ಕರ್ನಾಟಕ

karnataka

ETV Bharat / state

ಗುಣಮಟ್ಟದಲ್ಲಿ ಕೊರತೆ: ದೊಡ್ಡಬಳ್ಳಾಪುರದಲ್ಲಿ 2 ಸಾವಿರ ಲೀ. ಹಾಲು ಚರಂಡಿ ಪಾಲು!

ದೊಡ್ಡಬಳ್ಳಾಪುರದ ಹಾಲು ಶಿಥಿಲೀಕರಣ ಘಟಕದಲ್ಲಿ ಎರಡು ಸಾವಿರ ಲೀಟರ್​ ಹಾಲನ್ನು ಚರಂಡಿಗೆ ಸುರಿಯಾಗಿದೆ. ಗುಣಮಟ್ಟದಲ್ಲಿ ಕೊರತೆ ಕಂಡುಬಂದ ಹಿನ್ನೆಲೆ ಈ ರೀತಿ ಹಾಲನ್ನು ಚರಂಡಿಗೆ ಸುರಿಯಲಾಗಿದೆ ಎಂದು ತಿಳಿದುಬಂದಿದೆ. ಬಮೂಲ್ ಸಿಬ್ಬಂದಿಯ ಈ ವರ್ತನೆ ವಿರುದ್ಧ ರೈತ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : May 25, 2021, 11:05 PM IST

ಬಮೂಲ್
ಬಮೂಲ್

ದೊಡ್ಡಬಳ್ಳಾಪುರ: ಹಾಲಿನ ಗುಣಮಟ್ಟ ಸರಿಯಿಲ್ಲವೆಂದು ತಿರಸ್ಕೃತಗೊಂಡ 2 ಸಾವಿರ ಲೀಟರ್ ಹಾಲನ್ನು ಬಮೂಲ್ ಸಿಬ್ಬಂದಿ ಚರಂಡಿಗೆ ಸುರಿದಿದ್ದಾರೆ.

ದೊಡ್ಡಬಳ್ಳಾಪುರದ ಹಾಲು ಶಿಥಿಲೀಕರಣ ಘಟಕದಲ್ಲಿ ಘಟನೆ ನಡೆದಿದ್ದು, ರೈತರಿಂದ ಸಂಗ್ರಹಿಸಿದ ಹಾಲಿನ ಗುಣಮಟ್ಟದಲ್ಲಿ ಕೊರತೆಯಿದ್ದ ಕಾರಣ ತಿರಸ್ಕೃತಗೊಂಡಿದೆ. ಹಾಗಾಗಿ ಹಾಲನ್ನು ಬಮೂಲ್ ಸಿಬ್ಬಂದಿ ಚರಂಡಿಗೆ ಸುರಿದಿದ್ದಾರೆ. ಸಿಬ್ಬಂದಿಯ ಈ ವರ್ತನೆ ವಿರುದ್ಧ ರೈತ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

2 ಸಾವಿರ ಲೀ. ಚರಂಡಿಗೆ ಸುರಿದ ಬಮೂಲ್

ಬಮೂಲ್ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ದೊಡ್ಡಬಳ್ಳಾಪುರ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲಿನ ಗುಣಮಟ್ಟದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಎಸ್​ಎನ್​ಎಫ್ 8.5 ಗಿಂತ ಕಡಿಮೆಯಾದರೆ ಹಾಲಿನ ಪುಡಿ ತಯಾರಿಸಲು ಆಗುವುದಿಲ್ಲ. ಹಾಲಿನ ಕ್ಯಾನ್​ಗಳಲ್ಲಿ ಪಾಚಿ, ಕೆಚ್ಚಲು ಬಾವು ರೋಗ ಬಂದಿರುವ ಹಸುಗಳ ಹಾಲನ್ನು ಸಹ ಹಾಕುತ್ತಿರುವುದರಿಂದ ತಿರಸ್ಕೃತವಾಗಿದೆ ಎಂದರು.

ABOUT THE AUTHOR

...view details