ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ವಿದ್ಯಾರ್ಥಿಗಳು ಮೊದಲ ದಿನ ಶಾಲಾ - ಕಾಲೇಜು ಬಾಗಿಲು ತಲುಪಿದರು. ಇಂದಿನಿಂದ ಹೈಸ್ಕೂಲ್ ಹಾಗೂ ಪಿಯು ಕಾಲೇಜು ಆರಂಭಗೊಂಡಿದ್ದು, ಹಲವೆಡೆ ಅದ್ಧೂರಿ ಸ್ವಾಗತ ಎಲ್ಲವೂ ಸಿಕ್ಕಿದೆ. ಆದರೆ, ಕೋವಿಡ್ ಕಾರಣಕ್ಕಾಗಿ ಪೋಷಕರು ವಿದ್ಯಾರ್ಥಿಗಳನ್ನ ಶಾಲೆಗಳಿಗೆ ಕಳುಹಿಸಲು ಮೊದಲ ದಿನ ಹಿಂದೇಟು ಹಾಕಿದ್ದಾರೆ.
ಹಾಜರಾತಿಯ ಅಂಕಿ - ಅಂಶವೇ ಈ ಮಾತನ್ನು ದೃಢಪಡಿಸಿದೆ. 9, 10 ಹಾಗೂ ಪ್ರಥಮ ಪಿಯುಸಿ ಆನ್ಲೈನ್ ಆದರೆ ದ್ವಿತೀಯ ಪಿಯುಸಿಗೆ ಭೌತಿಕ ತರಗತಿ ಶುರುವಾಗಿದೆ. 9ನೇ ತರಗತಿಯಲ್ಲಿ 1,88,077 ( ಶೇ 19.56) , 10ನೇ ತರಗತಿಗೆ 2,03,777 (ಶೇ 21.08) ವಿದ್ಯಾರ್ಥಿಗಳು ಸೇರಿ ಒಟ್ಟಾರೆ ರಾಜ್ಯದಲ್ಲಿಂದು ಭೌತಿಕ ತರಗತಿಗೆ 3,91,854 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ರಾಜ್ಯಾದ್ಯಂತ ಕೇವಲ 8 ಜಿಲ್ಲೆಗಳು ಮಾತ್ರ ಹಾಜರಾತಿ ಪ್ರಮಾಣ ಶೇ. 40ಕ್ಕಿಂತ ಹೆಚ್ಚು ದಾಟಿದೆ. ಉಳಿದಂತ ಜಿಲ್ಲೆಗಳಲ್ಲಿ ಶೇ.10 ಒಳಗೆ ಇದೆ ಎಂದು ಅಂಕಿ- ಅಂಶಗಳಿಂದ ದೃಢವಾಗಿದೆ.
10ನೇ ತರಗತಿಗೆ ಬೆಳಗಾವಿ ಚಿಕ್ಕೂಡಿಯಲ್ಲಿ ಶೇ. 51.96 , ಚಿತ್ರದುರ್ಗದಲ್ಲಿ ಶೇ48.48, ಮಂಡ್ಯ ಶೇ 43.85, ತುಮಕೂರಿನ ಮಧುಗಿರಿ ಶೇ50.72 ಹಾಗೂ ಉತ್ತರಕನ್ನಡ ಜಿಲ್ಲೆಯ ಶಿರಸಿ ಶೇ 42.83, ಉತ್ತರ ಕನ್ನಡ ಶೇ 54.07, ರಾಮನಗರ ಶೇ 43.88 , ಬೆಂ.ಗ್ರಾಮಾಂತರ ಶೇ 41.80 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಡೆಂಜರ್ ಜೋನ್ ಜಿಲ್ಲೆಗಳಲ್ಲಿ ಭೌತಿಕ ತರಗತಿ ಬಂದ್- ಆನ್ ಲೈನ್ ಕ್ಲಾಸ್ ಗೂ ಬಾರದ ವಿದ್ಯಾರ್ಥಿಗಳು :
ಇನ್ನು ಪಾಸಿಟಿವ್ ರೇಟ್ ಹೆಚ್ಚಿರುವ ಜಿಲ್ಲೆಗಳಲ್ಲಿ ಭೌತಿಕ ತರಗತಿ ಆರಂಭಕ್ಕೆ ಬ್ರೇಕ್ ಹಾಕಲಾಗಿದೆ. ಬದಲಿಗೆ ಆನ್ಲೈನ್ ಪಾಠಕ್ಕೆ ಅವಕಾಶ ಕಲ್ಪಿಸಲಾಗಿದೆ. ಡೆಂಜರ್ ಜೋನ್ ನಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಕೊಡುಗು, ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಆನ್ಲೈನ್ ಕ್ಲಾಸ್ ಹಾಜರಾತಿಯು ಶೂನ್ಯವಿದೆ.
