ಬೆಂಗಳೂರು:ಮತ್ತು ಬರುವ ಔಷಧಿ ನೀಡಿ ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಆರೋಪದಡಿ 73 ವರ್ಷದ ವೃದ್ಧನನ್ನು ಥಳಿಸಿ, ಬಾಲಕಿ ಮನೆಯವರೇ ಕೊಲೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಕುಪ್ಪಣ್ಣ ಮೃತ ವೃದ್ಧ. ಹಲವು ವರ್ಷಗಳಿಂದ ನಗರದ ಬಾಬುಸಾಪಾಳ್ಯದಲ್ಲಿ ಇವರು ವಾಸವಾಗಿದ್ದ. ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು. ವೃದ್ಧನ ಮನೆಯ ಸಮೀಪದಲ್ಲೇ ಬಾಲಕಿಯ ಮನೆಯಿದ್ದು, ಭಾನುವಾರ ಸಂಜೆ ಒಣಗಲು ಹಾಕಿದ್ದ ಶಾಲಾ ಸಮವಸ್ತ್ರ ತೆಗೆದುಕೊಳ್ಳಲು ಬಂದಾಗ ಕುಪ್ಪಣ್ಣ ಬಾಲಕಿಯನ್ನು ಮಾತನಾಡಿಸಿದ್ದಾರೆ ಎನ್ನಲಾಗ್ತಿದೆ. ಬಳಿಕ ಪಾನೀಯದಲ್ಲಿ ಮತ್ತು ಬರುವ ಔಷಧಿ ಮಿಶ್ರಣ ಮಾಡಿ ಕುಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿ ಅರೆಪ್ರಜ್ಞೆಯಲ್ಲಿ ಇರುವಾಗ ಮನೆಗೆ ಕರೆದೊಯ್ದು ಆತ್ಯಾಚಾರವೆಸಗಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.