ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿ ಚಟುವಟಿಕೆ ನಿಯಂತ್ರಣಕ್ಕೆ ತರಲು ನಗರ ಪೊಲೀಸರು ಮುಂದಾಗಿದ್ದು, ಒಂದೇ ತಿಂಗಳಲ್ಲಿ 7 ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿನಯ್ ಕುಮಾರ್ ಮಿಂಡ, ದಯಾನಂದ್ ಅಮಿಯಾಸ್‌ನಂದ, ಶ್ರೀಕಾಂತ ಅಲಿಯಾಸ್ ಊಸ, ಖಲೀಲ್ ಅಹಮ್ಮದ್ ಅಲಿಯಾಸ್ ಡೈನಮೆಂಟ್ ಖಲೀಲ್, ಸುಹೇಲ್ ಅಲಿಯಾಸ್ ಗಾರ್ಡನ್, ರಿಜ್ವಾನ್ ಕುಳ್ಳ ಅಲಿಯಾಸ್ ರಿಜ್ವಾ, ಅನಿಸ್ ಅಹಮ್ಮ ಗೂಂಡಾ ಕಾಯ್ದೆಯಡಿ ಉಲ್ಲೇಖವಾದ ಹೆಸರುಗಳು.
ನಗರದಲ್ಲಿ ರೌಡಿಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಬಾರದೆಂದು ಕೇಂದ್ರ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.
ವಿನಯ್ ಕುಮಾರ್ ಅಲಿಯಾಸ್ ಮಿಂಡ, ಈತ ಕಳೆದ 10 ವರ್ಷಗಳಿಂದ ಮಹಾಲಕ್ಷ್ಮಿ ಲೇಔಟ್, ರಾಜಗೋಪಲನಗರ, ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ 17 ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ. ಹೀಗಾಗಿ 2015ರಲ್ಲಿ ಒಂದು ವರ್ಷ ಗೂಂಡಾ ಕಾಯ್ದೆಯಡಿ ಬಂಧಿಸಿ ಬಿಡುಗಡೆ ಮಾಡಿದ ನಂತರ ಕಳೆದ 3 ವರ್ಷದಲ್ಲಿ 6 ಗಂಭೀರ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.
ದಯಾನಂದ್ ಅಲಿಯಾಸ್ ನಂದ, ಈತ ಅಶೋಕನಗರ ಮತ್ತು ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಒಟ್ಟು 13 ಪ್ರಕರಣ ಈತನ ಮೇಲಿದೆ.