ಕರ್ನಾಟಕ

karnataka

By

Published : Nov 5, 2019, 1:40 AM IST

ETV Bharat / state

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ

ಆನೇಕಲ್ ಶಕ್ತಿ ಸೌಧದಲ್ಲಿ ಸರ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಎನ್. ಎಸ್. ಜಯಪ್ರಕಾಶ್, ಲಂಚ ಸ್ವಿಕರಿಸುವಾಗ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ವೇಯರ್

ಬೆಂಗಳೂರು :ಆನೇಕಲ್ ಸರ್ವೆ ಇಲಾಖೆ ಅಧಿಕಾರಿ ಎನ್​. ಎಸ್​. ಜಯಪ್ರಕಾಶ್ ಲಂಚ ಸ್ವೀಕರಿಸುವಾಗ ​ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆನೇಕಲ್ ತಾಲೂಕಿನ ಮಾರನಾಯಕನಹಳ್ಳಿ ಗ್ರಾಮದ ನಿವಾಸಿ ನೀಡಿದ ದೂರಿನ ಅನ್ವಯ ಎಸಿಬಿ ಅಧಿಕಾರಿಗಳುದಾಳಿ ನಡೆಸಿದ್ದಾರೆ. ಆನೇಕಲ್ ಶಕ್ತಿ ಸೌಧದಲ್ಲಿ ಸರ್ವೆ ಇಲಾಖೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಎನ್. ಎಸ್. ಜಯಪ್ರಕಾಶ್ ಲಂಚ ಸ್ವಿಕರಿಸುವಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ

ಘಟನೆ ವಿವರ...

ಶಿವರಾಜ್ ಕುಮಾರ್ ಎಂಬವವರ ಅತ್ತಿಗೆ ಧನಲಕ್ಷ್ಮಿಗೆ ಆಕೆಯ ತಂದೆಯಿಂದ ಕೋರ್ಟ್ ಧಾವೆಯ ಆದೇಶದಂತೆ ಜಮೀನು ಬರಬೇಕಿತ್ತು. ಅದರ ಪೋಡಿಗಾಗಿ ಲೆವೆನ್ ಇ ಸ್ಕೆಚ್ ಮಾಡಿಸಲು ಆನೇಕಲ್ ಸರ್ವೆ ಇಲಾಖೆಯ ಎಡಿಎಲ್ಆರ್ ಆಯ್ಕೆಯಂತೆ ಎನ್. ಎಸ್. ಜಯಪ್ರಕಾಶ್​ಗೆ ಜವಾಬ್ದಾರಿ ವಹಿಸಲಾಗಿತ್ತು. ಸ್ಕೆಚ್ ಮಾಡಲು ಶಿವರಾಜ್ ಕುಮಾರ್​ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅಂತಿಮವಾಗಿ 28. ಸಾವಿರ ರೂ.ಗಳಿಗೆ ವ್ಯವಹಾರ ಕುದುರಿತ್ತು.

ಇಂದು ಹಣವನ್ನು ನಗದು ರೂಪದಲ್ಲಿ ಪಡೆಯುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್​ಪಿ ಗೋಪಾಲ ರೋಹಿತ್, ಸಿಐ ಕುಮಾರಸ್ವಾಮಿ, ಎಸ್ಐ ಮಧುಕುಮಾರ್ ತಂಡದ ಬಲೆಗೆ ಜಯಪ್ರಕಾಶ್​ ಸಿಕ್ಕಿ ಬಿದ್ದಿದ್ದಾನೆ.

For All Latest Updates

TAGGED:

ABOUT THE AUTHOR

...view details