ಬೆಂಗಳೂರು:ಅಂತರ್ರಾಜ್ಯ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಉತ್ಸವ ಬೆಂಗಳೂರಿನ ವೈಟ್ ಫೀಲ್ಡ್ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದು, ಸಾಂಸ್ಕೃತಿಕ ಚಟುವಟಿಕೆಗಳ ರಂಗು ಮನೆಮಾಡಿತ್ತು.
ಗಮನ ಸೆಳೆದ ಅಂತರ್ರಾಜ್ಯ ಕಾಲೇಜು ಸಾಂಸ್ಕೃತಿಕ ಉತ್ಸವ - undefined
ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಉತ್ಸವ ಬೆಂಗಳೂರಿನ ವೈಟ್ ಫೀಲ್ಡ್ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದು, ಸಾಂಸ್ಕೃತಿಕ ಚಟುವಟಿಕೆಗಳ ರಂಗು ಮನೆಮಾಡಿತ್ತು.
ಅಂತರ್ರಾಜ್ಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿ ಎಂವಿಜೆ ಕಾಲೇಜು ವತಿಯಿಂದ ಸ್ವಯಂ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿತ್ತು. ರಂಗಭೂಮಿ, ಸಂಗೀತ , ನೃತ್ಯ ಸಾಹಿತ್ಯ , ರೇಖಾಚಿತ್ರ , ಬೀದಿ ನಾಟಕ ಸೇರಿ ಒಟ್ಟಾರೆ 23 ವಿವಿಧ ಕಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಅವಕಾಶ ನೀಡಲಾಗಿತ್ತು.
ಸಾಂಸ್ಕೃತಿಕ ಉತ್ಸವದಲ್ಲಿ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಕಾಲೇಜುಗಳ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು, ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ವಿದ್ಯಾರ್ಥಿಗಳ ನೃತ್ಯ ನೆರೆದಿದ್ದವರ ಮೈ ನವಿರೇಳಿಸುವಂತಿತ್ತು.