ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರದಲ್ಲಿ ಕಚ್ಚಾ ಬಾಂಬ್ ಸ್ಫೋಟ: ನಾಯಿ ಸಾವು - Crude bomb explosion news

ಕಸದ ರಾಶಿಯಲ್ಲಿದ್ದ ಪ್ಲಾಸ್ಟಿಕ್ ಕವರಿನ ಉಂಡೆಯನ್ನು ನಾಯಿಯೊಂದು ಆಹಾರವೆಂದು ತಿಳಿದು ತಿನ್ನುವ ವೇಳೆ ಸ್ಫೋಟಗೊಂಡ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

Dog
Dog

By

Published : Aug 5, 2020, 11:23 AM IST

Updated : Aug 5, 2020, 12:19 PM IST

ದೊಡ್ಡಬಳ್ಳಾಪುರ : ಕಚ್ಚಾ ಬಾಂಬ್ ಅನ್ನು ಆಹಾರವೆಂದು ಕಚ್ಚಿ ತಿಂದ ನಾಯಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ 7: 30ರ ವೇಳೆಗೆ ಈ ದುರಂತ ಸಂಭವಿಸಿದೆ. ಎಪಿಎಂಸಿ ಮಾರುಕಟ್ಟೆ ಬಳಿ ಕಸದ ರಾಶಿಯಲ್ಲಿದ್ದ ಪ್ಲಾಸ್ಟಿಕ್ ಕವರಿನ ಉಂಡೆಯನ್ನು ಆಹಾರ ಎಂದು ತಿಳಿದ ನಾಯಿ ಅದನ್ನು ಕಚ್ಚಿಕೊಂಡು ಪ್ರಿಯದರ್ಶಿನಿ ಬಡಾವಣೆಗೆ ಬಂದಿದೆ. ಅದನ್ನು ತಿನ್ನುವ ಸಮಯದಲ್ಲಿ ಸ್ಫೋಟಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಈ ಕುರಿತು ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ ಕಾಡು ಹಂದಿಗಳನ್ನು ಬೇಟೆಯಾಡಲು ಈ ಸ್ಫೋಟಕವನ್ನು ಬಳಸುತ್ತಾರೆ. ರೈತನೊಬ್ಬ ಈ ಸ್ಫೋಟಕವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಬೇಕಾಬಿಟ್ಟಿ ಬೀಸಾಕಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Last Updated : Aug 5, 2020, 12:19 PM IST

ABOUT THE AUTHOR

...view details