ಕರ್ನಾಟಕ

karnataka

ಮಾಧ್ಯಮಗಳು ಸಮಾಜದ ಸಮಸ್ಯೆಗಳನ್ನಪರಿಹರಿಸಲು ಸಾಧ್ಯ.. ಶಾಸಕ ನಿಸರ್ಗ ನಾರಾಯಣಸ್ವಾಮಿ

ಮಾಧ್ಯಮಗಳಿಂದ ಸಮಾಜದ ಸಮಸ್ಯೆಗಳನ್ನ ಬಗೆಹರಿಸಲು ಸಾಧ್ಯ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಂದು ಅಭಿಪ್ರಾಯಪಟ್ಟರು. ಬೆಂ‌ಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡರು ಪತ್ರಕರ್ತರಿಗಾಗಿ ಪತ್ರಿಕಾ ಭವನ ನಿರ್ಮಿಸಲು ಜಾಗ ನೀಡುವುದಾಗಿ ಭರವಸೆ ನೀಡಿದರು.

By

Published : Aug 5, 2019, 7:49 PM IST

Published : Aug 5, 2019, 7:49 PM IST

journalists-day-program-in-bangalore-rural

ಬೆಂಗಳೂರು:ಇಂದು ಮಾಧ್ಯಮಗಳು ಸಮಾಜದ ಅಭಿವೃದ್ದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರಿಂದಲೇ ಕ್ಷೇತ್ರದ ಸಮಸ್ಯೆಗಳನ್ನು ತಿಳಿದು ಬಗೆಹರಿಸುತ್ತಿದ್ದೇನೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ದೇವನಹಳ್ಳಿಯ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಸಮಸ್ಯೆಗಳನ್ನು ಸುದ್ದಿ ರೂಪದಲ್ಲಿ ನೀಡಿ ಗಮನ ಸೆಳೆಯುವ ಪತ್ರಕರ್ತರೂ ಕೂಡ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಪತ್ರಕರ್ತರು ಸಮಾಜದ ಸಮಸ್ಯೆಗಳ ಬಗ್ಗೆ ವಸ್ತುನಿಷ್ಟವಾದ ವರದಿ ನೀಡಿದರೆ ಜನಪ್ರತಿನಿಧಿಗಳು, ಸರ್ಕಾರ ಕೂಡ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದ ಅವರು, ತಮ್ಮ ಕ್ಷೇತ್ರದಲ್ಲಿ ಪತ್ರಿಕಾ ವರದಿಗಳಿಂದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮ..

ಪತ್ರಕರ್ತರು ಜನರ ಮಧ್ಯೆ ಇರುವುದರಿಂದ ಅವರಿಗೆ ಎಲ್ಲಾ ರೀತಿಯ ಸಮಸ್ಯೆಗಳ ಬಗ್ಗೆಯೂ ಅರಿವು ಇರುತ್ತದೆ. ಇಂತಹ ಸಮಸ್ಯೆಗಳ ಕುರಿತು ಪತ್ರಕರ್ತರು ಪ್ರತಿಕೆಗಳ ಮೂಲಕ ಗಟ್ಟಿ ಧ್ವನಿಯಾಗಬೇಕಿದೆ. ಈ ಜಿಲ್ಲೆಯ ಪತ್ರಕರ್ತರು ಉತ್ತಮ ಕೆಲಸ‌ ಮಾಡುತ್ತಿದ್ದು, ಅವರ ಸಮಸ್ಯೆಗಳನ್ನು ನಮಗೆ ತಿಳಿಸಿದ್ದಾರೆ. ಅದನ್ನು ಈಡೇರಿಸುವ ಪ್ರಯತ್ನ ಮಾಡುವುದಾಗಿ ನಿಸರ್ಗ ನಾರಾಯಣಸ್ವಾಮಿ ಭರವಸೆ ನೀಡಿದರು.

ಬೆಂ. ಗ್ರಾಮಾಂತರ ಜಿಲ್ಲಾ ಪತ್ರಕರ್ತರಿಗೆ ಪತ್ರಿಕಾ ಭವನ!

ಇದೇ ವೇಳೆ ಬೆಂ‌. ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡರು ಮಾತನಾಡಿ, ಜಿಲ್ಲೆಯಲ್ಲಿ ಪತ್ರಿಕಾ ಮಾಧ್ಯಮದವರು ಎರಡು ಬೇಡಿಕೆ ಇಟ್ಟಿದ್ದಾರೆ. ಪತ್ರಕರ್ತರಿಗಾಗಿ ಪತ್ರಿಕಾ ಭವನ ನಿರ್ಮಾಣಕ್ಕೆ ಜಾಗ ಮತ್ತು ಖ್ಯಾತ ಖಾಯಕ ಸಿ.‌ಅಶ್ವಥ್ ಹುಟ್ಟಿದ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ‌ ಅವರ ಸ್ಮಾರಕ ನಿರ್ಮಾಣ ಮಾಡುವುದು. ಈ ಎರಡೂ ಬೇಡಿಕೆಗಳು ನಮ್ಮ ಗಮನಕ್ಕೆ ಬಂದಿದ್ದು, ಈಡೇರಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಯಾವ ಸುದ್ದಿ ಸತ್ಯ. ಯಾವುದು ಸುಳ್ಳು ಎಲ್ಲವನ್ನೂ ತಿಳಿದು ನಿಜವಾದ ಸುದ್ದಿ ನೀಡಬೇಕಿದೆ. ದಯವಿಟ್ಟು ಯಾರೂ ಬ್ಲಾಕ್‌ಮೇಲ್‌ ಮಾಡುವಂತ ಕೆಲಸ ಮಾಡಬೇಡಿ. ಮಾಧ್ಯಮ ನೈತಿಕತೆಗೆ ಬೆಲೆ‌ಕೊಡಬೇಕು. ಸುಪ್ರೀಂಕೋರ್ಟ್‌ನಲ್ಲಿ ಅನ್ಯಾಯವಾಗಿದೆ ಎಂದು ನ್ಯಾಯಮೂರ್ತಿಗಳು ನ್ಯಾಯ ಕೇಳಿಕೊಂಡು ಮಾಧ್ಯಮಗಳ‌ ಮುಂದೆ ಬಂದಿದ್ರು. ಮಾಧ್ಯಮಕ್ಕೆ ಎಷ್ಟು ದೊಡ್ಡ ಶಕ್ತಿ ಇದೆ ಎಂದು ಇದರಿಂದಲೇ ತಿಳಿಯುತ್ತದೆ ಎಂದರು.

ABOUT THE AUTHOR

...view details