ಕರ್ನಾಟಕ

karnataka

ETV Bharat / state

ಮಾನಸಿಕ, ದೈಹಿಕ ಕಿರುಕುಳ ಆರೋಪ.. ಬೆಂಗಳೂರಲ್ಲಿ ಹೆಡ್ ಕಾನ್ಸ್​ಟೇಬಲ್​ ವಿರುದ್ಧ ದೂರು ನೀಡಿದ ಪತ್ನಿ - bengaluru police head constable case

ಬೆಂಗಳೂರಿನಲ್ಲಿ ಪೊಲೀಸ್ ಹೆಡ್​​ ಕಾನ್ಸ್​ಟೇಬಲ್​ ವಿರುದ್ಧ​ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತರ ಕಚೇರಿ ಹಾಗೂ ಗಿರಿನಗರ ಪೊಲೀಸ್ ಠಾಣೆಗೆ ಆತನ ಪತ್ನಿಯೇ ದೂರು ನೀಡಿದ್ದಾರೆ.

harassment-case-against-police-head-constable-in-bengaluru
ಬೆಂಗಳೂರಲ್ಲಿ ಹೆಡ್ ಕಾನ್ಸ್​ಟೇಬಲ್​ ವಿರುದ್ಧ ದೂರು ನೀಡಿದ ಪತ್ನಿ

By

Published : May 16, 2022, 4:10 PM IST

ಬೆಂಗಳೂರು :ಪೊಲೀಸ್ ಹೆಡ್​​ ಕಾನ್ಸ್​ಟೇಬಲ್​ವೊಬ್ಬ​ ಪ್ರತಿನಿತ್ಯ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಸಿಟಿ ಸ್ಪೆಷಲ್ ಬ್ರಾಂಚ್​ನಲ್ಲಿ ಹೆಡ್ ಕಾನ್ಸ್​ಟೇಬಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಂ ಬಾಬು ವಿರುದ್ಧ ಅವರ ಪತ್ನಿ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತರ ಕಚೇರಿ ಹಾಗೂ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಹಿಂದೆ ವರ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಬು, ಪ್ರಕರಣವೊಂದರ ಸಲುವಾಗಿ ನಾನು ದೂರು ನೀಡಲು ಹೋಗಿದ್ದಾಗ ಪರಿಚಯವಾಗಿದ್ದರು. ನಂತರ ತನ್ನನ್ನು ನಂಬಿಸಿ ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು ಬಳಿಕ‌ ವಿವಾಹವಾಗಿದ್ದಾರೆ. ಬಳಿಕ ಗಿರಿನಗರ ಠಾಣೆ ವ್ಯಾಪ್ತಿಯ ಡಿಸೋಜ ನಗರದಲ್ಲಿ ನಾವು ವಾಸವಿದ್ದೇವೆ. ಆದರೆ ಪ್ರತಿನಿತ್ಯ ನಮ್ಮಿಬ್ಬರು ಮಕ್ಕಳ ಮುಂದೆಯೇ ಅವಾಚ್ಯವಾಗಿ ನಿಂದಿಸುತ್ತಾನೆ. ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಡನ ವಿರುದ್ಧವೇ ಪತ್ನಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತನ್ನ ತಾಯಿಗೂ ಕಪಾಳಮೋಕ್ಷ ಮಾಡಿದ್ದಾರೆ ಎಂದು ದೂರಿರುವ ಪತ್ನಿ, ಕಾನ್ಸ್​ಟೇಬಲ್ ಬಾಬು ಮೂರ್ನಾಲ್ಕು ಮದುವೆಯಾಗಿದ್ದಾರೆ. ಅಲ್ಲದೆ, ಸರ್ಕಾರಿ ಕೆಲಸದಲ್ಲಿದ್ದುಕೊಂಡೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದಾರೆ ಎಂದು ದೂರಿನಲ್ಲಿ ಪತ್ನಿ ಉಲ್ಲೇಖಿಸಿದ್ದಾರೆ.

ಸದ್ಯ ಗಂಡನ ಕಿರುಕುಳದಿಂದ ಬಲಗೈ ಸ್ವಾಧೀನವಿಲ್ಲದೇ ಕೆಲಸ ಮಾಡಲು ಸಹ ಅಶಕ್ತಳಾಗಿದ್ದು, ಆತನಿಂದ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ:ಪೊಲೀಸರ ಚೇಸ್​ಗೆ ಹೆದರಿ ಗಾಂಜಾ ಸಾಗಿಸುತ್ತಿದ್ದ ಕಾರನ್ನು ಕೆರೆಗೆ ನುಗ್ಗಿಸಿದ ಚಾಲಕ

For All Latest Updates

TAGGED:

ABOUT THE AUTHOR

...view details