ಬೆಂಗಳೂರು:ದೇಶಾದ್ಯಂತ ರಕ್ಕಸ ಕೊರೊನಾ ಆರ್ಭಟ ಜೋರಾಗಿದ್ದು, ರಾಜ್ಯದಲ್ಲೂ ಇದು ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇಂದು ಹೊಸದಾಗಿ 16 ಕೇಸ್ ಪತ್ತೆಯಾಗಿವೆ.
ಕಳೆದ 24 ಗಂಟೆಗಳಲ್ಲಿ 16 ಹೊಸ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 197ಕ್ಕೆ ಏರಿದೆ. ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹೊಸ ಸೋಂಕಿತರಲ್ಲಿ 10 ಮಂದಿ ಈಗಾಗಲೇ ವೈರಸ್ ಕಾಣಿಸಿಕೊಂಡವರ ಸಂಪರ್ಕ ಹೊಂದಿದ್ದರು ಎಂಬುದು ಗಮನಾರ್ಹ ಸಂಗತಿ.
ಎಲ್ಲಿ ಎಷ್ಟು ಕೇಸ್!?
- ಬೆಂಗಳೂರು : 05
- ಬೆಳಗಾವಿ: 03
- ಬಾಗಲಕೋಟೆ: 03
- ಧಾರವಾಡ: 01
- ಮಂಡ್ಯ: 01
- ಮೈಸೂರು: 02
- ಚಿಕ್ಕಬಳ್ಳಾಪುರ: 01
30 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಗಿ ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದೆ.
16 ಸೋಂಕಿತರ ಟ್ರಾವೆಲ್ ಹಿಸ್ಟರಿ:
- ರೋಗಿ-182: ಬೆಳಗಾವಿಯ 50 ವರ್ಷದ ವ್ಯಕ್ತಿ, ರೋಗಿ-128ರ (ತಂದೆ) ಸಂಪರ್ಕಿತ, ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-183: ಮೈಸೂರಿನ 55 ವರ್ಷದ ವ್ಯಕ್ತಿ, ರೋಗಿ-104,159 ರ (ತಂದೆ) ಸಂಪರ್ಕಿತ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-184: ಮೈಸೂರಿನ 68 ವರ್ಷದ ವ್ಯಕ್ತಿ, ರೋಗಿ-159 ರ (ತಂದೆ) ಸಂಪರ್ಕಿತ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-185: ಮಂಡ್ಯದ 32 ವರ್ಷದ ವ್ಯಕ್ತಿ, ರೋಗಿ-178 ರ ಸಹ ಪ್ರಯಾಣಿಕ,ಫಾರ್ಮಾ ಕಂಪನಿ ಉದ್ಯೋಗಿ, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-186: ಬಾಗಲಕೋಟೆ 4 ವರ್ಷದ ಗಂಡು ಶಿಶು, ರೋಗಿ-165 ರ (ಮಗ) ಸಂಪರ್ಕಿತ, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-187: ಬಾಗಲಕೋಟೆ 13 ವರ್ಷದ ಬಾಲಕ, ರೋಗಿ-165 ರ ಸಂಬಂಧಿ, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-188: ಬಾಗಲಕೋಟೆ 09 ವರ್ಷದ ಬಾಲಕಿ, ರೋಗಿ-165 ರ ಸಂಬಂಧಿ, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-189: ಬೆಂಗಳೂರಿನ 19 ವರ್ಷದ ಯುವತಿ, ದೆಹಲಿಗೆ ಹೋಗಿ ಬಂದ ಹಿನ್ನಲೆ ಇದೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-190: ಬೆಂಗಳೂರಿನ 27 ವರ್ಷದ ವ್ಯಕ್ತಿ, ದೆಹಲಿಗೆ ಹೋಗಿ ಬಂದ ಹಿನ್ನಲೆ ಇದೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-191: ಚಿಕ್ಕಬಳ್ಳಾಪುರದ 48 ವರ್ಷದ ಮಹಿಳೆ, ದೆಹಲಿಗೆ ಹೋಗಿ ಬಂದ ಹಿನ್ನಲೆ ಇದೆ, ರೋಗಿ-19 ಮತ್ತು 94 ರ(ಸಹೋದರಿ) ಸಂಬಂಧಿ, ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-192: ಬೆಳಗಾವಿಯ 40 ವರ್ಷದ ಮಹಿಳೆ, ರೋಗಿ-19 ಮತ್ತು 128 ರ( ತಾಯಿ) ಸಂಬಂಧಿ, ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-193: ಬೆಳಗಾವಿಯ 22 ವರ್ಷದ ಯುವಕ, ರೋಗಿ-19 ಮತ್ತು 128 ರ( ಸಹೋದರ) ಸಂಬಂಧಿ, ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-194: ಧಾರವಾಡದ 27 ವರ್ಷದ ಪುರುಷ, ದೆಹಲಿಗೆ ಹೋಗಿ ಬಂದ ಹಿನ್ನಲೆ, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-195: ಬೆಂಗಳೂರಿನ 66 ವರ್ಷದ ಪುರುಷ, ಮಣಿಪುರದಿಂದ ಬೆಂಗಳೂರಿಗೆ ಬಂದ ಹಿನ್ನಲೆ ಇದೆ, ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-196: ಬೆಂಗಳೂರಿನ 42 ವರ್ಷದ ಪುರುಷ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿಕೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
- ರೋಗಿ-197: ಬೆಂಗಳೂರಿನ 27 ವರ್ಷದ ಪುರುಷ, ದೆಹಲಿಗೆ ಹೋಗಿ ಬಂದ ಹಿನ್ನಲೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿಕೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