ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ನಿಧಾನವಾಗಿ ಕೊರೊನಾ ಇಳಿಮುಖ: ಇಲ್ಲಿದೆ ಇಂದಿನ ರಿಪೋರ್ಟ್​ - 1913 people infected by corona in state

ಕೊರೊನಾ ವೈರಸ್ ಸೋಂಕಿಗೆ ಈವರೆಗೆ ರಾಜ್ಯದಲ್ಲಿ ಮೃತರಾದವರ ಸಂಖ್ಯೆ 35,944ಕ್ಕೆ ಏರಿಕೆ ಕಂಡಿದ್ದು, ಇಂದು 48 ಮಂದಿ ಜೀವ ಬಿಟ್ಟಿದ್ದಾರೆ.

corona
ಕೊರೊನಾ

By

Published : Jul 13, 2021, 8:14 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಧಾನವಾಗಿ ಇಳಿಮುಖವಾಗುತ್ತಿದೆ. ಈ ದಿನ 1,913 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ವೇಳೆ ಒಂದೇ ದಿನ 2.489 ಜನ ಗುಣಮುಖರಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಸದ್ಯ ಸಕ್ರಿಯವಾಗಿರುವ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 34,234ಕ್ಕೆ ಇಳಿಕೆ ಕಂಡಿದೆ. ರಾಜ್ಯಾದ್ಯಂತ ಈವರೆಗೂ ವೈರಸ್​ನಿಂದ ಗುಣಮುಖರಾದವರ ಸಂಖ್ಯೆ 28,04,396ಕ್ಕೆ ಏರಿಕೆ ಕಂಡಿದೆ.

ಕೋವಿಡ್​-19 ಸೋಂಕಿಗೆ ಈವರೆಗೆ ರಾಜ್ಯದಲ್ಲಿ ಮೃತರಾದವರ ಸಂಖ್ಯೆ 35,944ಕ್ಕೆ ಏರಿಕೆ ಕಂಡಿದ್ದು, ಇಂದು 48 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಈವರೆಗೂ ಕೊರೊನಾ ಸೋಂಕಿತರ ಸಂಖ್ಯೆ 28,74,597ಕ್ಕೆ ಏರಿಕೆ ಕಂಡಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 1.53 ರಷ್ಟಿದೆ. ಇನ್ನು ಮರಣ ಪ್ರಮಾಣ ಶೇ. 2.50ರಷ್ಟಿದೆ. ಇಂದು 1,24,594 ಜನರಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದ್ದು, ಯುಕೆಯಿಂದ 05 ಪ್ರಯಾಣಿಕರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಇಳಿಕೆಯ ಪರ್ವ.. ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ABOUT THE AUTHOR

...view details