ಕರ್ನಾಟಕ

karnataka

ETV Bharat / state

ಜೋರು ಮಳೆಗೆ ದೊಡ್ಡಬಳ್ಳಾಪುರ-ಕೊರಟಗೆರೆ ರಸ್ತೆ ಕೆಸರುಗದ್ದೆ

ಸಾಸಲು ಹೋಬಳಿಯ ಗೌಡನಕುಂಟೆ ಮಾರ್ಗವಾಗಿ ಗೊರವನಹಳ್ಳಿಗೆ ಸಂಪರ್ಕ ಕಲ್ಪಿಸುವ ಕೊರಟಗೆರೆ ಮಾರ್ಗದ ರಸ್ತೆ ಮಳೆ ಸುರಿದ ಕಾರಣ ಕೆಸರು ಗದ್ದೆಯಂತಾಗಿದೆ.

heavy-rain-in-doddaballapur
ದೊಡ್ಡಬಳ್ಳಾಪುರ-ಕೊರಟಗೆರೆ ರಸ್ತೆ ಬಂದ್

By

Published : Apr 29, 2020, 4:29 PM IST

ದೊಡ್ಡಬಳ್ಳಾಪುರ: ಲಾಕ್​​ಡೌನ್​​​ನಿಂದಾಗಿ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿ ರಾತ್ರಿ ಸುರಿದ ಮಳೆಯಿಂದ ಕೆಸರು ಗದ್ದೆಯಂತಾಗಿದೆ. ಹೀಗಾಗಿ, ದೊಡ್ಡಬಳ್ಳಾಪುರದಿಂದ ಕೊರಟಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಗೌಡನಕುಂಟೆ ಮಾರ್ಗವಾಗಿ ಗೊರವನಹಳ್ಳಿಗೆ ಸಂಪರ್ಕ ಕಲ್ಪಿಸುವ ಕೊರಟಗೆರೆ ಮಾರ್ಗದ ರಸ್ತೆಯ ಕಾಮಗಾರಿ ಲಾಕ್​​​ಡೌನ್​​ನಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿತ್ತು.

ಕೆಸರು ಗದ್ದೆಯಾದ ರಸ್ತೆ

ಲಾಕ್​ಡೌನ್​ ಆರಂಭಕ್ಕೂ ಮುನ್ನ ರಸ್ತೆ ಕಾಮಗಾರಿಗಾಗಿ ಮಣ್ಣು ಹಾಕಲಾಗಿದೆ. ಆದರೆ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿ ಹಾಕಲಾಗಿದ್ದ ಮಣ್ಣು ಕೆಸರಿನ ಗದ್ದೆಯಂತಾಗಿದೆ. ಇದರಿಂದ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಸಂಚರಿಸಲು ಪರದಾಡಬೇಕಿದೆ. ಹೀಗಾಗಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details