪರ ವಕೀಲರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿತ್ತು. ನಂತರ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಣೇಶ್ ಗೆ​ ಚಿಕಿತ್ಸೆ:

ಮತ್ತೊಂದೆಡೆ ಕಂಪ್ಲಿ ಶಾಸಕ ಗಣೇಶ್​ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂತ್ರಕೋಶ - ಬೆನ್ನು ಹಾಗೂ ಹರಿಣಿ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಕಂಪ್ಲಿ ಗಣೇಶ್​ ಅವರನ್ನ ಜೈಲಾಧಿಕಾರಿಗಳ ಅನುಮತಿ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಈ ಮಧ್ಯೆ ಹೈಕೋರ್ಟ್​ ಕಂಪ್ಲಿ ಶಾಸಕರಿಗೆ ಜಾಮೀನು ಮಂಜೂರು ಮಾಡಿದ್ದು, ಕೋರ್ಟ್ ಪ್ರತಿ ಸಿಕ್ಕ ತಕ್ಷಣ ಅವರನ್ನ ಬಿಡುಗಡೆ ಮಾಡಲಾಗುವುದು ಎಂದು ಜೈಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Apr 24, 2019, 4:14 PM IST

For All Latest Updates

TAGGED:

ABOUT THE AUTHOR

...view details