ಕರ್ನಾಟಕ

karnataka

ETV Bharat / state

ಹೆದ್ದಾರಿಯಲ್ಲಿವೆ ಅಪಾಯಕಾರಿ ಮರಗಳು: ತರವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ? - ದೇವನಹಳ್ಳಿ- ದೊಡ್ಡಬಳ್ಳಾಪುರ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ದೇವನಹಳ್ಳಿ- ದೊಡ್ಡಬಳ್ಳಾಪುರ ಮಾರ್ಗದಲ್ಲಿ ಸುಮಾರು 50ಕ್ಕೂ ಹೆಚ್ಚು ಬೇವು, ಮಳೆಮರ, ಗುಲ್‌ಮೊಹರ್‌, ನೀಲಗಿರಿ ಮರಗಳು ಒಣಗಿ ನಿಂತಿದ್ದು, ಬೀಳುವ ಹಂತದಲ್ಲಿವೆ.

ಅಪಾಯಕಾರಿ ಮರಗಳು

By

Published : Aug 18, 2019, 11:51 AM IST

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ದೇವನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಸುಮಾರು 50ಕ್ಕೂ ಹೆಚ್ಚು ಬೇವು, ಮಳೆಮರ, ಗುಲ್‌ಮೊಹರ್‌, ನೀಲಗಿರಿ ಮರಗಳು ಒಣಗಿ ನಿಂತಿದ್ದು, ಬೀಳುವ ಹಂತದಲ್ಲಿವೆ. ಈ ಮಾರ್ಗದ ರಸ್ತೆಯಲ್ಲಿ ದಿನನಿತ್ಯವೂ ಸಾವಿರಾರು ದ್ವಿಚಕ್ರ ವಾಹನ ಸವಾರರು, ಬಸ್‌, ಕಾರುಗಳು ಸಂಚರಿಸುತ್ತವೆ. ಇದರಿಂದ ವಾಹನ ಸವಾರರು ಭಯದಲ್ಲೇ ಸಂಚರಿಸುತ್ತಿದ್ದು, ಗಾಳಿ ಮಳೆಗೆ ಎಲ್ಲಿ ಮರಗಳು ಬಿದ್ದು ಅಪಾಯ ಸಂಭವಿಸುತ್ತದೆ ಅನ್ನೋ ಆತಂಕದಲ್ಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ- ದೊಡ್ಡಬಳ್ಳಾಪುರ ಮಾರ್ಗದಲ್ಲಿ ಮಾತ್ರವಲ್ಲದೇ ಇಡೀ ಜಿಲ್ಲೆಯ‌ಲ್ಲಿ ಈ ರೀತಿ ರಸ್ತೆಗಳ ಪಕ್ಕದಲ್ಲಿ ಮರಗಳು ಒಣಗಿ ನಿಂತಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ಆದರೆ ಅರಣ್ಯ ಇಲಾಖೆ ಮಾತ್ರ ಒಣಗಿದ ಮರಗಳನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿದೆ ಎನ್ನಲಾಗ್ತಿದೆ.

ಅಪಾಯಕಾರಿ ಮರಗಳು

ಮರದ ಕೆಳಭಾಗದಲ್ಲಿ ವಿದ್ಯುತ್‌ ತಂತಿಗಳು ಹಾದು ಹೋಗಿವೆ. ಮರ ಬಿದ್ದಲ್ಲಿ ವಿದ್ಯುತ್‌ ತಂತಿಗಳ ಮೇಲೆಯೇ ಬೀಳುತ್ತದೆ. ಇದರಿಂದ ನೂರಾರು ಮನೆಯ ವಿದ್ಯುತ್‌ ಸಂಪರ್ಕ ಸಹ ಕಡಿತಗೊಳ್ಳಬಹುದಾಗಿದೆ. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಮರ ತೆರವು ಕಾರ್ಯಾಚರಣೆಗೆ ಮುಂದಾಗಬೇಕಿದ್ದರೂ ಆ ಕೆಲಸ ಆಗಿಲ್ಲ.

ಹರಾಜು ಪ್ರಕ್ರಿಯೆ ಮೂಲಕ ಪರಿಹಾರ:

ಕಳೆದ ವರ್ಷ ಒಣಗಿದ ಮರಗಳನ್ನು ಕಟಾವು ಮಾಡಲು ಹರಾಜು ಹಾಕಲಾಗಿತ್ತು. ಆದರೆ ಹರಾಜು ಪಡೆದುಕೊಂಡವರು ಮರಗಳನ್ನು ತೆರವು ಮಾಡದೇ ಇದೀಗ ನಮಗೆ ಬೇಡ ಎನ್ನುತ್ತಿದ್ದಾರೆ. ಇದರಿಂದ ಮತ್ತೊಮ್ಮೆ ಹರಾಜು ಪ್ರಕ್ರಿಯೆ ಮಾಡಲಿದ್ದೇವೆ. ಇದರಲ್ಲಿ ಯಾರು ಹರಾಜಿನಲ್ಲಿ ಕಾಂಟ್ರಾಕ್ಟ್ ತೆಗದುಕೊಳ್ಳುತ್ತಾರೋ ನೋಡೋಣ. ಇಂದು ಮರಗಳಿಗೆ ಬೇಡಿಕೆ ಕಡಿಮೆ ಇದೆ. ಯಾರೂ ಕೂಡ ಒಣಗಿದ ಮರಗಳನ್ನು ತೆಗೆದುಕೊಳ್ಳುತ್ತಿಲ್ಲ. ನಮಗೆ ನಷ್ಟವಾಗುತ್ತದೆ ಎಂದು ಯಾರೂ ಹರಾಜಿಗೆ ಬರುತ್ತಿಲ್ಲ. ಯಾರೂ ಮುಂದೆ ಬಾರದೇ ಇದ್ದಲ್ಲಿ ಅರಣ್ಯ ಇಲಾಖೆಯಿಂದಲೇ ಮರಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಅರಣ್ಯ ಇಲಾಖೆಯ ಉಪ ನಿರ್ದೇಶಕರಾದ ಶ್ರೀನಿವಾಸ್ ಮೂರ್ತಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details