ಕರ್ನಾಟಕ

karnataka

ETV Bharat / state

ಆ್ಯಸಿಡ್ ನಾಗನಿಗೆ ಗ್ಯಾಂಗ್ರಿನ್ ಲಕ್ಷಣ: ಬರೀ ಕಾಲಲ್ಲ, ಇಡೀ ದೇಹವೇ ಕೊಳೆತು ಹೋಗಬೇಕೆಂದ ಸಂತ್ರಸ್ತೆ - ಆ್ಯಸಿಡ್ ನಾಗನಿಗೆ ಗ್ಯಾಂಗ್ರಿನ್ ಲಕ್ಷಣ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣದ ದುರುಳ ನಾಗೇಶ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಆತ ತನ್ನ ಒಂದು ಕಾಲನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದು, ವಿಚಾರ ತಿಳಿಯುತ್ತಿದ್ದಂತೆ ಸಂತ್ರಸ್ತೆ ಪ್ರತಿಕ್ರಿಯಿಸಿದರು.

acid naga
ಆ್ಯಸಿಡ್ ನಾಗನಿಗೆ ಗ್ಯಾಂಗ್ರಿನ್ ಲಕ್ಷಣ

By

Published : Nov 7, 2022, 10:44 AM IST

ಬೆಂಗಳೂರು: ಅಮಾಯಕ ಯುವತಿಯೊಬ್ಬಳ ಮೇಲೆ ಪರಮ ಪಾಪಿಯೊಬ್ಬ ಆ್ಯಸಿಡ್ ಎರಚಿ ಅಟ್ಟಹಾಸ ಮೆರೆದಿದ್ದ ಘಟನೆ ಇಡೀ ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿತ್ತು. ಇತ್ತ ಸುಟ್ಟ ದೇಹದಿಂದ ನರಳಿ ನರಳಿ ಯುವತಿ ಚೇತರಿಸಿಕೊಳ್ಳುತ್ತಿದ್ದರೆ, ಅತ್ತ ಆರೋಪಿ ನಡೆದಾಡುವುದಕ್ಕೂ ಆಗದೆ ನರಳಾಡ್ತಿದ್ದಾನೆ. ಜೊತೆಗೆ ಆತ ಒಂದು ಕಾಲನ್ನೇ ಕಳೆದುಕೊಳ್ಳುವ ಹಂತದಲ್ಲಿದ್ದಾನೆ.

ಕಳೆದ ಏಪ್ರಿಲ್ 28 ರಂದು ಬೆಂಗಳೂರಿನ ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಚೇರಿ ಎದುರು ಹೀನ ಕೃತ್ಯವೊಂದು ನಡೆದಿತ್ತು. ಯುವತಿಯೊಬ್ಬಳ ಮೇಲೆ ಆ್ಯಸಿಡ್ ಎರಚಿದ ದುರುಳ ನಾಗೇಶ ಎಂಬಾತ ಪರಾರಿಯಾಗಿದ್ದ. ಸ್ವಾಮೀಜಿ ವೇಷದಲ್ಲಿದ್ದ ಆತನನ್ನು ಪತ್ತೆ ಹಚ್ಚಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಕಾಲಿಗೆ ‌ಗುಂಡೇಟು ನೀಡಿ ಬಂಧಿಸಿದ್ದರು.

ಆ್ಯಸಿಡ್ ನಾಗನಿಗೆ ಗ್ಯಾಂಗ್ರಿನ್ ಲಕ್ಷಣ:ಅಂದು ಅಟ್ಟಹಾಸ ಮೆರೆದು ಜೈಲು ಸೇರಿರುವ ನಾಗೇಶ ಈಗ ನಡೆದಾಡೋದಕ್ಕೂ ಆಗದ ಸ್ಥಿತಿಯಲ್ಲಿದ್ದಾನೆ. ಪೊಲೀಸರು ಕಾಲಿಗೆ ಶೂಟ್ ಮಾಡಿದ್ದ ಜಾಗದಲ್ಲಿ ಗ್ಯಾಂಗ್ರಿನ್ ಲಕ್ಷಣಗಳು ಕಾಣಿಸಿಕೊಳ್ತಿದೆಯಂತೆ. ಕೋರ್ಟ್​ಗೆ ಹಾಜರಾಗಲು ಬಂದಾಗ ಸಹ ಕುಂಟುತ್ತಾ ಬಂದಿದ್ದ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ

ಇದನ್ನೂ ಓದಿ:ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ..ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

ಕಳೆದ ಆರು ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆ ಕಾಡ್ತಿದ್ದು, ವಿಕ್ಟೋರಿಯಾ ಆಸ್ಪತ್ರೆ ಮತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆದ್ರೂ ಗಾಯದ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ. ಸದ್ಯಕ್ಕೆ ಜೈಲು ವಾರ್ಡ್​ನಲ್ಲೇ ಇರುವ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಜೊತೆಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ.

ಇದನ್ನೂ ಓದಿ:ಆ್ಯಸಿಡ್ ದಾಳಿ: ಯುವತಿ ಆರೋಗ್ಯದಲ್ಲಿ ಚೇತರಿಕೆ, ಗ್ಯಾಂಗ್ರಿನ್​ನಿಂದ ಬಳಲುತ್ತಿರುವ ಆರೋಪಿ

ಬರೀ ಕಾಲಲ್ಲ, ಇಡೀ ದೇಹವೇ ಕೊಳೆತು ಹೋಗಲಿ- ಸಂತ್ರಸ್ತೆ:ಈ ವಿಚಾರ ತಿಳಿಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ, "ಪರಮ ಪಾಪಿಗೆ ದೇವರೇ ಸರಿಯಾದ ಶಿಕ್ಷೆ ಕೊಟ್ಟಿದ್ದಾನೆ. ಆದ್ರೆ, ಇಷ್ಟೇ ಸಾಲದು. ಆತನಿಗೆ ಇನ್ನೂ ಹೆಚ್ಚಿನ ಶಿಕ್ಷೆಯಾಗಬೇಕು. ಯಾವ ಹುಡುಗಿಯರಿಗೂ ಹೀಗೆ ಆಗಬಾರದು. ನಾನು ಆಸ್ಪತ್ರೆಯಲ್ಲಿ ಮೂರು ತಿಂಗಳಿಂದ ನೋವು ಅನುಭವಿಸಿದ್ದೇನೆ. ಈಗಲೂ ನೋವು ಅನುಭವಿಸ್ತಿದ್ದೇನೆ. ಅದೇ ನೋವು ಆತನಿಗೂ ಗೊತ್ತಾಗಬೇಕು. ಆತನ ಮೈಯೆಲ್ಲವೂ ಕೊಳೆತು ಹೋಗಬೇಕು, ನೋವು ಏನು ಅನ್ನೋದು ಗೊತ್ತಾಗಬೇಕು. ಬರೀ ಒಂದು ಕಾಲಲ್ಲ, ಕಾನೂನು ಪ್ರಕಾರವೂ ಶಿಕ್ಷೆ ಕೊಡಿಸಬೇಕು. ನನಗೆ ದೇವರ ಮೇಲೆ ನಂಬಿಕೆ ಇದೆ, ದೇವರೇ ಶಿಕ್ಷೆ ನೀಡಿದ್ದಾನೆ" ಎಂದರು.

ABOUT THE AUTHOR

...view details