ಬೆಂಗಳೂರು :ರಾಜ್ಯದಲ್ಲಿಂದು 438 ಮಂದಿಗೆ ಕೊರೊನಾ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,46,076ಕ್ಕೆ ಏರಿಕೆ ಆಗಿದೆ.
6 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,273ಕ್ಕೆ ಏರಿದೆ. 344 ಮಂದಿ ಗುಣಮುಖರಾಗಿದ್ದು 9,27,924 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5860 ಇದ್ದು, 125 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಕರಣಗಳ ಶೇಕಡವಾರು 0.93%ರಷ್ಟು ಇದ್ದರೆ, ಮೃತ ಪಟ್ಟವರ ಪ್ರಮಾಣ ಶೇ.1.36%ರಷ್ಟು ಇದೆ. ಯುಕೆಯಿಂದ ಬಂದ 63 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.