ದೇವನಹಳ್ಳಿ: ಕಚೇರಿ ಪೂಜೆ ಸಲುವಾಗಿ ಸಿ.ಟಿ. ರವಿ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಡಿಸಿಎಂ ಲಕ್ಷಣ ಸವದಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ನಿನ್ನೆ ರಾತ್ರಿ 11:50 ಗಂಟೆಗೆ ಹೊರಟ ವಿಮಾನದ ಮೂಲಕ ಕೆಂಪೇಗೌಡ ಏರ್ಪೋರ್ಟ್ಗೆ ಮರಳಿದರು. ಅಲ್ಲಿಂದ ನೇರವಾಗಿ ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದರು.
ಮಾಧ್ಯಮದೂಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಆತ್ಮೀಯರು ಮತ್ತು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ ದೆಹಲಿಯ ತಮ್ಮ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ಹಿನ್ನೆಲೆ ದೆಹಲಿಗೆ ಹೋಗಿ ಬಂದಿದ್ದೇನೆ. ಇದೇ ವೇಳೆ, ರೈಲ್ವೆ ಸಚಿವ ಪಿಯೂಷ್ ಗೋಯಲ್, ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರನ್ನು ಭೇಟಿ ಮಾಡಿದ್ದು, ಬೆಂಗಳೂರಿನ ರಸ್ತೆ ಅಗಲೀಕರಣಕ್ಕೆ ಏರ್ಪೋಸ್ ಮತ್ತು ಮಿಲಿಟರಿಯಿಂದ ಭೂಮಿ ನೀಡಲು ಮನವಿ ನೀಡಿ ಬಂದಿದ್ದೇನೆಂದು ತಿಳಿಸಿದರು.