ಕರ್ನಾಟಕ

karnataka

ETV Bharat / state

ಬಾಣಂತಿ ಹೆಂಡತಿ ಕೊಲೆ ಮಾಡಿದ ಪೊಲೀಸ್ ಗಂಡ : ವಿಷ ಸೇವಿಸಿ ಆಸ್ಪತ್ರೆಗೆ ದಾಖಲು - ಬಾಣಂತಿ ಹೆಂಡತಿಯನ್ನ ಕೊಲೆಗೈದ ಪೊಲೀಸ್ ಗಂಡ

ತನ್ನ ಕುಟುಂಬ ಸದಸ್ಯರಿಗೆ ಸರಿಯಾಗಿ ಉಪಚರಿಸಲಿಲ್ಲ ಎಂದು ಕೋಪಗೊಂಡ ಪತಿ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಬಾಣಂತಿ ಹೆಂಡತಿಯನ್ನ ಕೊಲೆಗೈದ ಪೊಲೀಸ್ ಗಂಡ
ಬಾಣಂತಿ ಹೆಂಡತಿಯನ್ನ ಕೊಲೆಗೈದ ಪೊಲೀಸ್ ಗಂಡ

By ETV Bharat Karnataka Team

Published : Nov 8, 2023, 10:17 PM IST

ಹೊಸಕೋಟೆ (ಬೆಂಗಳೂರು) : ಮಗುವಿಗೆ ನೀರು ಹಾಕುವ ಶಾಸ್ತ್ರದಲ್ಲಿ ತನ್ನ ತಾಯಿ, ಅಣ್ಣ ಅತ್ತಿಗೆಯನ್ನ ಹೆಂಡತಿಯ ಮನೆಯವರು ಸರಿಯಾಗಿ ಮಾತನಾಡಿಸಿಲ್ಲ ಎಂಬ ಕಾರಣಕ್ಕೆ, ಬಾಣಂತಿ ಹೆಂಡತಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಪೊಲೀಸ್ ಗಂಡ, ಅನಂತರ ತಾನೂ ವಿಷ ಕುಡಿದಿದ್ದು ಪೊಲೀಸರು ಆರೋಪಿಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪ್ರತಿಭಾ 23 ವರ್ಷದ ಗೃಹಿಣಿ ಗಂಡನ ಕೈಯಲ್ಲಿ ಕೊಲೆಯಾಗಿದ್ದಾಳೆ, ಆಕೆಯನ್ನು ಕೊಲೆ ಮಾಡಿದ ಕಿಶೋರ್ ವಿಷ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರತಿಭಾ 11 ದಿನಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ನಂತರ ತನ್ನ ತವರು ಮನೆಯಾದ ಹೊಸಕೋಟೆಯ ಕೊಳತ್ತೂರು ಗ್ರಾಮದಲ್ಲಿ ಇದ್ದರು. ನವೆಂಬರ್ 4ರಂದು ಮಗುವಿಗೆ ನೀರು ಹಾಕುವ ಶಾಸ್ತ್ರ ಮಾಡಲಾಗಿತ್ತು. ಈ ವೇಳೆ, ಕಿಶೋರ್​ನ ತಾಯಿ ಪುಷ್ಪಮ್ಮ, ಅಣ್ಣ ರಾಕೇಶ್, ಅತ್ತಿಗೆ ಭವ್ಯ ಸೇರಿದಂತೆ ಸಂಬಂಧಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭವ್ಯ ಮನೆಯವರು ಕಿಶೋರ್ ತಾಯಿ, ಅಣ್ಣ ಮತ್ತು ಅತ್ತಿಗೆಯನ್ನ ಸರಿಯಾಗಿ ಉಪಚರಿಸಲಿಲ್ಲ ಎಂದು ನವೆಂಬರ್ 5ನೇ ತಾರೀಖು ಪೋನ್ ಮಾಡಿ ಹೆಂಡತಿಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದ.

ನವೆಂಬರ್ 6ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಕಿಶೋರ್ ಹೆಂಡತಿಯ ತವರು ಮನೆಗೆ ಬಂದಿದ್ದ, ಮನೆಯಲ್ಲಿ ಯಾರೂ ಇರಲಿಲ್ಲ, ಈ ವೇಳೆ ಹೆಂಡತಿಯನ್ನ ಕಿತ್ತು ಹಿಸುಕಿ ಕೊಂದು, ಮನೆಯಿಂದ ಬರುವಾಗ ನಿಮ್ಮ ಮಗಳನ್ನ ಕೊಂದಿರವುದಾಗಿ ಹೇಳಿ ಪರಾರಿಯಾಗಿದ್ದ. ಘಟನೆ ನಂತರ ಆರೋಪಿ ಕಿಶೋರ್ ತನ್ನೂರಾದ ಕೋಲಾರದ ವೀರಾಪುರಕ್ಕೆ ಹೋಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನ ಹೊಸಕೋಟೆ ಎಂವಿಜಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ಹಣಕಾಸಿನ ವಿಚಾರಕ್ಕೆ ಜಗಳ: ಮಂಡ್ಯದಲ್ಲಿ ಮೇಸ್ತ್ರಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ

ಇತ್ತೀಚಿನ ಘಟನೆಗಳು:ಇದು ಹೊಸಕೋಟೆಯ ಕಥೆಯಾದರೆ,ಪತಿಯೊಬ್ಬ ತನ್ನ ಪತ್ನಿಯನ್ನು ಡಂಬಲ್ಸ್‌ನಿಂದ ಹೊಡೆದು ಕೊಲೆಗೈದ ಘಟನೆ ಬೆಂಗೂರಿನ ರಾಮಮೂರ್ತಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಪತಿರಾಯ ತನ್ನ ಹೆಂಡತಿಯನ್ನು ಕೊಲೆಗೈದಿದ್ದ. ಬಳಿಕ ಪತಿಯೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ, ರಾಮಮೂರ್ತಿನಗರ ಪೊಲೀಸರೆದುರು ಶರಣಾಗಿದ್ದ. ಲೈದಿಯಾ ಎಂಬ ಮಹಿಳೆ ಕೊಲೆಯಾಗಿದ್ದಾರೆ. ಪತಿ ಮೋರಿಸ್​ಗೆ ಪತ್ನಿಯ ಮೇಲೆ ಅನುಮಾನ ಹುಟ್ಟಿಕೊಂಡಿದ್ದು ಬೇರೊಬ್ಬ ಪರಪುರುಷನೊಂದಿಗೆ ಸಂಬಂಧವಿದೆ ಎಂದು‌ ಶಂಕಿಸಿ ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು.

ABOUT THE AUTHOR

...view details