ದೇವನಹಳ್ಳಿ: ಸಚಿವ ಸ್ಥಾನದ ಆಕಾಂಕ್ಷಿಗಳ ದಿನೇ ದಿನೇ ದೊಡ್ಡದಾಗುತ್ತಲೆ ಇದೆ. ಇದೀಗ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಸಹ ತಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನು ತಿಳಿಸಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವೈಎ ನಾರಾಯಣ ಸ್ವಾಮಿ, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಸಚಿವ ಸಂಪುಟ ರಚನೆಯ ಕಾರ್ಯವನ್ನು ಆರಂಭಸಿದ್ದಾರೆ. ಶಾಸಕರಾದ ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ, ಅದರಂತೆ ನನಗೂ ಸಹ ಇದೆ. ಆದರೆ ಎಲ್ಲರನ್ನೂ ತೃಪ್ತಿ ಪಡಿಸಿ ಎಲ್ಲಾ ಸಮುದಾಯದವರಿಗೂ ಮತ್ತು ಜಿಲ್ಲೆಗಳಿಗೂ ಪ್ರಾತಿನಿಧ್ಯ ಕೊಟ್ಟು ಸಮತೋಲನ ಸಚಿವ ಸಂಪುಟ ರಚನೆ ಮಾಡುವುದು ಒಂದು ಸವಾಲಿನ ಕೆಲಸ ಎಂದು ಒಪ್ಪಿಕೊಂಡಿದ್ದಾರೆ.
ಶಾಸಕರಾದ ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತೆ, ನನಗೂ ಇದೆ : ವೈಎ ನಾರಾಯಣಸ್ವಾಮಿ - ವಿಧಾನ ಪರಿಷತ್ ಸದಸ್ಯ ವೈಎ ನಾರಾಯಣಸ್ವಾಮಿ
ಶಾಸಕರಾದ ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ, ಅದರಂತೆ ನನಗೂ ಸಹ ಇದೆ. ಆದರೆ ಎಲ್ಲರನ್ನೂ ತೃಪ್ತಿ ಪಡಿಸಿ ಎಲ್ಲಾ ಸಮುದಾಯದವರಿಗೂ ಮತ್ತು ಜಿಲ್ಲೆಗಳಿಗೂ ಪ್ರಾತಿನಿಧ್ಯ ಕೊಟ್ಟು ಸಮತೋಲನ ಸಚಿವ ಸಂಪುಟ ರಚನೆ ಮಾಡುವುದು ಒಂದು ಸವಾಲಿನ ಕೆಲಸ ಎಂದು ಒಪ್ಪಿಕೊಂಡಿದ್ದಾರೆ.
ವೈಎ ನಾರಾಯಣಸ್ವಾಮಿ