ಕೇವಲ ಬೆರಳಣಿಕಯಷ್ಟು ಮಾತ್ರ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 9ನೇ ತರಗತಿಯ ಆನ್ ಲೈನ್ ಕ್ಲಾಸ್ ಗೆ ಚಿಕ್ಕಮಗಳೂರು, ಹಾಸನ,ಕೊಡಗು ಶೂನ್ಯವಿದ್ದರೆ ಇತ್ತ ಉಡುಪಿಯಲ್ಲಿ 36 ವಿದ್ಯಾರ್ಥಿಗಳು ಹಾಗೂ ದಕ್ಷಿಣ ಕನ್ನಡದಲ್ಲಿ 768 ಹಾಗೂ ಆಫ್ ಲೈನ್ ನಲ್ಲಿ 58 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
10ನೇ ತರಗತಿಯ ಚಿಕ್ಕಮಗಳೂರು ಭೌತಿಕ ತರಗತಿಗೆ 10 ವಿದ್ಯಾರ್ಥಿಗಳು ಹಾಜರಾಗಿದ್ದರೆ, ಆನ್ಲೈನ್ ಕ್ಲಾಸ್ ಗೆ ಒಬ್ಬರು ಇಲ್ಲ. ಕೊಡಗು ಜಿಲ್ಲೆಯಲ್ಲೂ ಶೂನ್ಯವಿದೆ. ದಕ್ಷಿಣ ಕನ್ನಡದಲ್ಲಿ 375 ಹಾಗೂ ಆಫ್ ಲೈನ್ ನಲ್ಲಿ 65 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಹಾಸನದಲ್ಲಿ ಆನ್ ಲೈನ್ ಕ್ಲಾಸ್ಗೆ 45 ವಿದ್ಯಾರ್ಥಿಗಳು, ಉಡುಪಿ 30 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಪಿಯುಸಿಯಲ್ಲಿ ಶೇ. 36 ರಷ್ಟು ವಿದ್ಯಾರ್ಥಿಗಳು ಮೊದಲ ದಿನ ಹಾಜರು : ಆನ್ಲೈನ್ ಗಿಂತ ಆಫ್ ಲೈನ್ ನಲ್ಲೇ ಹೆಚ್ಚು
ಇನ್ನು, ಪ್ರಥಮ ಪಿಯುಸಿ ದಾಖಲಾತಿ ಮುಂದುವರೆದಿರುವುದರಿಂದ ಆ ವಿದ್ಯಾರ್ಥಿಗಳಿಗೆಲ್ಲ ಆನ್ಲೈನ್ ತರಗತಿ ಮಾತ್ರ ಆರಂಭವಾಗಿದೆ. ಸದ್ಯ ಎಲ್ಲೂ ಭೌತಿಕ ತರಗತಿ ಶುರುವಾಗಿಲ್ಲ. ಇನ್ನು ದ್ವಿತೀಯ ಪಿಯುಸಿಗೆ ರಾಜ್ಯಾದ್ಯಂತ ಶೇಕಡಾ 36 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ರಾಜ್ಯದಲ್ಲಿ 6,06,154 ವಿದ್ಯಾರ್ಥಿಗಳಲ್ಲಿ ಆನ್ ಲೈನ್ ಕ್ಲಾಸ್ ಗೆ 39,111 ಹಾಗೂ ಆಫ್ ಲೈನ್ ಕ್ಲಾಸ್ (ಭೌತಿಕ ತರಗತಿ) 1,76,319 ವಿದ್ಯಾರ್ಥಿಗಳು ಸೇರಿ ಒಟ್ಟಾರೆ 2,15,430 ವಿದ್ಯಾರ್ಥಿಗಳು ಹಾಜರಾಗಿದ್ದರೆ 3,90,724 ಗೈರು ಹಾಜರಾಗಿದ್ದಾರೆ.
ಅತಿ ಹೆಚ್ಚು ಹಾಜರಾತಿ ಹೊಂದಿದ ಜಿಲ್ಲೆಗಳು :
- ಬೆಂಗಳೂರು ಗ್ರಾಮಾಂತರ ಶೇ.78
- ಕೋಲಾರ- ಶೇ 64
- ಚಾಮರಾಜನಗರ- ಶೇ 63
- ಹಾವೇರಿ- ಶೇ60
- ರಾಯಚೂರು- ಶೇ 57
- ಶಿವಮೊಗ್ಗ- ಶೇ 53
- ಬಾಗಲಕೋಟೆ- ಶೇ 52
- ರಾಮನಗರ- ಶೇ 51
- ಗದಗ- ಶೇ 51
- ಚಿಕ್ಕಬಳ್ಳಾಪುರ- ಶೇ 51
ಇದನ್ನೂ ಓದಿ : ನನ್ನ ತಾಯಿಗೂ ಮಾರಕ ಕ್ಯಾನ್ಸರ್ ಇತ್ತು.. ಆದರೆ, ಆಗ ಟೆಕ್ನಾಲಜಿ ಇರಲಿಲ್ಲ.. ಸಿಎಂ ಬಸವರಾಜ ಬೊಮ್ಮಾಯಿ