ಕರ್ನಾಟಕ

karnataka

ETV Bharat / state

ಇಂಡಿಗೋ ಚೆಕ್‌ಇನ್​ನಲ್ಲಿ ಪ್ರಯಾಣಿಕನ ಬ್ಯಾಗ್ ಓಪನ್: ₹15 ಸಾವಿರ ಮೌಲ್ಯದ ವಸ್ತು ಕಳ್ಳತನ

ಇಂಡಿಗೋ ವಿಮಾನದ ಚೆಕ್ ಇನ್​ನಲ್ಲಿ 15 ಸಾವಿರ ರೂ.ಮೌಲ್ಯದ ವಸ್ತುಗಳು ಕಳ್ಳತನ. ಟ್ವೀಟ್​ ಮಾಡಿ ಬೇಸರ ವ್ಯಕ್ತಪಡಿಸಿದ ಪ್ರಯಾಣಿಕ.

By

Published : Nov 13, 2022, 2:21 PM IST

Suresh Kumar Lolla
ಸುರೇಶ್ ಕುಮಾರ್ ಲೊಲ್ಲ

ದೇವನಹಳ್ಳಿ: ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದ ಪ್ರಯಾಣಿಕ ಚೆಕ್​ ಇನ್​ನಲ್ಲಿ ಬ್ಯಾಗೇಜ್ ತೆಗೆದುಕೊಳ್ಳುವಾಗ ಬ್ಯಾಗ್ ಓಪನ್ ಆಗಿದ್ದು 15 ಸಾವಿರ ರೂ.ಮೌಲ್ಯದ ವಸ್ತುಗಳ ಕಳವಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸುರೇಶ್ ಕುಮಾರ್ ಲೊಲ್ಲ ಎಂಬುವರು ನ.12 ರಂದು ಅಹಮದಾಬಾದ್​ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆ. 6E 481 ವಿಮಾನದಲ್ಲಿ ಬೆಂಗಳೂರಿಗೆ ಬಂದ ಅವರು ಚೆಕ್ ಇನ್​​ನಲ್ಲಿ ಬ್ಯಾಗೇಜ್ ತೆಗೆದುಕೊಳ್ಳುವಾಗ ಅವರ ಬ್ಯಾಗ್ ಒಪನ್ ಆಗಿರುವುದು ಗಮನಕ್ಕೆ ಬರುತ್ತದೆ. ಬ್ಯಾಗ್​ನಲ್ಲಿದ್ದ ಬೆಲೆ ಬಾಳುವ ವಸ್ತುಗಳು ಕಳುವಾಗಿದೆ ಎನ್ನಲಾಗಿದೆ.

ಸುರೇಶ್ ಕುಮಾರ್ ಲೊಲ್ಲ

ಬೆಲೆ ಬಾಳುವ ವಸ್ತುಗಳು ಕಳವಾಗಿರುವ ಬಗ್ಗೆ ಸುರೇಶ್​ ಕುಮಾರ್ ಟ್ವೀಟ್​ ಮಾಡಿ ಬೇಸರ ವ್ಯಕ್ತಪಡಿಸಿ, ಇದು ನಿಭಾಯಿಸುವ ವಿಧಾನವೇ ಎಂದು ಪ್ರಶ್ನಿಸಿದ್ದಾರೆ. ಸುರೇಶ್ ಕುಮಾರ್ ಲೊಲ್ಲ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಇಂಡಿಗೋ ಸಂಸ್ಥೆ ವಸ್ತುಗಳು ಕಳವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಫೋರ್ಕ್, ಚಮಚ, ಟಿಫಿನ್​ನೊಂದಿಗೆ ಪ್ರಯಾಣಿಕ: ಇಂಡಿಗೋ ವಿಮಾನ ತುರ್ತು ಭೂ ಸ್ಪರ್ಶ

ABOUT THE AUTHOR

...view details